ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್‌, ಡೀಸೆಲ್‌ ಬೆಲೆ ಕೊಂಚ ಇಳಿಕೆ, ಅಬ್ಕಾರಿ ಸುಂಕ ಮೂರ್ಪಟ್ಟು ಏರಿಕೆ

By Staff
|
Google Oneindia Kannada News

ನವದೆಹಲಿ : ಕೇಂದ್ರ ಅಬಕಾರಿ ಕಾಯಿದೆಗೆ ತಿದ್ದುಪಡಿ ಮಾಡಿ ಹೊರಡಿಸಲಾಗಿರುವ ಸುಗ್ರೀವಾಜ್ಞೆಯಿಂದ ಪ್ರಾಪ್ತವಾಗಿರುವ ಅಧಿಕಾರವನ್ನು ಚಲಾಯಿಸುವ ಮೂಲಕ ಕೇಂದ್ರ ಸರ್ಕಾರವು ಶುಕ್ರವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್‌ ದರವನ್ನು ಕೊಂಚ ಇಳಿಸಿದೆ.

ಅದೇ ರೀತಿ ಅಬ್ಕಾರಿ ಸುಂಕವನ್ನು ಮೂರ್ಪಟ್ಟು ಅಂದರೆ ಶೇ.90ರಷ್ಟು ಏರಿಸಿದೆ. ಈ ಆದೇಶದಿಂದಾಗಿ ಪೆಟ್ರೋಲ್‌ ಬೆಲೆ ಒಟ್ಟಾರೆಯಾಗಿ ಲೀಟರ್‌ಗೆ 1.39 ಮತ್ತು ಡೀಸೆಲ್‌ ಬೆಲೆ ಲೀಟರಿಗೆ ಎಂಟು ಪೈಸೆಯಷ್ಟು ಕಡಿಮೆ ಆಗಿದೆ. ಆದರೆ, ಬೆಲೆ ಇಳಿಕೆ ದೇಶದ ವಿವಿಧ ಪ್ರದೇಶಗಳಲ್ಲಿ ವ್ಯತ್ಯಾಸ ಆಗಲಿದೆ. ಈ ವಿಷಯವನ್ನು ಪೆಟ್ರೋಲಿಯಂ ಖಾತೆ ಕೇಂದ್ರ ಸಚಿವ ರಾಮ್‌ನಾಯಕ್‌ ಪ್ರಕಟಿಸಿದ್ದಾರೆ.

ಪರಿಷ್ಕೃತ ದದ ರೀತ್ಯ ದೆಹಲಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ಗೆ 27.54 ಆಗಲಿದೆ ಹಿಂದೆ ಅಲ್ಲಿ 29.93 ರು. ಇತ್ತು. ಅದೇ ರೀತಿ ಡೀಸೆಲ್‌ ಬೆಲೆ 17.17ಇದ್ದದ್ದು 17.09 ಆಗಿದೆ. ಆದರೆ, ಬೆಂಗಳೂರಿನಲ್ಲಿ ಈ ಇಳಿಕೆ ಪ್ರಮಾಣ ಅತ್ಯಲ್ಪ. ಪೆಟ್ರೋಲ್‌ ಬೆಲೆ ಬೆಂಗಳೂರಿನಲ್ಲಿ ಲೀಟರ್‌ಗೆ 32.17 ಇದ್ದದ್ದು 31.92 ಆಗಿದೆ. ಡೀಸೆಲ್‌ ಬೆಲೆ 19.46ರಿಂದ 19.44ಕ್ಕೆ ಇಳಿದಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X