• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ರಾಯಚೂರಿನಲ್ಲಿ ಆಲಿಕಲ್ಲು ಮಳೆಗೆ ನೂರಾರು ಎಕರೆ ಬೆಳೆನಾಶ

By Staff
|

ರಾಯಚೂರು : ಇಲ್ಲಿನ ಕೃಷ್ಣಾ ನದಿ ತೀರದ ಅರಷಣಿಗಿ ಮತ್ತು ಸುತ್ತಲಿನ ಗ್ರಾಮಗಳಲ್ಲಿ ಶನಿವಾರ ರಾತ್ರಿ ಬಿದ್ದ ಆಲಿಕಲ್ಲು ಮಳೆಗೆ ಕೋಟ್ಯಂತರ ರೂಪಾಯಿಗಳ ಬೆಳೆ ನೆಲಕಚ್ಚಿದೆ.

ಕಳೆದ ಮಳೆಗಾಲದಲ್ಲಿ ತಡವಾಗಿಯಾದರೂ ಬಿದ್ದ ಮಳೆಯಿಂದಾಗಿ ಕಷ್ಟಪಟ್ಟು ಬೆಳೆದ ಹತ್ತಿ ಬೆಳೆ, ಮೆಣಸಿನ ಕಾಯಿ, ಜೋಳ, ಬಾಳೆ, ತೊಗರಿ, ಕಡಲೆ, ಸೂರ್ಯ ಕಾಂತಿ, ಕುಸುಬಿ ಬೆಳೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಅರಷಣಿಗಿ, ಗುರ್ಜಾಪುರ, ಬಸವಂತಪುರ ಗ್ರಾಮಗಳ ಸುಮಾರು 1500 ಎಕರೆ ಪ್ರದೇಶದಲ್ಲಿ ಬಿದ್ದ ಆಲಿ ಕಲ್ಲು ಮಳೆಯಿಂದ ಜನರು ಕಂಗಾಲಾಗಿದ್ದಾರೆ. ಹಿಂದಿನ ದಿನವಷ್ಟೆ ಫಸಲಿನಿಂದ ತುಂಬಿ ತುಳುಕುತ್ತಿದ್ದ ಗದ್ದೆ ಖಾಲಿಯಾಗಿರುವುದನ್ನು ನೋಡಲಾಗದೆ ರೈತರು ಹೊಲದ ಬಳಿಯೇ ಕಣ್ಣೀರಿಡುತ್ತಿದ್ದಾರೆ.

ಕೃಷ್ಣ ನದಿ ನೀರು ಅವಲಂಬಿಸಿ ಬಿತ್ತನೆ ಮಾಡಿದ 500 ಎಕರೆ ಹತ್ತಿ, 300 ಎಕರೆ ಜೋಳ, 350 ಎಕರೆ ಮೆಣಸಿನ ಕಾಯಿ ಬೆಳೆ ಸಂಪೂರ್ಣವಾಗಿ ನಷ್ಟವಾಗಿದೆ. ಇನ್ನೊಂದು ತಿಂಗಳಿನಲ್ಲಿ ಕೊಯ್ಲು ಆರಂಭವಾಗಬೇಕಿತ್ತು. ಅಷ್ಟರಲ್ಲಿ ಸುರಿದ ಈ ದರಿದ್ರ ಆಲಿಕಲ್ಲು ಮಳೆಯಿಂದಾಗಿ ರೈತರ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಗಿದೆ.

ಒಂದು ಗಂಟೆ ಕಾಲ ಯದ್ವಾ ತದ್ವಾ ಸುರಿದ ಆಲಿಕಲ್ಲು ಮಳೆಯಿಂದಾಗಿ ಹೊಲದಲ್ಲಿ ತೂಗುತ್ತಿದ್ದ ಮೆಣಸಿನ ಕಾಯಿಗಳು ಗುಂಪೆ ಗುಂಪೆಯಾಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ನೀರಾವರಿ ಪಂಪ್‌ ಸೆಟ್‌ನ ಪೈಪ್‌ಗಳೂ ಕೂಡ ನೀರು ಪಾಲಾಗಿವೆ. ಬಸವ ಕಲ್ಯಾಣ ಗ್ರಾಮದಲ್ಲಿ 50ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ಮಗುಚಿ ಬಿದ್ದಿವೆ. ಮುದ್ಗಲ್‌ ಗ್ರಾಮದ ಶೇಖ್‌ ಚಂದಾವಲಿ ಎಂಬವರ ಹೊಲದಲ್ಲಿ ಒಂದೂವರೆ ಕ್ವಿಂಟಾಲ್‌ ತೂಕದ ಭಾರೀ ಆಲಿಕಲ್ಲು ಬಿದ್ದಿದ್ದು ಅದನ್ನು ನೋಡಲು ಸುತ್ತ ಮುತ್ತಲಿನ ಜನರು ಧಾವಿಸುತ್ತಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more