ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಸರಗೋಡಿನಲ್ಲಿ 8ನೇ ಕ್ಲಾಸ್‌ನಿಂದಲೇ ಮಾಹಿತಿ ತಂತ್ರಜ್ಞಾನ ಶಿಕ್ಷಣ

By Staff
|
Google Oneindia Kannada News

ಕಾಸರಗೋಡು : ಕರ್ನಾಟಕ, ಮಾಹಿತಿ ತಂತ್ರಜ್ಞಾನ ರಾಜ್ಯ, ಸಿಲಿಕಾನ್‌ ಕಣಿವೆ ಎಂದು ಕರೆಸಿಕೊಳ್ಳುತ್ತಿದ್ದರೆ, ನೆರೆಯ ಕೇರಳದಲ್ಲಿ ಸದ್ದಿಲ್ಲದೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ಕ್ರಾಂತಿಯೇ ನಡೆಯುತ್ತಿದೆ. ಕೇರಳದ ಬಹುತೇಕ ಪ್ರೌಢಶಾಲೆಗಳಲ್ಲಿ 8ನೇ ತರಗತಿಯಿಂದಲೇ ಮಾಹಿತಿ ತಂತ್ರಜ್ಞಾನ ಕಲಿಕಾ ವಿಷಯವಾಗುತ್ತಿದೆ.

ಇದು ಕನ್ನಡ ಸಂಸ್ಕೃತಿಯ ನೆಲೆವೀಡಾದ ಕಾಸರಗೋಡಿಗೂ ಅನ್ವಯಿಸಲಿದೆ. 2002-03ರ ಶೈಕ್ಷಣಿಕ ವರ್ಷದಿಂದ ಕಾಸರಗೋಡು ಜಿಲ್ಲೆಯ 110 ಪ್ರೌಢಶಾಲೆಗಳಲ್ಲಿ ಪ್ರಥಮ ಹಂತವಾಗಿ ಐ.ಟಿ. ಶಿಕ್ಷಣ ಜಾರಿಯಾಗಲಿದೆ. ಈ ವಿಷಯವನ್ನು ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರು ಖಚಿತ ಪಡಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಶಾಲೆ ಕಾರ್ಯಕ್ರಮದ ಭಾಗವಾಗಿರುವ ಈ ಯೋಜನೆಯು ಕಂಪ್ಯೂಟರ್‌ ಪ್ರಯೋಗ ಶಾಲೆಯ ಸೌಲಭ್ಯ ಮತ್ತು ವಿವರವಾದ ಮಾಹಿತಿ ಭಂಡಾರದ ನೆರವಿನಲ್ಲಿ ಶ್ರೀಮಂತಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಐ.ಟಿ. ಶಿಕ್ಷಣದ ಬಗ್ಗೆ ವಿಶೇಷ ಆಸಕ್ತಿ ಮೂಡುವಂತೆ ಪಠ್ಯಕ್ರಮ ರಚಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X