• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಆದಿ ಚುಂಚನಗಿರಿ ಸ್ವಾಮೀಜಿ ಕೈ ಸುಟ್ಟುಕೊಂಡಿದ್ದೇಕೆ? ಕೃಷ್ಣ ಹೇಳುತ್ತಾರೆ...

By Staff
|

ತುಮಕೂರು : ಗ್ರಾಮೀಣ ಪ್ರದೇಶದ ಮಕ್ಕಳು ವೈದ್ಯರಾಗಲಿ ಎನ್ನುವ ಆದಿ ಚುಂಚನಗಿರಿ ಸ್ವಾಮೀಜಿಗಳ ಅಭಿಮಾನ ಅವರ ಕೈಯ್ಯನ್ನೇ ಸುಡುತ್ತಿದೆ. ಆದರೆ ಅವರ ಅಭಿಮಾನ ದೊಡ್ಡದು ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಬಾಲಗಂಗಾಧರ ಸ್ವಾಮೀಜಿ ಅವರನ್ನು ಕೊಂಡಾಡಿದ್ದಾರೆ.

ಶಿಕ್ಷಣ, ಪರಿಸರ, ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಆದಿ ಚುಂಚನಗಿರಿ ತನ್ನದೇ ಛಾಪು ಮೂಡಿಸಿದೆ. ಕಳೆದ 25 ವರ್ಷಗಳಲ್ಲಿ ಅದು ತನ್ನದೇ ಆದ ಪ್ರಾಮುಖ್ಯತೆ ಗಳಿಸಿದೆ. ಕುಗ್ರಾಮಗಳಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸಲು ಹೊರಟು ಸ್ವಾಮೀಜಿ ಕೈ ಸುಟ್ಟುಕೊಂಡಿದ್ದಾರೆ ಎಂದು ಕೃಷ್ಣ ಹೇಳಿದರು.

ತುರುವೇಕೆರೆ ತಾಲ್ಲೂಕು ಮಾಯಸಂದ್ರದಲ್ಲಿ ಶುಕ್ರವಾರ ನಡೆದ ಬಾಲಗಂಗಾಧರ ಸ್ವಾಮೀಜಿ ಅವರ 57 ನೇ ವರ್ಧಂತಿ ಮಹೋತ್ಸವ ಉದ್ಘಾಟಿಸಿ ಕೃಷ್ಣ ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ 3 ಕೋಟಿ ರುಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಕಾಲಭೈರವೇಶ್ವರ ಕಲ್ಪತರು ಆಶ್ರಮದ ನೂತನ ಕಟ್ಟವನ್ನೂ ಅವರು ಉದ್ಘಾಟಿಸಿದರು.

ಈ ಮುನ್ನ ಮೆಡಿಕಲ್‌ ಕಾಲೇಜು ಸ್ಥಾಪನೆ ಎಂದರೆ ಹಣ ಸಂಪಾದಿಸುವ ಮಾರ್ಗ ಎನ್ನುವ ಭಾವನೆಯಿತ್ತು . ಈಗ ಕಾಲ ಬದಲಾಗಿದೆ. ಮೆಡಿಕಲ್‌ ಕಾಲೇಜುಗಳ ಬೇರೆ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದು , ಅವುಗಳ ನಿರ್ವಹಣೆ ಅತ್ಯಂತ ಕಠಿಣವಾಗಿದೆ ಎಂದು ಕೃಷ್ಣ ಹೇಳಿದರು.

ಸಮಾಜದ ಅಭಿವೃದ್ಧಿಯಲ್ಲಿ ಮುಂದಾದ ಮಠಗಳು

ಸರ್ಕಾರ ತಲುಪಲು ಸಾಧ್ಯವಾಗದ ಪ್ರದೇಶಗಳಲ್ಲೂ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವಲ್ಲಿ ರಾಜ್ಯದಲ್ಲಿನ ಮಠಗಳು ಯಶಸ್ವಿಯಾಗಿವೆ. ಸಮಾಜದ ಅಭಿವೃದ್ಧಿಯಲ್ಲಿ ಮಠಗಳ ಪಾತ್ರ ದೊಡ್ಡದು ಎಂದು ಕೃಷ್ಣ ಹೇಳಿದರು. ಇದೇ ಸಂದರ್ಭದಲ್ಲಿ ಕಲ್ಪಶ್ರೀ ಸ್ಮರಣ ಸಂಚಿಕೆಯನ್ನು ಅವರು ಬಿಡುಗಡೆ ಮಾಡಿದರು.

ಸಿದ್ಧಗಂಗಾ ಮಠಾಧೀಶ ಡಾ.ಶಿವಕುಮಾರ ಸ್ವಾಮೀಜಿ, ಹಂಪಿಯ ಹೇಮಕೂಟದ ಶ್ರೀ ದಯಾನಂದಪುರಿ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಬಲರಾಮ ಜಾಖಡ್‌, ಕೃಷಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಅಂಬರೀಷ್‌, ಚಿತ್ರನಟ ಜಗ್ಗೇಶ್‌ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more