• search

ಅಮಿತಾಬ್‌ ವಿಚಾರ ಲಹರಿ, ಹುಸೇನ್‌ರ ಕುಂಚ ಪ್ರತಿಭೆಯ ಸಮಾಗಮ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಕಾರ್ಕಳ, ಜ. 16: ಶಿಕ್ಷಣದ ಬಗ್ಗೆ ಹಿಂದಿ ಚಿತ್ರರಂಗದ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ರ ವಿಚಾರಲಹರಿ, ಖ್ಯಾತ ಕಲಾವಿದ ಎಂ.ಎಫ್‌. ಹುಸೇನ್‌ರ ಕುಂಚ ಪ್ರತಿಭೆಯ ಸಮಾಗಮದೊಡನೆ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ತಾಲೂಕಿನ ಎಣ್ಣೆಹೊಳೆಯ ರಾಧಾ ನಾಯಕ್‌ ಸರ್ಕಾರಿ ಪ್ರೌಢ ಶಾಲೆ ನಾಡಿಗೆ ಸಮರ್ಪಣೆಯಾಯಿತು.

    ತಾವು ಹುಟ್ಟಿ, ಬೆಳೆದು, ಓದಿ, ಆಡಿದ ಊರನ್ನು ಮರೆಯದೆ ಮುಂಬಯಿಯ ಖ್ಯಾತ ಪೊಲೀಸ್‌ ಅಧಿಕಾರಿ ದಯಾನಂದ್‌ ನಾಯಕ್‌ ಕೋಟಿ ರು. ವೆಚ್ಚದಲ್ಲಿ ಕಟ್ಟಿಸಿರುವ ಭವ್ಯ ಕಟ್ಟಡ, ಪ್ರಯೋಗಾಲಯ, ಕಂಪ್ಯೂಟರ್‌ ಕೇಂದ್ರ, ಆಟದ ಮೈದಾನವನ್ನೊಳಗೊಂಡ ಶಾಲೆಯನ್ನು ಅಮಿತಾಬ್‌ ಬಚ್ಚನ್‌ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಣ ಹಾಗೂ ಶಿಸ್ತು ದೇಶವನ್ನು ಸಮೃದ್ಧಿಯತ್ತ ಕೊಂಡೊಯ್ಯುತ್ತದೆ ಎಂದರು.

    ಶಿಕ್ಷಣ ಆದ್ಯತೆಯ ವಿಷಯವಾಗಬೇಕು. ಸರ್ವರಿಗೂ ಗುಣಮಟ್ಟದ ಶಿಕ್ಷಣ ದೊರಕುವಂತಾಗಬೇಕು ಎಂದು ಮಾತಿಗಾರಂಭಿಸಿದ ಅವರು, ಶಿಕ್ಷಣದ ಮಹತ್ವ, ಘನತೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು. ಈ ಸಂದರ್ಭದಲ್ಲಿ ಖ್ಯಾತ ಕಲಾವಿದ ಹುಸೇನ್‌ ತಮ್ಮ ಕುಂಚದಿಂದ ಶಿಕ್ಷಣದ ಮಹತ್ವ ಪ್ರತಿಬಿಂಬಿಸುವ ಚಿತ್ರಗಳನ್ನು ಬಿಡಿಸಿದರು.

    ರಾಜ್ಯದ ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಶಾಲೆಯ ಪ್ರಯೋಗಾಲಯ ಉದ್ಘಾಟಿಸಿದರೆ, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ ಅವರು, ಸಭಾ ಭವನದ ಉದ್ಘಾಟನೆ ನೆರವೇರಿಸಿದರು. ಇದಕ್ಕೂ ಮುನ್ನ ಅಮಿತಾಬ್‌ ಬಚ್ಚನ್‌, ನಟರಾದ ಸಂಜಯ್‌ದತ್ತ್‌, ಸುನಿಲ್‌ ಶೆಟ್ಟಿ ಅವರಿಗೆ ತುಳುನಾಡ ಸಂಪ್ರದಾಯದಂತೆ ಸ್ವಾಗತ ನೀಡಲಾಯಿತು. ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಉಪಸ್ಥಿತರಿದ್ದರು.

    ಅರಿವಿನ ಮೂಲ ಸೆಲೆಯೇ ಶಾಲೆ. ತಮ್ಮಂತೆ ಈ ಊರಿನ ಮಕ್ಕಳು ಕಲಿಕೆಗಾಗಿ ದೂರದ ಊರಿಗೆ ಹೋಗಿ ಕಷ್ಟ ಅನುಭವಿಸುವುದು ಬೇಡ ಎಂಬ ಉದ್ದೇಶದಿಂದ ಶಾಲೆ ಸ್ಥಾಪಿಸಿದ್ದಾಗಿ ರಾಧಾ ನಾಯಕ್‌ ಎಜುಕೇಶನ್‌ ಟ್ರಸ್ಟ್‌ನ ಗೌರವಾಧ್ಯಕ್ಷ ದಯಾನಂದ ನಾಯಕ್‌ ಈ ಸಂದರ್ಭದಲ್ಲಿ ತಿಳಿಸಿದರು.

    ಮರಳಿ ಶಾಲೆಗೆ ತೆರಳಿ : ಏರಿದ ಏಣಿಯನ್ನು ಒದೆಯುವುದು ಮನುಷ್ಯನ ಸಹಜ ಗುಣಗಳಲ್ಲೊಂದು. ಹಾಗೆಂದ ಮಾತ್ರಕ್ಕೆ ಎಲ್ಲರೂ ಕೃತಘ್ನರೇನಲ್ಲ. ತಾವು ಪಡೆದ ಉಪಕಾರವನ್ನು ಸ್ಮರಿಸಿ ಪ್ರತ್ಯುಪಕಾರ ಮಾಡುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಇಂತಹವರ ಸಾಲಿನಲ್ಲಿ ನಿಲ್ಲುವವರು ಮುಂಬಯಿಯ ಪ್ರಸಿದ್ಧ ಪೊಲೀಸ್‌ ಅಧಿಕಾರಿ ದಯಾನಂದ ನಾಯಕ್‌.

    ದಯಾನಂದ್‌ ನಾಯಕ್‌ ಮುಂಬಯಿಯಲ್ಲಿ ಉನ್ನತ ಪೊಲೀಸ್‌ ಅಧಿಕಾರಿ. ತಮ್ಮ ಕರ್ತವ್ಯದಿಂದ ಅಲ್ಲಿ ಹೆಸರು ಮಾಡಿರುವ ಇವರು, ಈ ಹೊತ್ತು ತಾವು ಆಡಿ, ಓದಿ, ಬೆಳೆದ ಊರಿನಲ್ಲೊಂದು ಸುಸಜ್ಜಿತ ಶಾಲೆ ಕಟ್ಟಿಸಿದ್ದಾರೆ. ತಮ್ಮ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳದ ತಾಲೂಕಿನ ಎಣ್ಣೆಹೊಳೆಯಲ್ಲಿ ಹೊಸದಾಗಿ ಮಂಜೂರಾದ ಸರ್ಕಾರಿ ಪ್ರೌಢಶಾಲೆಯನ್ನು ಇವರು ಮರಳಿ ಶಾಲೆಗೆ ತೆರಳಿ ಎಂಬ ಘೋಷಣೆಯಾಂದಿಗೆ ಒಂದು ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

    (ಇನ್‌ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more