ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇದು ಇ- ಟಪಾಲು, ಕನ್ನಡದಲ್ಲೂ ಕಳಿಸಬಹುದು ನೀವು ಇ-ಮೇಲು

By Staff
|
Google Oneindia Kannada News

ಬೆಂಗಳೂರು : ಕಸ್ತೂರಿ ಕನ್ನಡದಲ್ಲೇ ನಿಮ್ಮ ಆತ್ಮೀಯರಿಗೆ ಇ-ಮೇಲ್‌ ಕಳಿಸಬೇಕೆಂಬ ಆಸೆ ಇದೆ ಅಲ್ಲವೇ. ಈಗ ಅಂತಹ ಒಂದು ಸುವರ್ಣಾವಕಾಶ ಜ.16ರಿಂದ ನಿಮ್ಮದಾಗುತ್ತಿದೆ. ಇಂಗ್ಲಿಷ್‌ ಸೇರಿ, 11 ಪ್ರಮುಖ ಭಾರತೀಯ ಭಾಷೆಗಳಲ್ಲಿ ಇ-ಟಪಾಲು ಅರ್ಥಾತ್‌ ಇ-ಮೇಲ್‌ ಕಳಿಸುವ ಅವಕಾಶ ಭಾರತೀಯರಿಗೆ ಲಭ್ಯವಾಗಲಿದೆ.

ಈ ಸೌಲಭ್ಯ ಮೊದಲು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಪ್ರಾರಂಭವಾಗುತ್ತಿದ್ದು, ಉತ್ತರೋತ್ತರದಲ್ಲಿ ಹಿಂದಿ, ಮರಾಠಿ, ತಮಿಳು, ಮಲೆಯಾಳಂ, ತೆಲುಗು, ಮರಾಠಿ, ಗುಜರಾತಿ, ಪಂಜಾಬಿ, ಬೆಂಗಾಲಿ, ಒರಿಯಾ ಮತ್ತು ಅಸ್ಸಾಮಿ ಭಾಷೆಗಳಿಗೂ ವಿಸ್ತರಣೆಯಾಗಲಿದೆ.

ಇ-ಟಪಾಲ್‌ನ ಸೌಲಭ್ಯವನ್ನು ಸಾದರಪಡಿಸುತ್ತಿರುವವರು ಯಾರು ಗೊತ್ತೆ. ಕಳೆದ ವರ್ಷ ಆಗಸ್ಟ್‌ ತಿಂಗಳವರೆಗೆ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿ ಪತ್ರಿಕಾ ಬಳಗವಾದ ದಿ. ಪ್ರಿಂಟರ್ಸ್‌ (ಮೈಸೂರು) ಪ್ರೆೃವೇಟ್‌ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದ ಕೆ.ಎನ್‌. ಹರಿಕುಮಾರ್‌.

ಕನ್ನಡ ಚಾಟ್‌ : ಇದಲ್ಲದೆ ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ನೇರ ಚಾಟ್‌ ಸೌಲಭ್ಯವನ್ನು ಕಲ್ಪಿಸಲು ಮೆಸೆಂಜರ್‌ ಸೇವೆಯನ್ನೂ ಕನ್ನಡಿಗರಿಗೆ ನೀಡುವ ಕಾರ್ಯಯೋಜನೆಯನ್ನು ಅವರು ಸಿದ್ಧಪಡಿಸುತ್ತಿದ್ದಾರೆ. ಮೆಸೆಂಜರ್‌ ಕೂಡ ಅತಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಕಾವೇರಿ ಕಮ್ಯೂನಿಕೇಷನ್ಸ್‌ ಪ್ರೆೃವೇಟ್‌ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕರೂ ಆಗಿರುವ ಹರಿಕುಮಾರ್‌ ಈ ವಿಷಯವನ್ನು ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಅಂದಹಾಗೆ ಇ ಮೇಲ್‌ ಸೌಲಭ್ಯ ನೀಡುತ್ತಿರುವ ಸಂಸ್ಥೆ ಕಾವೇರಿಯೇ. ಕೇವಲ ಇಂಗ್ಲಿಷ್‌ ಮೇಲ್‌ ಸೌಲಭ್ಯವೂ ಸೇರಿದಂತೆ ದ್ವಿಭಾಷಾ ಮೇಲ್‌ ಸೌಲಭ್ಯವೂ ಇಲ್ಲಂಟು. ಪ್ರತಿಯಾಬ್ಬ ಮೇಲ್‌ ಬಳಕೆದಾರರಿಗೂ ಇಲ್ಲಿ ಉಚಿತ ಮತ್ತು ಕೊಳ್ಳುವ ಸೇವೆಯ ಅವಕಾಶ ಇದೆ. ಹಣ ನೀಡಿ ಇ-ಮೇಲ್‌ ಬಳಸುವ ಗ್ರಾಹಕರಿಗೆ ಹೆಚ್ಚಿನ ಹಾಗೂ ಅತ್ಯಾಧುನಿಕ ಸೌಲಭ್ಯಗಳು ದೊರಕಲಿವೆ. ಅವರಿಗೆ ಬೃಹತ್‌ ಪ್ರಮಾಣದಲ್ಲಿ ಮೇಲ್‌ ಸಂಗ್ರಹಿಸಿಟ್ಟುಕೊಳ್ಳುವ ಸ್ಥಳಾವಕಾಶದ ಸೌಲಭ್ಯ ಸಿಗಲಿದೆ. ದೊಡ್ಡ ಗಾತ್ರದ ಮತ್ತು ಎಂ.ಬಿ. ತೂಕದ ಕಡತಗಳನ್ನು ಮೇಲ್‌ ಜೊತೆಗೆ ಸೇರಿಸಿ ಕಳಿಸುವ ಅವಕಾಶವೂ ದೊರಕಲಿದೆ.

ವರ್ಷದೊಳಗೆ ಕರ್ನಾಟಕದ ನೆರೆ ರಾಜ್ಯದ ಭಾಷೆಗಳ ಮೇಲ್‌ ಸೌಲಭ್ಯ ಒದಗಿಸಲಾಗುತ್ತದೆ. ಒಂದೆರಡು ವರ್ಷದಲ್ಲೇ ಮಿಕ್ಕ ಭಾಷೆಗಳಿಗೂ ಈ ಸೌಲಭ್ಯ ಒದಗಿಸಲಾಗುವುದು ಎಂದು ಹರಿಕುಮಾರ್‌ ಹೇಳಿದ್ದಾರೆ. ಭಾರತದಲ್ಲಿ ವಾಸ್ತವವಾಗಿ ಸ್ಥಳೀಯ ಭಾಷೆಗಳ ಇ-ಅಂಚೆ ಸೇವೆಗೆ ಬೇಡಿಕೆ ಇದೆ. ಇದರಿಂದ ಆದಾಯವನ್ನೂ ನಿರೀಕ್ಷಿಸಬಹುದಾಗಿದೆ ಎಂದೂ ಅವರು ತಿಳಿಸಿದ್ದಾರೆ.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X