ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
  • search

ಸೆಕ್ಸ್‌ ಸಿನಿಮಾಗಳ ನಕಲಿ ಸಿ.ಡಿ. ತಯಾರಕನ ಬಂಧನ, 3300 ಸಿ.ಡಿ.ಗಳ ವಶ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ವೈಯಾಲಿಕಾವಲ್‌ನಲ್ಲಿ ಅಶ್ಲೀಲ ಹಾಗೂ ಹೊಸ ಚಲನಚಿತ್ರಗಳ ನಕಲಿ ಸಿಡಿ ಮತ್ತು ಕೆಸೆಟ್‌ಗಳನ್ನು ತಯಾರಿಸುತ್ತಿದ್ದ ರಾಜಾಸ್ತಾನಿ ಮೂಲದವನನ್ನು ಪೊಲೀಸರು ಬಂಧಿಸಿದ್ದು, 8 ಲಕ್ಷ ರುಪಾಯಿ ಬೆಲೆಯ ಸಿ.ಡಿ., ಕೆಸೆಟ್‌ ಹಾಗೂ ಕಂಪ್ಯೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

    ಪಾಲಿ ಜಿಲ್ಲೆಯ ಮದನ್‌ ಎಂಬಾತನೇ ಬಂಧಿತ. 3300 ನಕಲಿ ಸಿ.ಡಿ.ಗಳು, 3 ಕಂಪ್ಯೂಟರ್‌ ಹಾಗೂ 2 ಪ್ರಿಂಟರ್‌ ಮತ್ತು ಲೇಬಲ್‌ಗಳು ಹಾಗೂ ಸಿ.ಡಿ. ರೈಟರ್‌ಗಳನ್ನು ಈತನಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಳೆದ 6 ತಿಂಗಳಿಂದ ಮದನ್‌ ಈ ದಂಧೆಯಲ್ಲಿ ತೊಡಗಿದ್ದ. ಬಂಟಿ ಹಾಗೂ ಸಾಂಗ್ನಿ ಎಂಬ ರಾಜಾಸ್ತಾನದ ಇನ್ನೂ ಇಬ್ಬರು ಮದನ್‌ ಜೊತೆ ಕೈಮಿಲಾಯಿಸಿದ್ದರು. ಈ ಇಬ್ಬರೂ ತಲೆ ಮರೆಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಖಚಿತ ಮಾಹಿತಿ ಆಧರಿಸಿ ಶೇಷಾದ್ರಿಪುರಂ ಎಸಿಪಿ ಬಿ.ಡಿ.ಪಾಟೀಲ ನೇತೃತ್ವದ ಪಡೆ ಈ ಜಾಲವನ್ನು ಬಯಲಿಗೆಳೆದಿದೆ. ಬಂಟಿ ಹಾಗೂ ಸಾಂಗ್ನಿ ಪತ್ತೆಗೆ ತೀವ್ರ ಶೋಧ ನಡೆದಿದೆ.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more