ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ- ಪಾಕಿಸ್ತಾನ ಬಿಕ್ಕಟ್ಟು : ಎಲ್‌ಸಿಎ ಯೋಜನೆಗೆ ಮುಳುವು

By Staff
|
Google Oneindia Kannada News

ಬೆಂಗಳೂರು : 2005ನೇ ಇಸವಿಯಾಳಗೆ ಅಧಿಕೃತವಾಗಿ ಗಗನಕ್ಕೆ ಹಾರಬೇಕಿದ್ದ ಲಘು ಹಗುರ ವಿಮಾನ (ಎಲ್‌ಸಿಎ) ಯೋಜನೆಗೆ ಇದೀಗ ಹಿನ್ನಡೆ ಉಂಟಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಣ ತೀವ್ರಗೊಳ್ಳುತ್ತಿರುವ ತಿಕ್ಕಾಟವೇ ಇದಕ್ಕೆ ಕಾರಣ ಎಂದು ಎಲ್‌ಸಿಎ ಯೋಜನಾ ನಿರ್ದೇಶಕ ಡಾ. ಕೋಟಾ ಹರಿನಾರಾಯಣ್‌ ಹೇಳಿದ್ದಾರೆ.

ಮಂಗಳವಾರ ಅವರು ಸುದ್ದಿಗಾರರೊಂದಿಗೆ ಮಾತಾಡುತ್ತಿದ್ದರು. ಇಂಥಾ ಒತ್ತಡದ ಪರಿಸ್ಥಿತಿಯ ನಡುವೆ ಶಸ್ತ್ರಾಸ್ತ್ರ ವ್ಯವಸ್ಥೆಯ ವ್ಯಾಪ್ತಿಯಡಿ ಎಲ್‌ಸಿಎಯನ್ನು ಯಶಸ್ವಿಯಾಗಿ ತರುವುದು ಕಷ್ಟಕರ. ಹೀಗಾಗಿ ಡೆಡ್‌ಲೈನ್‌ಗೆ ಬೆನ್ನುತೋರಲೇಬೇಕಾದ ಅನಿವಾರ್ಯತೆಯಿದೆ ಎಂದರು.

ಸೋಮವಾರ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಅಡ್ವಾನ್ಸ್‌ಡ್‌ ಸ್ಟಡೀಸ್‌ (ಎನ್‌ಐಎಎಸ್‌) ನಲ್ಲಿ ‘ಎಲ್‌ಸಿಎ ಯೋಜನೆಯಿಂದ ಕಲಿತ ಪಾಠಗಳು’ ಎಂಬ ವಿಷಯ ಕುರಿತ ಸಂಕಿರಣದಲ್ಲಿ ವಿಮಾನ ಹಾರುವ ಮುನ್ನ ಅದನ್ನು ಒಳಪಡಿಸಬೇಕಾದ ಪ್ರಯೋಗಗಳು, ಅದರಿಂದ ಕಲಿತ ವಿಷಯಗಳನ್ನು ಹರಿನಾರಾಯಣ್‌ ಹಂಚಿಕೊಂಡಿದ್ದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X