ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಯಿಬಾಬಾ ಆಸ್ಪತ್ರೆಗೆ ಮೊದಲ ಹುಟ್ಟುಹಬ್ಬ : ಜನವರಿ 19ರಂದು ಸಮ್ಮೇಳನ

By Staff
|
Google Oneindia Kannada News

ಬೆಂಗಳೂರು : ಈವರೆಗೆ ಒಂದು ಲಕ್ಷದ ಮೂವತ್ತೆೈದು ಸಾವಿರ ಹೊರ ರೋಗಿಗಳಿಗೆ ಚಿಕಿತ್ಸೆ ನೀಡಿರುವ, ಅದರಲ್ಲೂ ಚಿಕ್ಕಾಸೂ ಇಸಿದುಕೊಳ್ಳದೆ ಬಡವರ ರೋಗ ನಿವಾರಿಸಿರುವ ವೈಟ್‌ಫೀಲ್ಡ್‌ನಲ್ಲಿರುವ ಸತ್ಯಸಾಯಿಬಾಬಾ ಆಸ್ಪತ್ರೆಗೆ ಒಂದು ವರ್ಷ ತುಂಬಿದೆ. ಈ ಸ್ಮರಣಾರ್ಥ ಜನವರಿ 19ರಂದು ಇಲ್ಲಿ ಆರೋಗ್ಯ ಸಮ್ಮೇಳನ ಏರ್ಪಾಟಾಗಿದೆ.

ಕಳೆದ ವರ್ಷ ಪ್ರಧಾನಿ ಎ.ಬಿ.ವಾಜಪೇಯಿ ಉದ್ಘಾಟಿಸಿದ ಈ ಆಸ್ಪತ್ರೆಯಲ್ಲಿ ಈವರೆಗೆ ಎರಡೂ ಮುಕ್ಕಾಲು ಸಾವಿರ ಮಂದಿಗೆ ಗಂಭೀರ ಸ್ವರೂಪದ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ಪೈಕಿ ಒಂದೂ ಮುಕ್ಕಾಲು ಸಾವಿರ ಮಂದಿ ಹೃದಯಕ್ಕೆ ಸಂಬಂಧಿಸಿದ ತೊಂದರೆ ಎದುರಿಸುತ್ತಿದ್ದರು. ನರಮಂಡಲದ ತೊಂದರೆ ಅನುಭವಿಸುತ್ತಿದ್ದ 1044 ರೋಗಿಗಳಿಗೂ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಹೈಟೆಕ್‌ ಪಟ್ಟಿ ಹಾಕಿಕೊಂಡಿದ್ದರೂ ಬಡವರ ಸೇವೆಗೆ ಮುಂದಾಗಿರುವ ಅಗ್ಗಳಿಕೆ ಈ ಆಸ್ಪತ್ರೆಯದು.

ಕನಸುಗಾರ ವಿಜ್ಞಾನಿ ಎ.ಪಿ.ಜೆ.ಅಬ್ದುಲ್‌ ಕಲಾಂ, ಡಾ. ಮೈಕೆಲ್‌ ನೋಬಲ್‌, ಡಾ. ಎಂ.ಎಸ್‌.ವಲಿಯಾಥನ್‌, ಕೇಂದ್ರ ಆರೋಗ್ಯ ಸಚಿವ ಡಾ.ಸಿ.ಪಿ.ಠಾಕೂರ್‌ ಹಾಗೂ ಕರ್ನಾಟಕ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಸಮ್ಮೇಳನದ ದಿನ ಮಾತಾಡಲಿದ್ದಾರೆ. ಸತ್ಯ ಸಾಯಿಬಾಬಾ ಕೂಡ ಸಮ್ಮೇಳನದಲ್ಲಿ ಆಶೀರ್ವಚನ ನೀಡಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X