ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎರಡು ದಿನದ ರಜೆ ಹೇಗೆ ಕಳೆವುದೆಂಬ ಚಿಂತೆಯೇ ಬನ್ನಿ ಏರ್‌ಷೋಗೆ

By Staff
|
Google Oneindia Kannada News

Colour full balloonಬೆಂಗಳೂರು : ಭಾನುವಾರ ಸಾರ್ವತ್ರಿಕ ರಜೆ ರಜೆ, ಸೋಮವಾರ ಸಂಕ್ರಾಂತಿ ಅಂದೂ ಸರಕಾರಿ ರಜೆ. ಮಧ್ಯಾಹ್ನ ಹಬ್ಬದ ಊಟ ಮಾಡಿದ ಮೇಲೆ ಏನು ಮಾಡುವುದಪ್ಪ ಅಂತೀರಾ? ಅಂದು ಬೆಂಗಳೂರಿನ ಬಾನಂಗಳದಿ ಹಾರು ಹಕ್ಕಿಗಳ ಆಕರ್ಷಕ ಚಮತ್ಕಾರ ನಡೆಯಲಿದೆ. ಮನಸ್ಸಿಗೆ ಮುದ, ಮೆದುಳಿಗೆ ಜ್ಞಾನ ತುಂಬುವ ಈ ಪ್ರದರ್ಶಕ್ಕಿಂತ ಉತ್ತಮ ಅವಕಾಶ ಬೇಕೆ, ಬನ್ನಿ ಜಕ್ಕೂರಿಗೆ ತೆರಳೋಣ...

ಭಾರತೀಯ ಏರೋನಾಟಿಕಲ್‌ ಸೊಸೈಟಿಯ ಬೆಂಗಳೂರು ಘಟಕವು ನಗರದ ಜಕ್ಕೂರು ವಿಮಾನ ನಿಲ್ದಾಣದಲ್ಲಿ ಜ.13 ಮತ್ತು 14ರ ಮಧ್ಯಾಹ್ನ 3 ಗಂಟೆಗೆ ಈ ಪ್ರದರ್ಶನ ನಡೆಸುತ್ತಿದೆ. ಪ್ರದರ್ಶನ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ಉಂಟು.

ಆದರೆ ಪ್ರವೇಶ ದರ ನೀಡಬೇಕು ಅಷ್ಟೇ. ಪ್ರವೇಶ ದರವೂ ದುಬಾರಿ ಏನಲ್ಲ. ವಯಸ್ಕರಿಗೆ 20 ರುಪಾಯಿ ಮತ್ತು 15 ವರ್ಷದೊಳಗಿನ ಮಕ್ಕಳಿಗೆ 10 ರುಪಾಯಿ. ಈ ಬಾರಿಯ ಪ್ರದರ್ಶನದ ಪ್ರಮುಖ ಆಕರ್ಷಣೆ ಏನು ಗೊತ್ತೆ ಪುಟ್ಟ ಪುಟ್ಟ ವಿಮಾನ ಹಾಗೂ ಗ್ಲೈಡರ್‌ ಹಾರಾಟ.

ನೀಲ ಗಗನದಲ್ಲಿ ಬಣ್ಣ ಬಣ್ಣದ ರಂಗೋಲಿ ಬಿಡಿಸುವ ಈ ವಿಮಾನಗಳ ಜೊತೆ ಪ್ಯಾರಾಚೂಟ್‌ಗಳು, ಮೋಟಾರ್‌ ಗ್ಲೈಡರ್‌ಗಳು, ಮೈಕ್ರೋ ಲೈಟ್ಸ್‌ ಮತ್ತು ಪವರ್ಡ್‌ ಹ್ಯಾಂಗ್‌ ಗ್ಲೈಡರ್‌ಗಳೂ ತಮ್ಮ ಚಮತ್ಕಾರ ಮೆರೆಯಲಿವೆ. ವಾಯುಪಡೆಯ ಪೈಲೆಟ್‌ಗಳು, ಪ್ಯಾರಾರೆಜಿಮೆಂಟ್‌ನ ಸಿಬ್ಬಂದಿ ಸ್ಕೈಡೈವಿಂಗ್‌ ಪ್ರದರ್ಶನವನ್ನೂ ಈ ಸಂದರ್ಭದಲ್ಲಿ ನೀಡಲಿದ್ದಾರೆ.

ತಡವೇಕೆ ಈಗಲೇ ಟಿಕೆಟ್‌ ಬುಕ್‌ ಮಾಡಿ. (080) 5297159, 5086106, 5086524, 5228341, 5586189, 5523279 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ ಕೂಡ ಟಿಕೆಟ್‌ ಬಗ್ಗೆ ಮಾಹಿತಿ ಪಡೆಯಬಹುದು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X