• search
For Quick Alerts
ALLOW NOTIFICATIONS  
For Daily Alerts

    ಹಟ್ಟಿ ಚಿನ್ನದ ಗಣಿಗೆ ವಿಶ್ವ ಸ್ವರ್ಣ ಸಮಿತಿ ಸದಸ್ಯತ್ವ ಹಾಗೂ ದಾಖಲೆ ಲಾಭ

    By Staff
    |

    ಬೆಂಗಳೂರು: ಭಾರತದ ಪ್ರಮುಖ ಬಂಗಾರದ ಗಣಿಯಾದ ಹಟ್ಟಿ ಗೋಲ್ಡ್‌ ಮೈನ್ಸ್‌ ಕಂಪನಿ ಲಿ. ಬುಧವಾರ (ಜ.16) ವಿಶ್ವ ಸ್ವರ್ಣ ಸಮಿತಿಯ ಸದಸ್ಯತ್ವ ಪಡೆಯುವುದರೊಂದಿಗೆ, ಈ ಸದಸ್ಯತ್ವ ಪಡೆದ ಮೊದಲ ಭಾರತೀಯ ಕಂಪನಿ ಎನ್ನುವ ಗೌರವಕ್ಕೆ ಪಾತ್ರವಾಯಿತು.

    ಸಮಿತಿಯ ಕಾರ್ಯದರ್ಶಿ ಹಾಗೂ ಅಂತರರಾಷ್ಟ್ರೀಯ ಸೇವೆಗಳ ನಿರ್ದೇಶಕ ಟ್ರೆವರ್‌ ಗ್ರೀನ್‌ವುಡ್‌ ಅವರು ಸದಸ್ಯತ್ವದ ಪ್ರಮಾಣಪತ್ರವನ್ನು ಹಟ್ಟಿ ಗಣಿಯ ಸಿಎಂಡಿ ಕೆ.ಎಲ್‌.ನೇಗಿ ಅವರಿಗೆ ಬುಧವಾರ ಹಸ್ತಾಂತರಿಸಿದರು. ಅಂದಹಾಗೆ, ಹಟ್ಟಿ ಚಿನ್ನದ ಗಣಿ ಸಮಿತಿಯ ಸದಸ್ಯತ್ವ ಪಡೆಯುತ್ತಿರುವ 40 ನೇ ಕಂಪನಿಯಾಗಿದೆ.

    ವಿಶ್ವದಲ್ಲಿ ಚಿನ್ನವನ್ನು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದಿಸುತ್ತಿರುವ ಕಂಪನಿಗಳಲ್ಲಿ ಹಟ್ಟಿ ಚಿನ್ನದ ಗಣಿಯೂ ಒಂದಾಗಿದೆ ಎಂದು ಸಮಿತಿಯ ಪ್ರಮಾಣ ಪತ್ರ ಹಸ್ತಾಂತರದ ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಗ್ರೀನ್‌ವುಡ್‌ ಹೇಳಿದರು. ಸಮಿತಿಯ ಸದಸ್ಯತ್ವ ಸಿಕ್ಕ ಬಗ್ಗೆ ಸಂತೋಷ ವ್ಯಕ್ತಪಡಿಸಿದ ನೇಗಿ ಅವರು, ಇದರಿಂದಾಗಿ ಸಮಿತಿಯಾಂದಿಗಿನ ಕಂಪನಿಯ ವ್ಯವಹಾರಗಳಿಗೆ ಅಧಿಕೃತ ಮೊಹರು ಬಿದ್ದಂತಾಗಿದೆ ಎಂದು ಬಣ್ಣಿಸಿದರು.

    ಚಿನ್ನದ ಗಣಿ ಚಿನ್ನದ ಹೆಜ್ಜೆಗಳು:

    ಕರ್ನಾಟಕ ರಾಜ್ಯ ಸರ್ಕಾರ ಸ್ವಾಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿ ಸ್ಥಾಪನೆಯಾದದ್ದು 1947 ರಲ್ಲಿ . ಕೋಲಾರ ಚಿನ್ನದ ಗಣಿ ಬೀಳುಮುಖವಾಗುತ್ತ ಹೋದಂತೆ ಪ್ರವರ್ಧಮಾನಕ್ಕೆ ಬಂದ ಹಟ್ಟಿ ಚಿನ್ನದ ಗಣಿ, ಇವತ್ತು ದೇಶದ ಒಟ್ಟು ಚಿನ್ನದ ಉತ್ಪಾದನೆಯಲ್ಲಿ ಪ್ರತಿಶತ 50 ರಷ್ಟು ಪಾಲನ್ನು ಹೊಂದಿದೆ.

    ವಿಶ್ವದ 16 ದೇಶಗಳಲ್ಲಿ 22 ಕಚೇರಿಗಳನ್ನು ಹೊಂದಿರುವ ವಿಶ್ವ ಸ್ವರ್ಣ ಸಮಿತಿಯ ಕೇಂದ್ರ ಕಚೇರಿ ಲಂಡನ್‌ನಲ್ಲಿದೆ. ವಿಶ್ವದ ವಿವಿಧ ಭಾಗಗಳ ಚಿನ್ನ ಉತ್ಪಾದಕರು ಈ ಸಮಿತಿಗೆ ನಿಧಿ ಪೂರೈಸುತ್ತಿದ್ದಾರೆ.

    9 ತಿಂಗಳಲ್ಲಿ 19 ಕೋಟಿ ರುಪಾಯಿ ಲಾಭ

    ಡಿಸೆಂಬರ್‌ 31 ಕ್ಕೆ ಕೊನೆಗೊಂಡ 9 ತಿಂಗಳ ಅವಧಿಯಲ್ಲಿ ಹಟ್ಟಿ ಚಿನ್ನದ ಗಣಿ 19 ಕೋಟಿ ರುಪಾಯಿಗಳ ನಿವ್ವಳ ಲಾಭ ಗಳಿಸಿದೆ. ಜಾಗತಿಕ ಸ್ಪರ್ಧೆಗೆ ಸಜ್ಜುಗೊಂಡಿರುವ ಗಣಿ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದೆ ಎಂದು ಹಟ್ಟಿ ಚಿನ್ನದ ಗಣಿಯ ಸಿಎಂಡಿ ನೇಗಿ ಹೇಳಿದರು.

    (ಪಿಟಿಐ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more