ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ನಿಮ್ಮ ಸಾಫ್ಟ್‌ವೇರ್‌, ನಮ್ಮ ಹಾರ್ಡ್‌ವೇರ್‌ ಸೇರಿ ನಂಬರ್‌ ಒನ್‌ ಐಟಿ ಪವರ್‌!’

By Staff
|
Google Oneindia Kannada News

ಬೆಂಗಳೂರು : ನೀವು ಸಾಫ್ಟ್‌ವೇರ್‌ ದಿಗ್ಗಜರು. ನಾವು ಹಾರ್ಡ್‌ವೇರ್‌ ಅಪ್ರತಿಮರು. ಇಬ್ಬರೂ ಕೈಜೋಡಿಸಿದರೆ ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಂಬರ್‌ ಒನ್‌. ಒಟ್ಟಾಗಿ ಕೆಲಸ ಮಾಡಿದರೆ ಇಬ್ಬರಿಗೂ ಲಾಭ ಎಂದು ಹೇಳುವ ಮೂಲಕ ಚೀನಾ ಪ್ರಧಾನಿ ಝು ರುಂಗ್ಜಿ ಭಾರತದ ಮುಂದೆ ಒಡಂಬಡಿಕೆಯ ಪ್ರಸ್ತಾವನೆ ಇಟ್ಟರು.

ನಗರದ ಇಲೆಕ್ಟ್ರಾನಿಕ್‌ ಸಿಟಿಯ ಇನ್ಫೋಸಿಸ್‌ ಸಂಸ್ಥೆಯಲ್ಲಿ ಗುರುವಾರ ಅವರು ಮಾತಾಡುತ್ತಿದ್ದರು. ಸಾಫ್ಟ್‌ವೇರ್‌ ಕ್ಷೇತ್ರದ ಸಾಧನೆಯ ಮೂಲಕ ವಿಶ್ವ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಪ್ರಮುಖ ಹೆಸರು. ಆದರೆ ಚೀನಾ ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಭಾರತಕ್ಕಿಂತ ಸಾಕಷ್ಟು ಹಿಂದಿದೆ. ಚೀನಾ ಹಾಗೂ ಭಾರತದ ಮಾಹಿತಿ ತಂತ್ರಜ್ಞಾನ ಯೋಜನೆ, ಕಾರ್ಯತಂತ್ರಗಳಲ್ಲಿ ಸಾಮ್ಯತೆ ಇದೆ. ಉಭಯ ದೇಶಗಳಲ್ಲಿ ಜನಬಲವಿದೆ. ಸ್ಥಳೀಯ ಮಾರುಕಟ್ಟೆ ಸುಧಾರಿಸುತ್ತಿದೆ. ಶಿಕ್ಷಣ ಹಾಗೂ ಆರ್ಥಿಕ ಕ್ಷೇತ್ರಗಳನ್ನು ಮಾಹಿತಿ ತಂತ್ರಜ್ಞಾನದಿಂದ ಬೆಸೆಯುವ, ಆ ಮೂಲಕ ಸರ್ವತೋಮುಖ ಪ್ರಗತಿ ಕಾಣುವ ಪ್ರಯತ್ನಗಳು ನಡೆಯುತ್ತಿವೆ.

ತಂತ್ರಜ್ಞಾನ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಭಾರತ ನಮ್ಮ ನೆರೆಯ ದೇಶ ಹಾಗೂ ಮಿತ್ರ ದೇಶ ಎನ್ನುವುದು ನಮ್ಮ ಹೆಮ್ಮೆ. ಉಭಯ ದೇಶಗಳು ದೊಡ್ಡವು. ಬೌದ್ಧಿಕ ಸಂಪತ್ತನ್ನು ಉಳ್ಳವು. ಈಗ ಪರಸ್ಪರ ಸಹಕಾರ ಕೊಡುವ ಮೂಲಕ ಅಭಿವೃದ್ಧಿ, ವಿಶ್ವಶಾಂತಿ ಸ್ಥಾಪಿಸುವುದು ಸಾಧ್ಯವಿದೆ. ಆಳವಾದ ಚರಿತ್ರೆ, ಪ್ರಾಚೀನ ನಾಗರಿಕತೆ ಇರುವ ಭಾರತ ಹಾಗೂ ಚೀನಾ ಕೊಡು- ಕೊಳ್ಳುವ ಮೂಲಕ ಇನ್ನಷ್ಟು ಎತ್ತರಕ್ಕೆ ಬೆಳೆಯಬಹುದು. ನಾವು ಭಾರತದೊಂದಿಗೆ ಸಹಕಾರ ಹಸ್ತ ಚಾಚುತ್ತಿದ್ದೇವೆ ಎಂದು ಒಡಂಬಡಿಕೆಗೆ ಚೀನಾ ಪ್ರಧಾನಿ ಬುಲಾವು ಕೊಟ್ಟರು.

(ಪಿಟಿಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X