ಯೂರೊ ಮಾದರಿಯಲ್ಲಿ ಏಷ್ಯಾದ ಸಮಾನ ಕರೆನ್ಸಿಯಾಗಿ ‘ಯೆನ್’?
ಬೆಂಗಳೂರು: ಯೂರೋಪಿನ 12 ರಾಷ್ಟ್ರಗಳಿಗೆ ಒಂದೇ ಕರೆನ್ಸಿಯಾಗಿರುವ ‘ಯೂರೊ’ ಮಾದರಿಯಲ್ಲಿ ಏಷ್ಯನ್ ರಾಷ್ಟ್ರಗಳಿಗೂ ಸಮಾನ ಕರೆನ್ಸಿ ಯಾಂದು ಬೇಡವೆ?
ಇಂಥದೊಂದು ಕರೆನ್ಸಿಯ ಅಗತ್ಯ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ ಎನ್ನುತ್ತಾರೆ ವಿಶ್ವ ವ್ಯಾಪಾರ ಸಂಸ್ಥೆಯ ಡೈರೆಕ್ಟರ್ ಜನರಲ್- ಡೆಸಿಗ್ನೇಟ್ ಡಾ.ಸುಪಚಾಯ್ ಪಣಿಟ್ಚಪಕಡಿ. ಹಾಗಾದರೆ ಅಂಥ ಕರೆನ್ಸಿ ಯಾವುದು? ಜಪಾನಿನ ‘ಯೆನ್’ ಅಲ್ಲದೆ ಇನ್ನಾವುದು ಅನ್ನುತ್ತಾರೆ ಸುಪಚಾಯ್, ಖಚಿತ ಧ್ವನಿಯಲ್ಲಿ !
ಜಪಾನಿನ ‘ಯೆನ್’ ಏಷ್ಯಾದ ಸಾರ್ವತ್ರಿಕ ಕರೆನ್ಸಿಯಾಗಿ ಹೊರ ಹೊಮ್ಮುವ ವಿಶ್ವಾಸ ತಮಗಿದೆ. ಯೂರೊ ಮಾದರಿಯಲ್ಲಿ ಏಷ್ಯಾದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಯೆನ್ ಯಶಸ್ವಿಯಾಗುವ ನಂಬಿಕೆಯೂ ತಮಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸುಪಚಾಯ್ ಹೇಳಿದರು.
ನೂತನ ಸಮಾನ ಕರೆನ್ಸಿಯಾಂದನ್ನು ಏಷ್ಯಾದ ರಾಷ್ಟ್ರಗಳು ರೂಪಿಸಿಕೊಳ್ಳುವ ಯೋಜನೆ ಪ್ರಾಯೋಗಿಕವಾದುದಲ್ಲ . ಯೆನ್ ಅನ್ನು ಸಮಾನ ಕರೆನ್ಸಿಯಾಗಿ ಒಪ್ಪುವ ಮೂಲಕ ಏಷ್ಯನ್ ರಾಷ್ಟ್ರಗಳು ಹೆಚ್ಚು ಲಾಭ ಹೊಂದಬಹುದು. ಯೆನ್ ಅನ್ನು ಅಂತರರಾಷ್ಟ್ರೀಕರಣಗೊಳಿಸುವ ಪ್ರಕ್ರಿಯೆಯಲ್ಲಿ ಜಪಾನ್ ಸರ್ಕಾರ ಈಗಾಗಲೇ ತೊಡಗಿದೆ. ಜಪಾನ್ನೊಂದಿಗೆ ವ್ಯಾಪಾರ ನಡೆಸುವ ರಾಷ್ಟ್ರಗಳು ಡಾಲರ್ ಮಾತ್ರವಲ್ಲದೆ ಯೆನ್ ಕರೆನ್ಸಿಯನ್ನು ಕೂಡ ಬಳಸುತ್ತಿವೆ ಎಂದು ಸುಪಚಾಯ್ ತಮ್ಮ ವಾದಕ್ಕೆ ಸಮರ್ಥನೆ ನೀಡಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...