• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಯು ಮಾಲಿನ್ಯ : 400 ಸರ್ಕಾರಿ ವಾಹನಗಳ ವಿರುದ್ಧ ಕ್ರಮ

By Super
|

ಬೆಂಗಳೂರು, ಜ.16: ರಾಜ್ಯದ ರಾಜಧಾನಿ ಬೆಂಗಳೂರು - ಉದ್ಯಾನನಗರಿ ಎಂಬ ಪ್ರಖ್ಯಾತಿಯ ಜೊತೆಗೆ ಮಾಲಿನ್ಯ ನಗರಿ ಎಂಬ ಕುಖ್ಯಾತಿಯನ್ನೂ ಗಳಿಸಿದೆ. ಈ ಕುಖ್ಯಾತಿಯಲ್ಲಿ ನಾವು ಬಳಸುವ ವಾಹನಗಳು ಉಗುಳುವ ಹೊಗೆಯ ಪಾತ್ರವೂ ಪ್ರಮುಖವಾಗಿದೆ.

ಈ ಪ್ರಮಾಣ ಅತ್ಯಲ್ಪವಾದರೂ ನಾವು ಉಸಿರಾಡುವ ಗಾಳಿ ಕಲುಷಿತಗೊಳ್ಳುತ್ತಿರುವುದಂತೂ ನಿಜ. ವಾಯು ಮಾಲಿನ್ಯಕ್ಕೆ ಖಾಸಗಿ ವಾಹನಗಳಷ್ಟೇ ಸರಕಾರಿ ವಾಹನಗಳೂ ತಮ್ಮ ಕಾಣಿಕೆ ನೀಡುತ್ತಿವೆ. ದಟ್ಟ ಕಪ್ಪು ಹೊಗೆ ಉಗುಳುತ್ತಾ ಬರುವ ಪೊಲೀಸ್‌ ವಾಹನ ನಿಮ್ಮನ್ನು ತಡೆದು ಹೊಗೆ ತಪಾಸಣೆ ಮಾಡಿಸಿಲ್ಲವೆಂತಲೋ, ಇಲ್ಲ ನಿಮ್ಮ ವಾಹನದಿಂದ ಅಗತ್ಯಕ್ಕಿಂತ ಹೆಚ್ಚಾಗಿ ಹೊಗೆ ಬರುತ್ತಿದೆ ಎಂತಲೋ ದಂಡ ಹಾಕಿ, ಮತ್ತೆ ನಿಮ್ಮ ಮುಖಕ್ಕೆ ಕಪ್ಪು ಹೊಗೆ ಉಗುಳುತ್ತಾ ಸಾಗಿರಬಹುದು. ಆಗ ನೀವು ಅವರನ್ನು ಮನದಲ್ಲೇ ಬೈದಿರಲೂ ಸಾಕು.

ಆದರೆ, ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನೀವು ತಪ್ಪು ಮಾಡಿದರೂ ತಪ್ಪೇ, ಸರಕಾರ ತಪ್ಪು ಮಾಡಿದರೂ ತಪ್ಪೆ ಅಲ್ಲವೇ? ಈಗ ಆ ಕಾಲ ಬಂದಿದೆ. ಸರಕಾರ ನಿಮಗೆ ದಂಡ ಹಾಕಿದರೆ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸರಕಾರಿ ವಾಹನಗಳಿಗೇ ದಂಡ ವಿಧಿಸಿದೆ.

ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 2000 ವಾಹನಗಳು ಉಗುಳುವ ಹೊಗೆಯ ತಪಾಸಣೆ ಮಾಡಿದ ಮಂಡಳಿ 400 ಸರಕಾರಿ ವಾಹನಗಳ ವಿರುದ್ಧ ಕ್ರಮ ಕೈಗೊಂಡಿದೆ. ಈ ವಿಷಯವನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಪಡೆ ಸಭೆಯಲ್ಲಿ ಪ್ರಕಟಿಸಲಾಗಿದೆ.

ಹಿರಿಯ ಅಧಿಕಾರಿ ಡಾ. ಎ. ರವೀಂದ್ರ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಮಾಲಿನ್ಯ ನಿಯಂತ್ರಣ ಕಾರ್ಯಪಡೆಯು ಬೆಂಗಳೂರಿನಲ್ಲಿ ವಾಯುಮಾಲಿನ್ಯ ತಡೆಗಟ್ಟಿ, ನಾವು ಉಸಿರಾಡುವ ಗಾಳಿಯ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಹಲವು ಉಪಯುಕ್ತ ನಿರ್ಣಯಗಳನ್ನೂ ಕೈಗೊಂಡಿದೆ.

15 ವರ್ಷ ಓಡಿದ ವಾಹನಗಳಿಗೆ ಗೇಟ್‌ಪಾಸ್‌ : ಸರಕಾರಿ ಇಲಾಖೆಗಳಲ್ಲಿ 15 ವರ್ಷಕ್ಕಿಂತ ಹಳೆಯದಾದ ವಾಹನಗಳನ್ನು ಪಟ್ಟಿ ಮಾಡಿ, ಅವುಗಳ ಬಳಕೆ ನಿಲ್ಲಿಸಲು ಕ್ರಮ ಕೈಗೊಳ್ಳುವುದೂ ಈ ನಿರ್ಣಯಗಳಲ್ಲಿ ಒಂದಾಗಿದೆ. ಉಳಿದ ನಿರ್ಣಯಗಳು ಕೆಳಕಂಡಂತಿವೆ:

  • ನಗರ ಹೊರವಲಯದಲ್ಲಿರುವ ವಾಣಿಜ್ಯ ಮತ್ತು ಮೋಟಾರು ವಾಹನ ಇಲಾಖೆ ತಪಾಸಣಾ ಕೇಂದ್ರದಲ್ಲಿ ಹೊಗೆ ತಪಾಸಣೆ ಕೇಂದ್ರ ಸ್ಥಾಪಿಸುವುದು.
  • ಪೀಣ್ಯ ಮತ್ತು ರಾಜಾಜಿನಗರದಲ್ಲಿ ಸ್ಥಾಪಿಸಿರುವ ಗಣಕೀಕೃತ ಹೊಗೆ ತಪಾಸಣೆ ಕೇಂದ್ರದ ಮಾದರಿಯಲ್ಲಿ ಮಹಾನಗರ ಪಾಲಿಕೆ ಮತ್ತು ಪೊಲೀಸ್‌ ಇಲಾಖೆಗಳಲ್ಲಿ ಗಣಕೀಕೃತ ಹೊಗೆ ತಪಾಸಣೆ ಕೇಂದ್ರ ಸ್ಥಾಪನೆ.
  • ಕಲಬೆರಕೆ ಇಲ್ಲದ ಇಂಧನ ಬಳಸುವ ಆಟೋ ಚಾಲಕರನ್ನು ಪ್ರೋತ್ಸಾಹಿಸುವ ಯೋಜನೆ
  • ನಗರದಲ್ಲಿ ಮತ್ತಷ್ಟು ವಾಯು ಗುಣಮಟ್ಟ ತಪಾಸಣಾ ಕೇಂದ್ರಗಳ ಸ್ಥಾಪನೆಗೆ ಕೋರಿಕೆ.
lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
State pollution control board taken steps to check air pollution

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more