ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆನ್‌ಲೈನ್‌ ಡ್ರೆೃವಿಂಗ್‌ ಲೈಸೆನ್ಸ್‌’ ಬೇಕೆ ? 10 ದಿನ ಕಾಯಲೇಬೇಕು..

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು --- ಭಾರತದ ಸಿಲಿಕಾನ್‌ ನಗರಿ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಕರ್ನಾಟಕದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರು, ಎಲ್ಲ ಇಲಾಖೆಗಳನ್ನೂ ಕಂಪ್ಯೂಟರೀಕರಿಸಲು ಮತ್ತು ಇ-ಆಡಳಿತವನ್ನು ಜಾರಿಗೆ ತರಲು ಪ್ರಯತ್ನ ಮಾಡುತ್ತಿದ್ದರೂ, ಕಂದಾಯ ಇಲಾಖೆಯನ್ನು ಹೊರತು ಪಡಿಸಿ ಮತ್ತಾವ ಇಲಾಖೆಯಲ್ಲೂ ಕಂಪ್ಯೂಟರ್‌ ಕ್ರಾಂತಿ ನಡೆದಿಲ್ಲ.

ಕಂದಾಯ ಇಲಾಖೆ ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಗಣಕೀಕರಣಗೊಂಡಿದೆ. ಕಂದಾಯ ಇಲಾಖೆ ನಂತರದ ಸ್ಥಾನ ಬಹುಶಃ ಸಾರಿಗೆ ಇಲಾಖೆಯದು. ಬೆಂಗಳೂರಿನ ಕೆಲವು ಆರ್‌ಟಿಓ ಕಚೇರಿಗಳು ಕಂಪ್ಯೂಟರ್‌ ಹಾಗೂ ನೆಟ್‌ವರ್ಕ್‌ ಜಾಲದ ವ್ಯಾಪ್ತಿಗೆ ಒಳಪಟ್ಟಿವೆ.

ಇಂಟರ್‌ನೆಟ್‌ ಬಳಕೆಯ ಮಹತ್ವ ತಿಳಿದಿರುವ ಈ ಇಲಾಖೆಯ ಸಚಿವರಾದ ಸಗೀರ್‌ ಅಹ್ಮದ್‌ ಅವರು ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಮುಂದಿನ ವಾರದಿಂದ ಆನ್‌ಲೈನ್‌ ವಾಹನ ಚಾಲನೆ ಪರವಾನಗಿ (ಡ್ರೆೃವಿಂಗ್‌ ಲೈಸೆನ್ಸ್‌) ನೀಡುವ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದಾರೆ.

ಆನ್‌ಲೈನ್‌ ಡ್ರೆೃವಿಂಗ್‌ ಲೈಸೆನ್ಸ್‌ ವ್ಯವಸ್ಥೆಯನ್ನು ಜಾರಿಗೆ ತರಲು ಅಗತ್ಯವಾದ ಎಲ್ಲ ವ್ಯವಸ್ಥೆಗಳನ್ನೂ ಸಿದ್ಧಪಡಿಸಲಾಗಿದ್ದು, ಯೋಜನೆಯನ್ನು ಜನವರಿ 17 ಅಥವಾ 18ರಂದು ಉದ್ಘಾಟಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಈ ವ್ಯವಸ್ಥೆ ಜಾರಿಗೆ ಬಂದ ಬಳಿಕ ವಾಹನ ಚಾಲಕರು ಕಲಿಕಾ ಪರವಾನಗಿ (ಲರ್ನಿಂಗ್‌ ಲೈಸೆನ್ಸ್‌) ಪಡೆಯಲು ಖುದ್ದಾಗಿ ಆರ್‌.ಟಿ.ಓ. ಕಚೇರಿಗೆ ಅಲೆಯುವ ಅಗತ್ಯ ಇರುವುದಿಲ್ಲ.

ಮತ್ತೆರೆಡು ಆರ್‌ಟಿಓ: ಬೆಂಗಳೂರು ಮಹಾನಗರದಲ್ಲಿ ವಾಹನಗಳ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ನಗರದಲ್ಲಿ ಮತ್ತೆರಡು ಪ್ರಾದೇಶಿಕ ಸಾರಿಗೆ ಕಚೇರಿಗಳನ್ನು ಸ್ಥಾಪಿಸಲು ಉದ್ದೇಶಿಸಿರುವುದಾಗಿಯೂ ಸಚಿವರು ತಿಳಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X