For Daily Alerts
ಚೀನಾಗೆ ಬರಲು ಇನ್ಫೋಸಿಸ್ಗೆ ಆಹ್ವಾನ, ಚೀನಾಗೆ ರುಂಗ್ಜಿ ಮರುಪಯಣ
ಬೆಂಗಳೂರು: ಚೀನಾದ ಪ್ರಧಾನಿ ಝು ರುಂಗ್ಜಿ ಅವರು ಶುಕ್ರವಾರ ಬೆಳಗ್ಗೆ ಬೀಜಿಂಗ್ಗೆ ತೆರಳುವುದರೊಂದಿಗೆ ಅವರ ಚೀನಾ ಹಾಗೂ ಭಾರತಗಳ ನಡುವೆ ಸೌಹಾರ್ದಯುತ ಸಂಬಂಧ ರೂಪಿಸುವ ಉದ್ದೇಶದ ಅವರ ಭಾರತ ಭೇಟಿ ಮುಕ್ತಾಯಗೊಂಡಿತು.
ರಾಜ್ಯಪಾಲೆ ವಿ.ಎಸ್.ರಮಾದೇವಿ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯರು ಝು ಅವರನ್ನು ಹಾರ್ದಿಕವಾಗಿ ಬೀಳ್ಕೊಟ್ಟರು. ಗುರುವಾರ ರಾತ್ರಿ ಚೀನೀ ಪ್ರಧಾನಿ ಗೌರವಾರ್ಥ ರಾಜಭವನದಲ್ಲಿ ವಿಶೇಷ ಔತಣ ಕೂಟ ಏರ್ಪಾಡಾಗಿತ್ತು .
ಭಾರತದ ಐಟಿ ದಿಗ್ಗಜ ಇನ್ಫೋಸಿಸ್ಗೆ ಗುರುವಾರ ಭೇಟಿ ಕೊಟ್ಟಿದ್ದ ಝು ಅವರು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾ ಹಾಗೂ ಭಾರತ ಪರಸ್ಪರ ಸಹಕಾರ ನೀಡಬೇಕೆಂದು ಪ್ರತಿಪಾದಿಸಿದರು. ಭಾರತದ ಸಾಫ್ಟ್ವೇರ್ ಉದ್ದಿಮೆದಾರರು ಚೀನಾದಲ್ಲಿ ತಮ್ಮ ಚಟುವಟಿಕೆ ಆರಂಭಿಸುವಂತೆ ಆಹ್ವಾನಿಸಿದ ಝು ಅವರು, ಚೀನಾದಲ್ಲಿ ತನ್ನ ಕಚೇರಿ ಸ್ಥಾಪಿಸಲು ಇನ್ಫೋಸಿಸ್ ಲಿಮಿಟೆಡ್ಗೆ ಸ್ಥಳದಲ್ಲೇ ಅನುಮತಿ ಮಂಜೂರು ಮಾಡಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...