ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ತ್ರೆೃಮಾಸಿಕ : ವಿಪ್ರೋಗೆ 223.60 ಕೋಟಿ ರುಪಾಯಿ ಲಾಭ

By Staff
|
Google Oneindia Kannada News

ಬೆಂಗಳೂರು : ಐಟಿ ಕ್ಷೇತ್ರದ ಪ್ರಮುಖ ಕಂಪನಿ ವಿಪ್ರೋ ಪ್ರಸಕ್ತ ವಿತ್ತ ವರ್ಷದ 3ನೇ ತ್ರೆೃಮಾಸಿಕದಲ್ಲಿ 223.60 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ಸಾಲಿನ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಪ್ರತಿಶತ 17ರಷ್ಟು ಏರಿಕೆಯಾಗಿದೆ.

ಕಂಪನಿಯ ಅಧ್ಯಕ್ಷ ಅಜೀಂ ಪ್ರೇಂಜಿ ಶುಕ್ರವಾರ ಸುದ್ದಿಗಾರರಿಗೆ ಕಂಪನಿಯ ತ್ರೆೃಮಾಸಿಕದ ವಿವರ ಹೇಳಿದರು. ಈ ಅವಧಿಯಲ್ಲಿ ಕಂಪನಿಯ ಒಟ್ಟು ಆದಾಯ 875.90 ಕೋಟಿ ರುಪಾಯಿ. 2001ನೇ ವಿತ್ತ ವರ್ಷದ ಮೂರನೇ ತ್ರೆೃಮಾಸಿಕದಲ್ಲಿ ಕಂಪನಿಯ ನಿವ್ವಳ ಆದಾಯಕ್ಕಿಂತ ಇದು 12 ಪ್ರತಿಶತ ಹೆಚ್ಚು ಎಂದರು.

ಅಮೆರಿಕದಲ್ಲಿ ಮಾಹಿತಿ ತಂತ್ರಜ್ಞಾನ ಹಿನ್ನಡೆ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ಈಗ ಪರಿಸ್ಥಿತಿ ಅನಿಶ್ಚಿತವಾಗಿದೆ. ಅದರಲ್ಲೂ ಟೆಲಿಕಾಂ ಕ್ಷೇತ್ರದಲ್ಲಂತೂ ಲೆಕ್ಕಾಚಾರಗಳೆಲ್ಲಾ ತಲೆಕೆಳಗಾಗುತ್ತಿವೆ. ಮುಂದಿನ ವಿತ್ತ ವರ್ಷದ ಮೊದಲ ತ್ರೆೃಮಾಸಿಕದಲ್ಲಿ ನಾವು ಇಡಬೇಕಾದ ಹೆಜ್ಜೆಗಳನ್ನು ಈಗಿನಿಂದಲೇ ಯೋಜಿಸುತ್ತಿದ್ದೇವೆ ಎಂದು ಪ್ರೇಂಜಿ ಹೇಳಿದರು. ಕಂಪನಿಯ ಉಪಾಧ್ಯಕ್ಷ ವಿವೇಕ್‌ ಪಾಲ್‌ ಕೂಡ ಪ್ರೇಂಜಿ ಜೊತೆಯಲ್ಲಿದ್ದರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X