• search

ನೆಹರೂ, ಸುಭಾಷ್‌.. ಓ ! ಆ ದಿನಗಳ ಮರೆಯಲಾಗದು- ಎಂ.ವಿ.ಕಾಮತ್‌

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಸದಾಶಿವ ಕೆ.

    ಮಂಗಳೂರು : ತೆಹಲ್ಕಾ.ಕಾಮ್‌ ಪತ್ರಿಕೋದ್ಯಮಕ್ಕೆ ಕಳಂಕ ತರುವಂಥ ಕೆಲಸ ಮಾಡಿದೆ ಎಂದು ಪತ್ರಕರ್ತ ಹಾಗೂ ಇಲ್ಲಸ್ಟ್ರೇಟೆಡ್‌ ವೀಕ್ಲಿಯ ಮಾಜಿ ಸಂಪಾದಕ ಎಂ. ವಿ. ಕಾಮತ್‌ ಅಭಿಪ್ರಾಯ ಪಟ್ಟಿದ್ದಾರೆ. ಬುಧವಾರ ಭಾರತೀಯ ಸಾರ್ವಜನಿಕ ಸಂಪರ್ಕಗಳ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

    ತೆಹಲ್ಕಾ ಹಗರಣವನ್ನು ಬಲವಾಗಿ ವಿರೋಧಿಸಿದ ಕಾಮತ್‌, ಪತ್ರಿಕೋದ್ಯಮದ ಹಳೆಯ ಅನುಭವಗಳನ್ನು ಸಭಿಕರೊಂದಿಗೆ ಹಂಚಿಕೊಂಡರು. ‘ಮೊಬೈಲ್‌ ಫೋನ್‌, ಲ್ಯಾಪ್‌ ಟಾಪ್‌ ಕಂಪ್ಯೂಟರ್‌ ಸೌಲಭ್ಯಗಳು ಇವತ್ತಿನ ಪತ್ರಕರ್ತರಿಗೆ ಲಭ್ಯವಿದೆ. ಆಧುನಿಕ ಪತ್ರಕರ್ತರು ತುಂಬಾ ಅದೃಷ್ಟವಂತರು . ಘಟನೆ ನಡೆದ ಸ್ಥಳದಿಂದ ತಕ್ಷಣವೇ ವರದಿ ಕಳುಹಿಸಲು ಅನುಕೂಲವಾಗುವ ಎಲ್ಲ ಸೌಲಭ್ಯಗಳು ಪತ್ರಕರ್ತರಿಗಿರುವುದರಿಂದ ವರದಿಯನ್ನು ಮಾಧ್ಯಮ ಕಚೇರಿಗೆ ತ್ವರಿತಗತಿಯಲ್ಲಿ ಕಳುಹಿಸುವುದು ಸಾಧ್ಯವಾಗುತ್ತದೆ’ ಎಂದು ಎಂ.ವಿ. ಕಾಮತ್‌ ತಂತ್ರಜ್ಞಾನವನ್ನು ಪ್ರಶಂಸಿದರು.

    1945ರಲ್ಲಿ , ಅಂದರೆ ಸರಿಯಾಗಿ 56 ವರ್ಷಗಳ ಹಿಂದೆ ತಾವು ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ ಫ್ರೀಪ್ರೆಸ್‌ ಜರ್ನಲ್‌ ಮೂಲಕ ಪತ್ರಿಕೋದ್ಯಮವನ್ನು ಸೇರಿದ ದಿನಗಳನ್ನು ನೆನೆಸಿಕೊಂಡರು. ಆ ಕಾಲದಲ್ಲಿ ಸರದಾರ್‌ ವಲ್ಲಭಬಾಯಿ ಪಟೇಲ್‌, ಸುಭಾಷ್‌ಚಂದ್ರ ಭೋಸ್‌ ಜೊತೆ ಮಾತುಕತೆ ನಡೆಸಿ ವರದಿಗಾರಿಕೆ ಮಾಡುತ್ತಿದ್ದ ಅನುಭವಗಳನ್ನು ಹಂಚಿಕೊಂಡರು.

    ಡಿಸಿಪ್ಲಿನ್‌ ಬಗ್ಗೆ ಮಾತನಾಡಿದ ನೆಹರು !

