ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎನ್‌ಆರ್‌ಐಗಳೇ, ತವರಿನ ನಿಮ್ಮವರಿಗೆ ಚಿಟಿಕೆ ಹೊಡೆಯುವಷ್ಟರಲ್ಲಿ ಹಣ ಕಳುಹಿಸಿ!

By Staff
|
Google Oneindia Kannada News

(ನಮ್ಮ ಪ್ರತಿನಿಧಿಯಿಂದ)

ಚೆನ್ನೈ : ಬೆಳಗಿನಿಂದ ರಾತ್ರಿವರೆಗೆ ದುಡಿದು ಸುಸ್ತಾಗಿದ್ದ ಸಚಿನ್‌ ಕ್ಯಾಲಿಫೋರ್ನಿಯಾದ ತನ್ನ ಮನೆಯಲ್ಲಿ ಉಸಿರು ಹೋದಂತೆ ಮಲಗಿದ್ದ. ಮಧ್ಯರಾತ್ರಿ. ಫೋನ್‌ ಟ್ರಿಣ್ಣಿಸಿತು. ‘ಸಚಿನ್‌, ನಿನ್ನ ಹೆಂಡತಿಗೆ ಹೆರಿಗೆ ನೋವು ಶುರುವಾಗಿದೆ. ಆಸ್ಪತ್ರೆ ಖರ್ಚಿಗೆ ತಕ್ಷಣವೇ ಇನ್ನಷ್ಟು ಹಣ ಬೇಕು. ಬೇಗ ಕಳುಹಿಸು’ ಅಮ್ಮ ಕೇಳಿದ್ದೇ ತಡ, ಲೈನ್‌ ಕಟ್ಟಾಯಿತು.

ಸಚಿನ್‌ ತನ್ನ ಕಂಪ್ಯೂಟರ್‌ ಮುಂದೆ ಕೂತು, ಕೆಲವೇ ಸೆಕೆಂಡುಗಳಲ್ಲಿ ತನ್ನ ಅಮ್ಮನಿಗೆ ಢ್ರಾಫ್ಟ್‌ ಕಳುಹಿಸಿದ ! ಅವನು ಸಿಟಿ ಬ್ಯಾಂಕ್‌ನ ರುಪೀ ಚೆಕಿಂಗ್‌ ಅಕೌಂಟ್‌ (ಆರ್‌ಸಿಎ) ಹೊಂದಿದ್ದರಿಂದ ಇದು ಸಾಧ್ಯವಾಯಿತು. ತವರೂರಿನ ನಿಮ್ಮವರಿಗೆ ಸಾಗರದಾಚೆಯಲ್ಲಿರುವ ನೀವು ನೆರವಾಗಲು ಸಿಟಿ ಬ್ಯಾಂಕ್‌ ಈ ಅಪರೂಪದ ಅವಕಾಶ ಕಲ್ಪಿಸಿದೆ.

ಭಾರತದಲ್ಲಿರುವ ತಮ್ಮ ಕುಟುಂಬದವರಿಗೆ ಸುಲಭವಾಗಿ ಹಣ ಕಳುಹಿಸಲು ಅನಿವಾಸಿ ಭಾರತೀಯರಿಗಾಗಿ ಈ ಸವಲತ್ತು. ಖಾತೆ ತೆರೆಯುವುದರಿಂದ ಹಿಡಿದು ಎಲ್ಲಾ ವಹಿವಾಟುಗಳೂ ಸರಳ. ಮೂಲ ಠೇವಣಿ 1000 ಡಾಲರ್‌ ಇಟ್ಟರೆ ಸಾಕು. ಅಹ್ಮದಾಬಾದ್‌, ಬೆಂಗಳೂರು, ಬರೋಡ, ಕೊಲ್ಕತಾ, ಚೆನ್ನೈ, ದೆಹಲಿ, ಹೈದರಾಬಾದ್‌, ಜೈಪುರ, ಮುಂಬಯಿ, ಪುಣೆ, ಕೊಯಮತ್ತೂರು ಹಾಗೂ ಲುಧಿಯಾನ- ಬ್ಯಾಂಕ್‌ನ ಈ 12 ನಗರಗಳ ಯಾವುದೇ ಶಾಖೆಯಲ್ಲಿ ಖಾತೆ ತೆರೆಯಬಹುದು. ಭಾರತದ 300 ನಗರಗಳಿಗೆ ಕುರಿಯರ್‌ ಸೇವೆಯನ್ನು ಬ್ಯಾಂಕ್‌ ಉಚಿತವಾಗಿ ಕಲ್ಪಿಸಿದೆ.

ಅಮೆರಿಕಾದಲ್ಲಿ ನೀವು. ಭಾರತದಲ್ಲಿ ನಿಮ್ಮ ಪ್ರತಿನಿಧಿ. ಖಾತೆ ನಿಮ್ಮದು. ನಿಮ್ಮ ಪ್ರತಿನಿಧಿಯದೂ ಹೌದು. ಯಾಕೆಂದರೆ, ನಿಮ್ಮ ಪ್ರತಿನಿಧಿಗೆ ಆಟೋಮ್ಯಾಟಿಕ್‌ ಟೆಲ್ಲರ್‌ ಮಷೀನ್‌ (ಎಟಿಎಂ) ನ ಕಾರ್ಡ್‌ ಹಾಗೂ ಒಂದು ಚೆಕ್‌ ಪುಸ್ತಕ ಕೊಡುತ್ತಾರೆ. ಇದರಿಂದ ಹಣ ಪಡೆಯುವುದು, ಕಟ್ಟುವುದು ಸುಲಭ. ಭಾರತದ 70 ನಗರದ 700 ಕೌಂಟರ್‌ಗಳಲ್ಲಿ ಎಟಿಎಂ ಕಾರ್ಡ್‌ ಬಳಸಿ ಹಣ ಪಡೆಯಬಹುದು. ಅಷ್ಟೇ ಅಲ್ಲ, ಜಗತ್ತಿನ 4 ಲಕ್ಷಕ್ಕೂ ಹೆಚ್ಚು ಸಿರ್ರಸ್‌ ಯಂತ್ರಗಳ ಮೂಲಕ ವಿದೇಶೀ ಕರೆನ್ಸಿಯನ್ನೂ ಈ ಕಾರ್ಡ್‌ ಮೂಲಕ ತೆಗೆಯಬಹುದು.

ನೀವೂ ಯಾಕೆ ಈಗಲೇ ಖಾತೆ ತೆಗೆಯಬಾರದು? ಖಾತೆ ತೆರೆಯಲು ಕ್ಲಿಕ್ಕಿಸಿ- ಸಿಟಿಬ್ಯಾಂಕ್‌ ಆನ್‌ಲೈನ್‌

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X