ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಹಾಗೂ ಬಯೋ ಇನ್ಫರ್ಮ್ಯಾಟಿಕ್ಸ್‌ ವಿಷಯ ಓದಲು ದಾರಿ ಇಲ್ಲಿದೆ...

By Staff
|
Google Oneindia Kannada News

ಬೆಂಗಳೂರು : ಜೈವಿಕ ಮಾಹಿತಿ (ಬಯೋ ಇನ್ಫರ್ಮ್ಯಾಟಿಕ್ಸ್‌) ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಉತ್ತುಂಗಕ್ಕೇರುವ ಗುರಿ ಇಟ್ಟುಕೊಂಡಿರುವ ಕರ್ನಾಟಕ ಸರ್ಕಾರ, ಐಸಿಐಸಿಐ ಜೊತೆಗೂಡಿ ಸ್ಥಾಪಿಸಿರುವ ಜೈವಿಕ ಮಾಹಿತಿ ಮತ್ತು ಅನ್ವಯಿಕ ಜೈವಿಕ ತಂತ್ರಜ್ಞಾನ ಸಂಸ್ಥೆ (ಐಬಿಎಬಿ) ಯನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸೋಮವಾರ ರಾತ್ರಿ ಔಪಚಾರಿಕವಾಗಿ ಉದ್ಘಾಟಿಸಿದರು.

ಜೈವಿಕ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅಲ್ಪಾವಧಿ ತರಪೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ಸ್ನಾತಕೋತ್ತರ ಪದವಿ ತರಗತಿಗಳನ್ನು ನಡೆಸುವುದು ಮತ್ತು ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ಕೊಡುವುದು ಸಂಸ್ಥೆಯ ಉದ್ದೇಶ. 15 ಸಾವಿರ ಚದರ ಅಡಿ ಜಾಗೆಯ ಈ ಸಂಸ್ಥೆ ಇರುವುದು ಅಂತರರಾಷ್ಟ್ರೀಯ ಟೆಕ್‌ ಪಾರ್ಕ್‌ನಲ್ಲಿ . ವಿಷನ್‌ ಗ್ರೂಪ್‌ ಮಾರ್ಗದರ್ಶನದಲ್ಲಿ ಸಂಸ್ಥೆ ರಚಿತವಾಗಿದೆ.

ವಿವಿಧ ವಿಷಯಗಳಲ್ಲಿ ಪದವಿ ಪಡೆದವರಿಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಕ್ಕೆ ಕಾಲಿಡುವ ಅವಕಾಶವಿದೆ. ಅದಕ್ಕಾಗೇ ಜೀವಶಾಸ್ತ್ರದ ಪರಿಚಯ, ಕಂಪ್ಯೂಟರ್‌ ವಿಜ್ಞಾನ, ಅಂಕಿಅಂಶ ಮತ್ತು ಜೈವಿಕ ಮಾಹಿತಿ ವಿಷಯಗಳನ್ನು ಬೋಧಿಸಲಾಗುವುದು. ಅಂತಿಮವಾಗಿ ಸ್ನಾತಕೋತ್ತರ ಪದವಿಯಲ್ಲಿ ಗಣಕೀಕೃತ ಜೀವಶಾಸ್ತ್ರ (ಕಂಪ್ಯೂಷನಲ್‌ ಬಯಾಲಜಿ) ಅಥವಾ ಜೈವಿಕ ಮಾಹಿತಿ (ಬಯೋ ಇನ್ಫರ್ಮ್ಯಾಟಿಕ್ಸ್‌) ಯ ಎಲ್ಲಾ ಮಜಲುಗಳನ್ನು ಹೇಳಿಕೊಡುತ್ತೇವೆ ಎಂದು ಐಬಿಎಬಿ ನಿರ್ದೇಶಕ ಮಂಜು ಬಂಸಾಲ್‌ ಹೇಳಿದರು.

ಜೈವಿಕ ತಂತ್ರಜ್ಞಾನ ಕುರಿತ ವಾರ್ಷಿಕ ಸಮ್ಮೇಳನ ಬಯೋ- 2002 ಏಪ್ರಿಲ್‌ 15ರಿಂದ 17ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಗ್ರೂಪ್‌ ಅಧ್ಯಕ್ಷ ಕಿರಣ್‌ ಮಜುಂದಾರ್‌ ಷಾ ಸುದ್ದಿಗಾರರಿಗೆ ತಿಳಿಸಿದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X