• search

ಹಾಲು,ಮೊಸರು, ತುಪ್ಪದಲ್ಲಿ ಕಳೆದುಹೋಗುವ ದುಡ್ಡು ತುಂಬಿಕೊಳ್ಳುವುದು ಹೇಗೆ?

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    *ಎಸ್ಕೆ. ಶಾಮಸುಂದರ

    ಬೆಂಗಳೂರು ಡೈರಿಯವರು ಹಾಲಿನ ಬೆಲೆಯನ್ನು ಹೆಚ್ಚಿಸುತ್ತಿದ್ದಾರೆ. ಹಾಗಂತ ಸುದ್ದಿ. ಬೆಂಗಳೂರಿನಿಂದ ಹೊರಡುವ ಕರ್ನಾಟಕದ ಎಲ್ಲ ಕನ್ನಡ, ಇಂಗ್ಲಿಷ್‌, ತಮಿಳು, ಉರ್ದು, ಮಲಯಾಳಂ ಪತ್ರಿಕೆಗಳ ಮುಖಪುಟದಲ್ಲಿ ಇವತ್ತು ಇದೇ ಸುದ್ದಿ. ಅಯ್ಯಯ್ಯೋ ..ಹಾಲಿನ ರೇಟು ಜಾಸ್ತಿ ಆಗುತ್ತಿದೆಯಾ? ನರಸಿಂಹರಾಜ ಕಾಲೋನಿಯಲ್ಲಿ, ಕಾಕ್ಸ್‌ ಟೌನಿನಲ್ಲಿ, ಅಲಸೂರಿನಲ್ಲಿ, ಗಿರಿನಗರದಲ್ಲಿ , ಹಳೆಬೆಂಗಳೂರಿನಲ್ಲಿ , ಹೊಸ ಬೆಂಗಳೂರಿನಲ್ಲಿ ನೆಲೆಗೊಂಡಿರುವ ನಮ್ಮ ಹೆಂಗಸರು ಹಾಲಿನ ಪಾತ್ರೆಗಳನ್ನು ಸ್ಟೌವ್‌ಗೆ ರಮ್‌ ಅಂತ ಕುಕ್ಕಿದರು ಅಂತ ಸುದ್ದಿ. ಪಾತ್ರೆಗಳ ತಳ ಸೊಟ್ಟಗಾಯಿತು..ಮುಂದೇನು ?

    ಅದು , ವಿಶ್ಲೇಷಣೆ.

    ಹಾಲಿನ ಬೆಲೆ ಏರಿದ ದಿನ ನಮ್ಮ ಮನೆಗಳಲ್ಲಿ ನಾವು ನಾವಾಗಿರುವುದಿಲ್ಲ. ಇಡೀ ಕುಟುಂಬದ ಅರ್ಥ ವ್ಯವಸ್ಥೆ ಏರುಪೇರಾಗಿ, ಗಂಡ ಹೆಂಡತಿಯ ನಡುವೆ ಜಗಳ ಕದನಗಳೂ ನಡೆಯುತ್ತವೆ. ಸೆನ್ಸಿಬಲ್‌ ಅತ್ತೆ ಮಾವಂದಿರು ಜಗಳ ಬಿಡಿಸುವ ಹೊತ್ತಿಗೆ ಗುಜರಾತ್‌ ಮನೆಗೆ ಬಂದಂತಾಗಿರುತ್ತದೆ.

    ನಮ್ಮಗಳ ಪ್ರತಿಯಾಂದು ದೈನಂದಿಕ ಸಮಸ್ಯೆಗಳಿಗೆ ಪರಿಹಾರ ಅಲ್ಲೆ ಎಲ್ಲೋ ಇರುತ್ತದೆ. ನಮ್ಮ ಕಣ್ಣಿಗೆ ಅಕಾಲಿಕ ಪೊರೆ ಬಂದಿರುತ್ತದೆ. ತೆರೆದು ನೋಡುವ ಹೊತ್ತಿಗೆ ಪಶ್ಚಾತ್ತಾಪ ಪಡುವ ಸಮಯ ನಮ್ಮನ್ನು ನೋಡಿ ನಗುತ್ತಿರುತ್ತದೆ. ಅಂದರೆ, ಹಾಲಿನ ಬೆಲೆ ಏರಿಕೆ ಸಮಸ್ಯೆಗೆ ಪರಿಹಾರ ಇಲ್ಲೇ ಎಲ್ಲೋ ಇದೆ ಅಂತ ಸಜೆಸ್ಟ್‌ ಮಾಡ್ತಾ ಇದೀನಿ ಅಂದುಕೊಂಡಿರಾ ?

    ನೀವು ಕಿಲಾಡಿಗಳು. ಎಷ್ಟೇ ಆಗಲಿ , ಕನ್ನಡಿಗರು ತಾನೆ !

