• search

ಬೆಳಗಾವಿ ಎಲ್ಲಮ್ಮನಿಗೆ ಹೋಳಿಗೆ, ರಾಯಚೂರು ದುರ್ಗೆಗೆ 50 ಕೋಣ, 200 ಆಡು !

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಳಗಾವಿ/ರಾಯಚೂರು : ಕರ್ನಾಟಕದಲ್ಲಿ ಎರಡು ಜಾತ್ರೆಗಳು. ಒಂದೆಡೆ ಹೋಳಿಗೆ ನೈವೇದ್ಯವಾದರೆ, ಮತ್ತೊಂದೆಡೆ 50 ಕೋಣ, 200 ಆಡಿನ ರಕ್ತ- ಮಾಂಸ ದೇವಿಗೆ ಅರ್ಪಣೆಯಾಗಿದೆ. ಮೌಢ್ಯ ಮೀರಿದ ಸಮಾಜ ಹಾಗೂ ಮೌಢ್ಯಕ್ಕೇ ಅಂಟಿಕೊಂಡ ತಾಂಡ ಎರಡೂ ಇರುವುದು ನಮ್ಮ ಕರ್ನಾಟಕದಲ್ಲೇ.

    ಬೆಳಗಾವಿ ಜಿಲ್ಲೆಯ ಕೊಕಟನೂರು ಎಲ್ಲಮ್ಮನ ಜಾತ್ರೆ ಈ ಹಿಂದೆ ಪ್ರಾಣಿ ಬಲಿ, ಅರೆ ಬೆತ್ತಲೆ ಉತ್ಸವ, ದೇವದಾಸಿ ಬಿಡುವುದು ಇವುಗಳಿಲ್ಲದೆ ಮುಗಿಯುತ್ತಲೇ ಇರಲಿಲ್ಲ. ಆದರೆ ಈ ಬಾರಿ ಸ್ವಯಂ ಸೇವಾ ಸಂಘಟನೆಗಳ ಜಾಗೃತಿ ಕಾರ್ಯಕ್ರಮದ ದೆಸೆಯಿಂದ ಎಲ್ಲಮ್ಮನಿಗೆ ಕೇವಲ ಹೋಳಿಗೆ ನೈವೇದ್ಯವಾಗಿದೆ! ಪ್ರಾಣಿ ಬಲಿ ಕೊಡಲು ಹೊರಟವರನ್ನು ಪೊಲೀಸರು ತಡೆಯುತ್ತಿದ್ದ ದೃಶ್ಯವೂ ಇಲ್ಲುಂಟು. ಇದಕ್ಕೆ ಅಪವಾದವೋ ಎಂಬಂತೆ- ಇನ್ನೊಂದು ಕಡೆ, ಪ್ರಾಣಿಯನ್ನು ಕಡಿದು ಮಾಂಸ ಬೇಯಿಸಿ, ಯಾರಿಗೂ ತಿಳಿಯದಂತೆ ದೇವಿಗೆ ಅರ್ಪಿಸುತ್ತಿದ್ದಾರೆ. ಆದರೆ, ಈ ಪರಿಯ ಸಾಮಾಜಿಕ ಬೆಳವಣಿಗೆ ಕೆಲವರನ್ನು ಚಕಿತರನ್ನಾಗಿಸಿದ್ದರೂ, ಮೌಢ್ಯ ಕಳಚಿಕೊಂಡ ನೆಮ್ಮದಿ ಅವರಲ್ಲಿ.

    ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ವೀರಗೋಟ್‌ ತಾಂಡಾದಲ್ಲಿ ಬುಧವಾರ ಇನ್ನೊಂದು ಜಾತ್ರೆ ನಡೆಯಿತು. ದೇವಿ ದುರ್ಗಮ್ಮನಿಗೆ ರಕ್ತವೇ ಆಗಬೇಕಂತೆ. ಅದಕ್ಕಾಗಿ ರಕ್ತದ ಹೊಂಡವನ್ನೇ ಭಕ್ತರು ನಿರ್ಮಿಸಿದರು. 50 ಕೋಣ, 200 ಆಡುಗಳು ಬಲಿಪಶುಗಳಾದವು. ಲಿಂಗಸೂಗೂರು ಮತ್ತು ಮುದ್ಗಲ್‌ ಪುರ ಪಂಚಾಯ್ತಿ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಕೆಲಸಕ್ಕೆ ಬಹುತೇಕ ಪೊಲೀಸರು ನಿಯೋಜಿತರಾಗಿದ್ದರು. ಈ ಕಾರಣ ವೀರಗೋಟ್‌ ತಾಂಡಾದಲ್ಲಿ ನಡೆದ ಭಾರೀ ಪ್ರಮಾಣದ ಪ್ರಾಣಿ ಬಲಿಯನ್ನು ತಡೆಯುವುದು ಸಾಧ್ಯವಾಗಿಲ್ಲ !

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more