• search

ವಿಶ್ವಕ್ಷೋಭೆ ನೀಗುವ ನೊಗಕ್ಕೆ ಭಾರತದ ಹೆಗಲು- ಸಿದ್ಧಗಂಗೆ ಸ್ವಾಮೀಜಿ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ರಾಮನಗರ: ಸಂಕಷ್ಟಕ್ಕೆ ಸಿಲುಕಿರುವ ವಿಶ್ವದ ಮನುಕುಲವನ್ನು ಕಾಪಾಡುವ ಹೊಣೆ ಭಾರತದ ಮೇಲಿದ್ದು , ಈ ಜವಾಬ್ದಾರಿಯನ್ನು ಹೊರಲು ಭಾರತ ಸಜ್ಜಾಗಬೇಕು. ವಿಶ್ವಶಾಂತಿ ಮತ್ತು ಮನುಕುಲದ ಉದ್ಧಾರಕ್ಕೆ ಭಾರತೀಯರು ದಾರಿದೀಪವಾಗಬೇಕು ಎಂದು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ ಹೇಳಿದ್ದಾರೆ.

    ಜಗತ್ತಿನಲ್ಲಿ ಭಾರತಕ್ಕೆ ಉನ್ನತ ಸ್ಥಾನವಿದೆ. ಪ್ರಸ್ತುತ ತಲೆದೋರಿರುವ ಜಾಗತಿಕ ಕ್ಷೋಭೆಯ ಸಂದರ್ಭದಲ್ಲಿ ಧರ್ಮ, ನೀತಿ ಮತ್ತು ಶಾಂತಿಗೆ ಸಂಬಂಧಿಸಿದ ಭಾರತೀಯ ತತ್ವಗಳನ್ನು ಜಗತ್ತಿಗೆ ಪರಿಚಯಿಸಬೇಕಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ವೀರಶೈವ ವೇದಿಕೆ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡುತ್ತಿದ್ದರು.

    ಧರ್ಮಪೀಠಗಳು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಬೇಕು. ಆದರೆ, ಇವತ್ತಿನ ಸಮಾಜದ ಅನಿಷ್ಠಕ್ಕೆ ಧರ್ಮಪೀಠಗಳೂ ಕಾರಣವಾಗಿವೆ ಎಂದು ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.

    ಒಂದೆಡೆ ಹಸಿವಿನ ಕೂಗು, ಇನ್ನೊಂದೆಡೆ ಬಾಂಬ್‌ ಗದ್ದಲ

    ಪ್ರತಿಯಾಬ್ಬರೂ ಸುಖ-ಶಾಂತಿ ಬಯಸುತ್ತಾರೆ. ವಿಜ್ಞಾನ ಕ್ಷೇತ್ರದ ಪ್ರಗತಿ ಕಲ್ಪನೆಗೆ ಮೀರಿದ್ದರೂ ಅನ್ನ ಬಟ್ಟೆಯಿಲ್ಲದ ಕೋಟ್ಯಂತರ ಮಂದಿ ಸಮಾಜದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಬಾಂಬ್‌ ಮತ್ತಿತ್ತರ ಮಾರಕಾಸ್ತ್ರಗಳಿಗಾಗಿ ಕೋಟಿಗಟ್ಟಲೆ ಹಣ ಚೆಲ್ಲುವುದು ವಿಪರ್ಯಾಸ ಎಂದು ಸ್ವಾಮೀಜಿ ವಿಷಾದಿಸಿದರು.

    ನಾವು ಮನುಷ್ಯರು ಎನ್ನುವ ಪ್ರಜ್ಞೆ ಹಲವರಲ್ಲಿ ಜೀವಂತವಾಗಿಲ್ಲ . ಸಮಾಜದಲ್ಲಿ ತಮ್ಮ ಸ್ಥಾನ ಏನೆಂಬುದರ ಅರಿವೂ ಬಹುಮಂದಿಗಿಲ್ಲ . ಮಾನವ ಪ್ರಜ್ಞೆ ಜಾಗೃತಗೊಳಿಸಬೇಕಾದ ಕೆಲಸ ಜರೂರಾಗಿ ಆಗಬೇಕಿದೆ ಎಂದು ಶಿವಕುಮಾರಸ್ವಾಮೀಜಿ ಹೇಳಿದರು.

    ರಾಜಕಾರಣಿಗಳಿಂದ ಅಧರ್ಮ

    ದೇಶದಲ್ಲಿ ಅಧರ್ಮ ಮನೆ ಮಾಡಿದೆ. ಜನತೆ ಹಾದಿ ತಪ್ಪುತ್ತಿದ್ದಾರೆ. ಇದಕ್ಕೆಲ್ಲ ರಾಜಕಾರಣಿಗಳೇ ಕಾರಣ ಎಂದು ಗುರುವಂದನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ದೂರಿದರು. ದೇಶವನ್ನು ಸಂಕಷ್ಟದ ಪರಿಸ್ಥಿತಿಯಿಂದ ಮೇಲೆತ್ತಲು ಯುವ ಜನತೆಯಿಂದ ಮಾತ್ರ ಸಾಧ್ಯವಿದ್ದು , ಮಠಾಧೀಶರು ಯುವ ಜನತೆಗೆ ಮಾರ್ಗದರ್ಶನ ನೀಡಬೇಕೆಂದು ಗೌಡರು ಮನವಿ ಮಾಡಿದರು.

    ರಾಜ್ಯಸಭಾ ಸದಸ್ಯ ಎಂ. ರಾಜಶೇಖರಮೂರ್ತಿ, ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಕೇಂದ್ರದ ಮಾಜಿ ಸಚಿವ ಸಿ.ಎ.ಇಬ್ರಾಹಿಂ, ಮಾಜಿ ಸಚಿವ ವಿ. ಸೋಮಣ್ಣ , ಶಾಸಕ ಸಿ.ಎಂ.ಲಿಂಗಪ್ಪ , ಬೇಬಿ ಮಠದ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more