    ಹಾಲಿನ ಬೆಲೆ ಏರುತ್ತಿರುವುದು ಇದು ಮೊದಲ ಬಾರಿಯೇನಲ್ಲ. ನನ್ನ ಸರ್ವಿಸ್‌ನಲ್ಲೇ ಕಡಿಮೆ ಅಂದರೂ ಇಪ್ಪತ್ತು ಸಲ ಏರಿಕೆ ಸುದ್ದಿ ಕೇಳಿದ್ದೇನೆ, ಬರೆದಿದ್ದೇನೆ. ಇಂಥ ಸುದ್ದಿಯನ್ನು ನಮ್ಮವರು ತಪ್ಪದೆ ಓದುತ್ತಾರೆ. ಆಮೇಲೆ ಮರೆತು ಬಿಡುತ್ತಾರೆ. ಆದರೆ, ಹಾಲು ಬೆಲೆ ಏರಿದ ಆ ದಿವಸ ಮನೆಯ ವಾತಾವರಣ ಇದೆಯಲ್ಲ . .ನೋಡುವವರಿಗೆ ತಮಾಷೆ. ಅನುಭವಿಸುವವರಿಗೆ ಮಾತ್ರ ಕಷ್ಟ .

    ಮನೆಯಲ್ಲಿ ದುಡಿಯುವವರು ಒಬ್ಬರು. ಹತ್ತು ಜನಕ್ಕೆ ಎರಡು ತಿಂಡಿ, ಎರಡು ಊಟ, ಬೇಕೆನಿಸಿದಾಗಲೆಲ್ಲ ಕಾಫಿ, ಮಕ್ಕಳಿಗೆ ಐಸ್‌ ಕ್ರೀಂ, ಬೆಳೆದ ಗಂಡಸರಿಗೆ ಸಿಗರೇಟು ಬೀರು, ಇನ್ನು ಹೆಣ್ಣು ಮಕ್ಕಳಿಗೆ ಜಾಸ್ತಿ ಆಸೆಯಿಲ್ಲ. ಉಮ ಟಾಕೀಸಿನಲ್ಲಿ ನವರಸ ನಾಯಕ ಜಗ್ಗೇಶ್‌ ಅಭಿನಯದ ಮ್ಯಾಟನಿ ಶೋ ನೋಡಿದರೆ ಒಂಥರಾ ಸಮಾಧಾನ. ರಾತ್ರಿ ಅಡುಗೆ ಚೆನ್ನಾಗಿರತ್ತೆ. ಒಬ್ಬರ ಸಂಬಳದಲ್ಲಿ ಇವರೆಲ್ಲರನ್ನೂ ಸಂತೋಷಪಡಿಸುವುದು ಸಾಧ್ಯವಾಗುವುದಾದರೂ ಹೇಗೆ ? ಯಾವುದನ್ನೂ ನಿಲ್ಲಿಸುವುದಕ್ಕಾಗುವುದಿಲ್ಲ. ಒಂದನ್ನು ಬಿಟ್ಟು...

    ಅದು ಕನ್ನಡ ದಿನ ಪತ್ರಿಕೆ !

    ಹಾಲಾಗಲೀ, ಕರೆಂಟಾಗಲೀ, ಸ್ಕೂಲ್‌ ಫೀಸಾಗಲೀ.. .ಏರಿದ ತಕ್ಷಣ ನಾವು ತಪ್ಪದೆ ಬಲಿ ಕೊಡುತ್ತಾ ಬಂದಿರುವುದು ಇದನ್ನೇ. ಆದರೆ, ಕನ್ನಡ ಪತ್ರಿಕೆಯನ್ನು ಆಫ್‌ಲೈನ್‌ನಲ್ಲಿ ಓದುವ ನನ್ನ ಸಮಸ್ತ ಬಂಧುಗಳೇ ..ಈ ಬಾರಿ ಹಾಗಾಗುವುದಿಲ್ಲ ! ಪ್ರಾಮಿಸ್‌.

    ಹಾಲಿನಲ್ಲಿ ಕಳೆದುಕೊಳ್ಳುವ ಹೆಚ್ಚುವರಿ ಹಣವನ್ನು ನೀವು ಇದೇ ಸಂಕ್ರಾಂತಿಯಿಂದ ಕನ್ನಡ ಪತ್ರಿಕೆಗಳನ್ನು ಕೊಂಡು ಓದುವ ರೂಪದಲ್ಲಿ ತುಂಬಿಕೊಳ್ಳುತ್ತೀರಿ. ಅದು ಹೇಗೆ ? ನಾಳೆ ನಮ್ಮ ಪೇಪರ್‌ ಬರುವವರೆಗೆ ಕಾಯಿರಿ. ಕಾಫಿ ಗುಟಕರಿಸುತ್ತಾ ಕಾಯುತ್ತಿರಿ !

    ಬೆಲೆ ಏರಿಕೆಯ ಸರದಿ ಈಗ ಕೆ.ಎಂ.ಎಫ್‌. ಹಾಲಿನದು !

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more