ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್‌ಲೈನ್‌ಗೆ ಬಿಪಿಸಿಎಲ್‌: ಗ್ಯಾಸ್‌ ಕೊಳ್ಳಲು ಕ್ಲಿಕ್ಕಿಸಿ www.ebharatgas.com

By Staff
|
Google Oneindia Kannada News

ಬೆಂಗಳೂರು : ದೇಶದ ಎರಡನೇ ಅತಿದೊಡ್ಡ ಆಯಿಲ್‌ ಮಾರ್ಕೆಟಿಂಗ್‌ ಕಂಪನಿಯಾದ ಭಾರತ್‌ ಪೆಟ್ರೋಲಿಯಂ ಕಾರ್ಪೊರೇಶನ್‌ ಲಿಮಿಟೆಡ್‌(ಬಿಪಿಸಿಎಲ್‌) ತನ್ನ ಗ್ರಾಹಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಆನ್‌ ಲೈನ್‌ ಸೇವೆ ಆರಂಭಿಸಿದೆ.

www.ebharatgas.com ಎಂಬ ವೆಬ್‌ಸೈಟನ್ನು ಕಂಪೆನಿಯ ಮಾರ್ಕೆಟಿಂಗ್‌ ಡೈರೆಕ್ಟರ್‌ ಎಸ್‌. ಬಹುರಿಯಾ ಅವರು ಶುಕ್ರವಾರ ಔಪಚಾರಿಕವಾಗಿ ಉದ್ಘಾಟಿಸಿದರು. ವೆಬ್‌ಸೈಟ್‌ ಮೂಲಕ ಗ್ರಾಹಕರು ಆನ್‌ಲೈನ್‌ನಲ್ಲಿಯೇ ಗ್ಯಾಸ್‌ ತುಂಬಿಕೊಳ್ಳಲು ಆರ್ಡರ್‌ ಕಳುಹಿಸಬಹುದು.

ಬಿಪಿಸಿಎಲ್‌ ವೆಬ್‌ಸೈಟ್‌ನಲ್ಲಿ ಗ್ರಾಹಕರು ತಮ್ಮ ಇ-ಮೇಯ್ಲ್‌ ಅಕೌಂಟ್‌ ತೆರೆದು, ಮನೆಯಿಂದಲೇ ಗ್ಯಾಸ್‌ ಸಿಲಿಂಡರ್‌ ತುಂಬಿಕೊಳ್ಳಲು ಕಚೇರಿಗೆ ಸೂಚನೆ ಕಳುಹಿಸಬಹುದು. ಗ್ಯಾಸ್‌ ಹಂಚಿಕೆದಾರರಿಗೂ ಇದರಿಂದ ಸಹಾಯವಾಗಲಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಬಹುರಿಯಾ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X