    ‘ನನ್ನ ಇನ್ನೊಂದು ಸ್ಮರಣೀಯ ಅನುಭವವೆಂದರೆ ಮಾಜಿ ಪ್ರಧಾನಿ ಜವಾಹರ್‌ಲಾಲ್‌ ನೆಹರು ಅವರೊಂದಿಗಿನ ಸಂದರ್ಶನ. ಇಂಡಿಯನ್‌ ಎಕ್ಸ್‌ಪ್ರೆಸ್‌ನ ಗೆಳೆಯನೊಬ್ಬನ ಜೊತೆಗೆ ನೆಹರು ಪ್ರಯಾಣಿಸುತ್ತಿದ್ದ ರೈಲು ಹತ್ತಿ ಅವರ ಸಂದರ್ಶನ ಪಡೆದಾಗ ತುಂಬಾ ಖುಷಿಯಾಗಿಬಿಟ್ಟಿತ್ತು . ತಮಾಷೆಯೆಂದರೆ ರೈಲಿನ ಹಿಂದಿನ ಬಾಗಿಲಿನಿಂದ ನೆಹರು ಕ್ಯಾಬಿನ್‌ಗೆ ನುಗ್ಗಿ ಸಂದರ್ಶನಕ್ಕಾಗಿ ಕುಳಿತಾಗ, ಅವರು ಶಿಸ್ತಿನ ಬಗ್ಗೆ ಮಾತನಾಡಲಾರಂಭಿಸಿದರು’.

    ಪತ್ರಿಕೆಗಳ ಬಗ್ಗೆ ಹೇಳಬೇಕೆಂದರೆ ದ ಹಿಂದೂ ಪತ್ರಿಕೆ ಸುದ್ದಿಯ ಮೌಲ್ಯಕ್ಕೆ ಪ್ರಾಮುಖ್ಯ ನೀಡುತ್ತಿದೆ. ಡೆಕ್ಕನ್‌ ಕೂಡ ಪರವಾಗಿಲ್ಲ. ಆದರೆ ವಾಷಿಂಗ್ಟನ್‌ ಪೋಸ್ಟ್‌ ಮತ್ತು ನ್ಯೂಯಾರ್ಕ್‌ ಟೈಮ್ಸ್‌ನಿಂದ ಸುದ್ದಿಗಳನ್ನು ಹೆಕ್ಕಿ ತೆಗೆಯುವ ಟೈಮ್ಸ್‌ ಆಫ್‌ ಇಂಡಿಯಾದ ನೀತಿ ಸರಿಯಲ್ಲ . ಹಾಗೆ ಮಾಡಿದಾಗ ಪತ್ರಿಕೆ ಸತ್ಯವನ್ನು ಓದುಗರ ಮುಂದಿಟ್ಟ ಹಾಗಾಗುವುದಿಲ್ಲ ಎಂದು ಕಾಮತ್‌ ಆಕ್ಷೇಪಿಸಿದರು.

    ಟೈಮ್ಸ್‌ ಆಫ್‌ ಇಂಡಿಯಾ ತಮ್ಮನ್ನು ನ್ಯೂಯಾರ್ಕ್‌ ಗೆ ಕಳಿಸಿಕೊಟ್ಟಾಗ ಟೆಲೆಕ್ಸ್‌ ಬಳಸುವುದು ಹೇಗೆ ಎಂದು ತಿಳಿದಿರಲಿಲ್ಲ. ಈಗ ಮಾಧ್ಯಮ ಕ್ಷೇತ್ರದಲ್ಲಿ ಎಷ್ಟೊಂದು ಬದಲಾವಣೆಗಳಾಗಿವೆ ಎಂದು ಅಚ್ಚರಿಪಟ್ಟ ಕಾಮತ್‌ ಈಗ ವರದಿಗಾರನೊಬ್ಬ ಸಂಪಾದಕರನ್ನು ಭೇಟಿಯಾಗಬೇಕೆಂದೇನೂ ಇಲ್ಲ. ಕಂಪ್ಯೂಟರ್‌ಗಳೇ ಆ ಕೆಲಸವನ್ನು ಮಾಡುತ್ತವೆ. ಈ ಎಲ್ಲ ಸೌಲಭ್ಯಗಳಿದ್ದಾಗ್ಯೂ ಪತ್ರಿಕೋದ್ಯಮಿಗಳು ಸಾಕಷ್ಟು ಬರವಣಿಗೆಯ ಕೃಷಿಯನ್ನು ಮಾಡುತ್ತಿಲ್ಲ ಎಂದು ಅವರು ವಿಷಾದಿಸಿದರು.

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more