ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿಯವರೆಗೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ : ರಾಜ್ಯದ ಚಿಂತನೆ

By Staff
|
Google Oneindia Kannada News

ಉಡುಪಿ : ಭಾರತೀಯ ಮಹಿಳೆ ಶಿಕ್ಷಣ ವಂಚಿತಳು ಎಂಬುದು ಬಹು ಹಿಂದಿನಿಂದ ಕೇಳಿಬರುತ್ತಿರುವ ಆರೋಪ. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸಾಕ್ಷರತೆಯ ಪ್ರಮಾಣ ಅತ್ಯಲ್ಪ. ಕಾಲೇಜು ಮೆಟ್ಟಿಲು ಏರುವ ಹೆಣ್ಣುಮಕ್ಕಳಂತೂ ಬಲು ಅಪರೂಪ.

ಕಾಲೇಜು ಓದುವ ಆಸೆ ಹೆಣ್ಣು ಮಕ್ಕಳಿಗಿದ್ದರೂ - ಹೆಣ್ಣು ಹುಡುಗಿಗೇಕೆ ಕಾಲೇಜು ಎನ್ನುವ ಧೋರಣೆ ಕೆಲವು ಪೋಷಕರದಾದರೆ, ಮಗಳನ್ನು ಓದಿಸುವ ಹಂಬಲವಿದ್ದರೂ ಆರ್ಥಿಕ ಅಡಚಣೆಯಿಂದ ಸಾಕು ಬಿಡಮ್ಮ ಎಂದು , ಎಸ್ಸೆಸ್ಸೆಲ್ಸಿ ಆದೊಡನೆ ಮಗಳಿಗೆ ಗಂಡು ನೋಡುವ ಕನ್ಯಾಪಿತೃಗಳ ಸಂಖ್ಯೆಯೂ ಕಡಿಮೆ ಏನಿಲ್ಲ.

ಈ ಹಿನ್ನೆಲೆಯಲ್ಲಿ ಹೆಣ್ಣುಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಬಗ್ಗೆ ರಾಜ್ಯ ಸರಕಾರ ಗಂಭೀರವಾಗಿ ಚಿಂತಿಸುತ್ತಿದೆ. ಈ ವಿಷಯವನ್ನು ರಾಜ್ಯ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್‌ ಇಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಈ ಸಂಬಂಧ ನೀತಿಯಾಂದನ್ನು ಸರಕಾರ ಶೀಘ್ರವೇ ಹೊರಡಿಸಲಿದೆ. ಹೆಣ್ಣು ಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಸಂಬಂಧ ಅಂತರ ವಿಶ್ವವಿದ್ಯಾಲಯದ ಬೋರ್ಡ್‌ ಮೀಟಿಂಗ್‌ಗಳಲ್ಲಿ ಚರ್ಚಿಸಲಾಗಿದ್ದು, ಇದನ್ನು ಸರಕಾರದ ಶಿಕ್ಷಣ ನೀತಿಯಲ್ಲೇ ಸೇರಿಸುವ ಬಗ್ಗೆ ಸರಕಾರ ತೀರ್ಮಾನಿಸಿದೆ ಎಂದರು.

ಕಳೆದ ಎರಡು ವರ್ಷಗಳ ಅವಧಿಯಲ್ಲಿ ವೃತ್ತಿ ಶಿಕ್ಷಣವನ್ನು ಅಳವಡಿಸುವ ಮೂಲಕ ಪದವಿ ಶಿಕ್ಷಣಕ್ಕೆ ಹೊಸ ಆಯಾಮ ನೀಡಲಾಗಿದೆ ಎಂದ ಅವರು, ರಾಜ್ಯದ ವಿಶ್ವವಿದ್ಯಾಲಯಗಳು ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವಂತಹ ಶಿಕ್ಷಣ ನೀಡುವಲ್ಲಿ ವಿಫಲವಾಗಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.

(ಪಿ.ಟಿ.ಐ/ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X