ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿಯಲ್ಲಿ ಗುಂಡಿನ ಚಕಮಕಿ : ಗುಳೇ ಹೊರಟವರು 70 ಸಾವಿರ!

By Staff
|
Google Oneindia Kannada News

ಕಾಶ್ಮೀರ : ಭಾರತ ಮತ್ತು ಪಾಕ್‌ ಪಡೆಗಳ ನಡುವೆ ಪದೇ ಪದೇ ಗುಂಡಿನ ಕಚಮಕಿ ನಡೆಯುತ್ತಿರುವ ಕಾರಣ ಕಳೆದ ಮೂರು ವಾರಗಳಲ್ಲಿ ಗಡಿ ಪ್ರದೇಶದ 70 ಸಾವಿರ ಮಂದಿ ಗುಳೇ ಹೋಗಿದ್ದಾರೆ.

ಗಡಿ ನಿಯಂತ್ರಣ ರೇಖೆ (LoC) ಗೆ ಹೊಂದಿಕೊಂಡಿರುವ ಕಥುಆ, ಜಮ್ಮು, ರಾಜೌರಿ, ಪೂಂಚ್‌ ಹಾಗೂ ಬಾರಾಮುಲ್ಲಾ ಜಿಲ್ಲೆಗಳ ಜನರು ಸರ್ಕಾರಿ ತಂಗುದಾಣಗಳು ಅಥವಾ ಇತರೆ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆಂದು ಸ್ಥಳೀಯ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಗುಳೇ ಹೋದವರ ಪೈಕಿ ಜಮ್ಮು ಜಿಲ್ಲೆಯವರೇ ಹೆಚ್ಚು. ಅಖ್ನೂರ್‌ ವಲಯದ 22 ಸಾವಿರ, ಪರ್ಗ್ವಾಲ್‌ ವಲಯದ 12 ಸಾವಿರ, ಸಾಂಬಾ ವಲಯದ 7 ಸಾವಿರ ಮಂದಿ ಜೀವ ಭಯದಿಂದ ಸುರಕ್ಷಿತ ಸ್ಥಳಗಳಿಗೆ ವಲಸೆ ಹೋಗಿದ್ದಾರೆ.

ಈ ರೀತಿ ತಮ್ಮ ಮನೆಗಳನ್ನು ತೊರೆದು ಹೊರಟಿರುವವರ ನೆರವಿಗೆ ರಾಜ್ಯ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಜನರಿಗೆ ತಂಗುದಾಣ ಒದಗಿಸುವುದರ ಜೊತೆಗೆ ತಿಂಗಳಿಗೆ 7 ಕಿಲೋ ಗೋಧಿ, 2 ಕಿಲೋ ಅಕ್ಕಿ ಹಾಗೂ 10 ಲೀಟರ್‌ ಸೀಮೆಎಣ್ಣೆ ಪೂರೈಸುತ್ತಿದೆ. ಕೆಲಸ ಕಳಕೊಂಡ ಪ್ರತಿಯಾಬ್ಬರಿಗೂ ಮಾಸಿಕ 200 ರುಪಾಯಿ ಕೊಡುವುದರ ಜೊತೆಗೆ ಕುಟುಂಬವೊಂದಕ್ಕೆ 2 ಚಾದರಗಳನ್ನೂ ಸರ್ಕಾರ ಒದಗಿಸುತ್ತಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X