ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾನು ಹೆತ್ತ ಮಗುವನ್ನೇ ದೂರ ಮಾಡಿಹಳು ಈ ‘ಮಹಾತಾಯಿ- ಸ್ಮಿತಾ’

By Staff
|
Google Oneindia Kannada News

*ನಾಗೇಂದ್ರ ಪ್ರಸಾದ್‌, ನಂಜನಗೂಡು

ಮೈಸೂರು : ಮೈಸೂರಿನ ಈ ಮಂದಿಗೆ ಇದು ಹೊಸದೇನು ಅಲ್ಲ. ತಾಯಿ ಬೇಡವೆಂದು ದೂರತಳ್ಳುವ ಕಂದಮ್ಮಗಳಿಗೆಲ್ಲಾ ಹಾಲುಣಿಸಿ, ಪೋಷಿಸುವುದು ಇವರಿಗೆ ಅಭ್ಯಾಸವಾಗಿ ಹೋಗಿದೆ. ಹನಿಯೂ ಹಲವಾರು ವರ್ಷಗಳಿಂದ ಹೀಗೇ ಮಾಡುತ್ತಿದ್ದಾಳೆ. ತಾನು ಹೆತ್ತ ಮಗುವಿಗೆ ಹಾಲುಣಿಸಲಾರೆ ಎಂದು ಹಠ ಹಿಡಿಯುತ್ತಾಳೆ. ಆದರೆ, ಮೈಸೂರ ಈ ಮಂದಿ ಫೀಡಿಂಗ್‌ ಬಾಟಲ್‌ನಲ್ಲಿ ಹಾಲು -ಲ್ಯಾಕ್ಟೋಜನ್‌ ಹಾಕುತ್ತಾರೆ.

ಈಗ ತಾನು ಹೆತ್ತ ಕಂದಮ್ಮನ ದೂರ ಮಾಡುವ ಸರದಿ ಸ್ಮಿತಾಳದ್ದು. ರಮಣ ಮತ್ತು ಸ್ಮಿತಾರ ಅಪರೂಪದ ಕಂದಮ್ಮ ಹುಟ್ಟಿದ್ದು ಜನವರಿ 6ರಂದು. ತನ್ನ ಕಂದನಿಗೆ ಸರಿಯಾಗಿ ಆರೇ ದಿನ ಮೊಲೆಯುಣಿಸಿದ ತಾಯಿ ಸ್ಮಿತಾ ಈಗ ಮಗುವನ್ನು ದೂರ ಮಾಡಿದ್ದಾಳೆ. ಆದರೆ, ತಂದೆ ರಮಣ- ತಾಯಿ ಸ್ಮಿತಾಳನ್ನೇ ಇಷ್ಟು ವರ್ಷ ಸಾಕಿದ ಮೈಸೂರಿನ ಈ ಮಂದಿ ಮಗುವೊಂದು ನಮಗೆ ಭಾರವೇ ಅಂತಾರೆ.

ಗೊತ್ತಾಯಿತಲ್ಲವೇ.. ಇದು ಮೈಸೂರು ಮೃಗಾಲಯದ ಹೊಸ ಎಪಿಸೋಡ್‌. ಸ್ಮಿತಾ ಅಪರೂಪದ ಬಿಳಿ ಹುಲಿ. ಈಕೆ ಪುಟ್ಟ ಬಿಳಿಹುಲಿ ಮರಿಗೆ ಜನ್ಮ ಕೊಟ್ಟಿದ್ದಾಳೆ. ತಾಯಿಯ ಪ್ರೀತಿ - ಹಾಲು ವಂಚಿತ ಮರಿಯನ್ನು ಸಾಕುವುದು ಶ್ರೀ ಚಾಮರಾಜೇಂದ್ರ ಮೃಗಾಲಯದ ಸಿಬ್ಬಂದಿಗೆ ಒಂದು ಸವಾಲಾಗಿ ಪರಿಣಮಿಸಿದೆ. ನಂದನ ಕಾನನ್‌ ಮೃಗಾಲಯದ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ಸಲಹೆ ಅನುಸರಿಸಿ ಈ ಪುಟ್ಟ ಹುಲಿ ಮರಿಯನ್ನು ಸಾಕಲಾಗುತ್ತಿದೆ. ಲ್ಯಾಕ್ಟೋಜನ್‌ ನೀಡಿ ಪೋಷಿಸಲಾಗುತ್ತಿದೆ.

ತಾಯಿ ಹಾಲಿನಿಂದ ವಂಚಿತವಾಗಿದ್ದರೂ ಈ ಅಪರೂಪದ ಹುಲಿ ಮರಿ ತಮ್ಮ ಇಲಾಖಾ ಸಿಬ್ಬಂದಿಯ ಆರೈಕೆಯಲ್ಲಿ ಆರೋಗ್ಯವಾಗಿದೆ ಎಂದು ಮೃಗಾಲಯದ ನಿರ್ದೇಶಕ ಕುಮಾರ್‌ ಪುಷ್ಕರ್‌ ಈ ವಿಷಯವನ್ನು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಆರು ದಿನ ಹಾಲುಣಿಸಿದ ಸ್ಮಿತಾ ಈಗೇಕೆ ಮರಿಯನ್ನು ತಿರಸ್ಕರಿಸುತ್ತಿದ್ದಾಳೆ ಎಂಬುದು ಮೃಗಾಲಯದ ಸಿಬ್ಬಂದಿಗೆ ಸೋಜಿಗ ತಂದಿದೆ. ಉತ್ತರ ಇನ್ನೂ ಸಿಕ್ಕಿಲ್ಲ. ಅಂದಹಾಗೆ ಈಗ ಮೃಗಾಲಯದಲ್ಲಿ ಬಿಳಿ ಹುಲಿಗಳ ಸಂತತಿ ಆರು ಮುಟ್ಟಿದೆ. ಈಗ ಮೈಸೂರು ಮೃಗಾಲಯದಲ್ಲಿ ಸ್ಮಿತಾ ಹಾಗೂ ಅದರ ಇತ್ತೀಚಿನ ಮರಿ ಸೇರಿ 4 ಬಿಳಿ ಹೆಣ್ಣು ಹುಲಿಗಳು, ಸಾಮಾನ್ಯ ಹುಲಿಯಂತೆ ಕಂಡರೂ, ಬಿಳಿ ಹುಲಿಯ ಜೀನ್ಸ್‌ ಹೊಂದಿರುವ ರಮಣ ಹಾಗೂ ಒಂದು ಪುಟ್ಟ ಗಂಡು ಮರಿ ಇದೆ.

ಆರರ ವಿಶೇಷ : ಸ್ಮಿತಾ ಮರಿಗೆ ಜನ್ಮ ಕೊಟ್ಟಿದ್ದು ಜನವರಿ 6ರಂದು, ಈ ಮರಿಯ ಜನನದಿಂದ ಬಿಳಿ ಹುಲಿಗಳ ಸಂತತಿ ಮೃಗಾಲಯದಲ್ಲಿ 6 ಆಯಿತು, ಸ್ಮಿತಾ ತನ್ನ ಮರಿಗೆ ಹಾಲು ಕೊಟ್ಟಿದ್ದೂ ಕೇವಲ 6 ದಿನ ಮಾತ್ರ.

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X