ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಡ್‌ಕ್ರಾಸ್‌ನಿಂದ ರಾಜ್ಯದ ಎಲ್ಲ ಅಂಗವಿಕಲರಿಗೆ ಕೃತಕ ಅವಯವ

By Staff
|
Google Oneindia Kannada News

ನವದೆಹಲಿ : ಕರ್ನಾಟಕದ ಎಲ್ಲ ಅಂಗವಿಕಲರಿಗೆ ಮುಂದಿನ ವರ್ಷದೊಳಗಾಗಿ ಕೃತಕ ಅವಯವ, ಕನ್ನಡಕ, ಗಾಲಿಕುರ್ಚಿಗಳನ್ನು ರೆಡ್‌ಕ್ರಾಸ್‌ ಸಂಸ್ಥೆ ವಿತರಿಸಲಿದೆ.

ಈ ವಿಷಯವನ್ನು ರೆಡ್‌ಕ್ರಾಸ್‌ನ ರಾಜ್ಯ ಘಟಕದ ಅಧ್ಯಕ್ಷ ಡಾ. ಡಿ. ಎಂ. ನಂಜುಡಪ್ಪ ತಿಳಿಸಿದ್ದಾರೆ. ಈ ಯೋಜನೆಗೆ ರಾಜ್ಯ ಸರಕಾರವೂ ನೆರವಾಗಲಿದೆ. ಮುಂದಿನ ವರ್ಷದೊಳಗಾಗಿ ರಾಜ್ಯದ ಎಲ್ಲ ಅಂಗವಿಕಲರಿಗೆ ಅಗತ್ಯವಿರುವ ಉಪಕರಣಗಳನ್ನು ಒದಗಿಸಲಾಗುವುದು. ಇದಕ್ಕೆ ಈಗಾಗಲೇ ಸಂಪನ್ಮೂಲಗಳನ್ನು ಹೊಂದಿಸಲಾಗುತ್ತಿದೆ.

ಭಾರತೀಯ ರೆಡ್‌ಕ್ರಾಸ್‌ನ ಕರ್ನಾಟಕ ಘಟಕದಲ್ಲಿದ್ದ ಭ್ರಷ್ಟಾಚಾರಗಳನ್ನು ಈಗ ನಿವಾರಿಸಲಾಗಿದೆ. ಸ್ವಇಚ್ಛೆಯಿಂದ ದಾನ ಮಾಡಿದ ರಕ್ತವನ್ನು ಮಾರುವ, ಔಷಧಿ ಕಳವು ಮಾಡುವ ಅಪರಾಧಿಗಳನ್ನು ಪತ್ತೆ ಹಚ್ಚಿಕ್ರಮಕೈಗೊಳ್ಳಲಾಗಿದೆ. ಅಲ್ಲದೆ ರೆಡ್‌ಕ್ರಾಸ್‌ನ ಔಷಧಿಗಳನ್ನು ಸಂಗ್ರಹಿಸುವುದಕ್ಕಾಗಿ ರಾಜ್ಯದಲ್ಲಿ ಉಗ್ರಾಣವನ್ನೂ ತೆರಯುವ ಯೋಜನೆ ಘಟಕದ ಮುಂದಿದೆ ಎಂದು ನಂಜುಡಪ್ಪ ಹೇಳಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X