• search

ಸ್ವದೇಶೀಕರಣ ಆಂದೋಲನಕ್ಕೆ ನಿಮ್ಮದೊಂದು ಸಹಿಯಿರಲಿ- ರಾಜೀವ್‌ ದೀಕ್ಷಿತ್‌

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಮಂಗಳೂರು : ದೇಶದ ಸಾಮಾಜಿಕ ವ್ಯವಸ್ಥೆಯನ್ನು ವಿದೇಶಿ ಪ್ರಭಾವದಿಂದ ಮುಕ್ತಗೊಳಿಸಿ ಸಂಪೂರ್ಣ ಸ್ವದೇಶೀಕರಣಗೊಳಿಸಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಆಜಾದಿ ಬಚಾವೊ ಆಂದೋಲನದ ರೂವಾರಿ ರಾಜೀವ್‌ ದೀಕ್ಷಿತ್‌ ಹೇಳಿದ್ದಾರೆ.

    ವಿಶ್ವ ವ್ಯಾಪಾರ ಸಂಘಟನೆ ಹಾಗೂ ಬಹುರಾಷ್ಟ್ರೀಯ ಕಂಪನಿಗಳು ಸ್ವದೇಶೀಕರಣ ಪ್ರಕ್ರಿಯೆಗೆ ತೊಡಕಾಗಿದ್ದು , ಅವುಗಳ ವಿರುದ್ಧ ಜಾಗೃತಿ ಆಂದೋಲನ ಕೈಗೆತ್ತಿಕೊಳ್ಳಲಾಗುವುದು. ವಿತ್ತ ವ್ಯವಸ್ಥೆ ಮಾತ್ರವಲ್ಲದೆ- ಕೃಷಿ, ವಿಜ್ಞಾನ, ಆರೋಗ್ಯ, ಶಿಕ್ಷಣ, ರಾಜಕೀಯ ಮುಂತಾದ ಎಲ್ಲ ಕ್ಷೇತ್ರಗಳನ್ನೂ ವಿದೇಶಿ ಪ್ರಭಾವದಿಂದ ಹೊರತರುವಂತೆ, ಒಂದು ಕೋಟಿ ಜನರ ಸಹಿ ಸಂಗ್ರಹಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೀವ್‌ ದೀಕ್ಷಿತ್‌ ಹೇಳಿದರು.

    ಸಹಿ ಸಂಗ್ರಹಣೆ ಕಾರ್ಯಕ್ರಮದಡಿ ಕರ್ನಾಟಕದಿಂದ 5 ಲಕ್ಷ ಸಹಿ ಸಂಗ್ರಹಿಸಲಾಗುವುದು. ಸಹಿ ಸಂಗ್ರಹಣೆ ನಂತರ 1 ಕೋಟಿ ಸಹಿಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಸರ್ಕಾರ ಸ್ಪಂದಿಸದಿದ್ದಲ್ಲಿ , ಸರ್ಕಾರದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲಾಗುವುದು.

    ರಾಜೀವ್‌ ದೀಕ್ಷಿತ್‌ ಸುದ್ದಿಗೋಷ್ಠಿಯ ಇತರ ಮುಖ್ಯಾಂಶಗಳು :

    • ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಏಷ್ಯನ್‌ ಅಭಿವೃದ್ಧಿ ಬ್ಯಾಂಕ್‌(ಎಡಿಬಿ) ಯೋಜನೆಯ ವಿರುದ್ಧ ಪ್ರತಿಭಟನೆ ನಡೆಸ ಲಾಗುವುದು. ಪೋಸ್ಟ್‌ಕಾರ್ಡ್‌ ಚಳವಳಿಯ ಮೂಲಕ ಎಡಿಬಿ ಸಾಲ ಪಡೆಯದಿರಲು ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಒತ್ತಾಯಿಸಲಾಗುವುದು.
    • ಕೀಟನಾಶಕ ಬಳಕೆ ಸಲ್ಲದು. ಕೀಟನಾಶಕದ ಬದಲು ಅತ್ಯುತ್ತಮ ಕೀಟನಾಶಕವಾದ ಗೋಮೂತ್ರ ಬಳಸುವಂತೆ ರೈತರಲ್ಲಿ ಜಾಗೃತಿ ಮೂಡಿಸಲಾಗುವುದು.
    • ಆಜಾದಿ ಆಂದೋಲನದ ಸಮಿತಿ ಯನ್ನು ಮಂಗಳೂರಿನಲ್ಲಿ ಸ್ಥಾಪಿಸುವ ಉದ್ದೇಶವಿದೆ.
    • ಶಿಕ್ಷಣ ವ್ಯವಸ್ಥೆಯನ್ನು ಸ್ವದೇಶೀಕರಣ ಗೊಳಿಸುವ ನಿಟ್ಟಿನಲ್ಲಿ ಪರ್ಯಾಯ ಶಿಕ್ಷಣ ಸಿಲೆಬಸ್‌ ತಯಾರಿ ನಡೆಯುತ್ತಿದೆ. 2003 ರ ವೇಳೆಗೆ ಅದನ್ನು ಸರಕಾರಕ್ಕೆ ಸಲ್ಲಿಸಲಾಗುವುದು.
    • ಜನವರಿ 13 ಮತ್ತು 14 ರಂದು ಬೆಂಗಳೂರಿನ ರಾಜಾಜಿನಗರದ ಕೆ.ಇ.ಬಿ. ಸಮುದಾಯ ಭವನದಲ್ಲಿ ಆಂದೋಲನದ ಸ್ವಯಂ ಸೇವಕರಿಗಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಎಲ್ಲರಿಗೂ ಮುಕ್ತ ಪ್ರವೇಶವಿದೆ.
    ಅಂಕಣಕಾರ ಡಾ। ರವೀಂದ್ರನಾಥ ಶಾನುಭಾಗ್‌, ರೋಟರಿ ಕ್ಲಬ್‌ ಮಂಗಳೂರು ಪೂರ್ವದ ಅಧ್ಯಕ್ಷ ಎಂ. ಎಸ್‌. ಗುರುರಾಜ್‌, ಎನ್‌.ಜಿ.ಒ. ಟಾಸ್ಕ್‌ಫೋರ್ಸ್‌ನ ಸಂಚಾಲಕ ಹರ್ಷ ಡಿಸೋಜಾ, ಆಜಾದಿ ಬಚಾವೊ ಆಂದೋಲನದ ಕರ್ನಾಟಕ ಸಂಚಾಲಕ ಜಸ್‌ಬೀರ್‌ ಸಿಂಗ್‌ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

    (ಇನ್ಫೋ ವಾರ್ತೆ)

    Do you Agree with Rajiv Dixit?

    ವಾರ್ತಾ ಸಂಚಯ
    ಹುಬ್ಬಳ್ಳಿಯಲ್ಲಿ ರಾಜೀವ್‌ ದೀಕ್ಷಿತ್‌; ಸ್ವದೇಶಿ ಉದ್ದಿಮೆ ಉಳಿಸಲು ಕರೆ

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more