ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುವೆಂಪು ವಿವಿ ಪ್ರಭಾರ ಉಪಕುಲಪತಿಗಳಾಗಿ ಡಾ.ಬಾಗೇವಾಡಿ

By Staff
|
Google Oneindia Kannada News

ಬೆಂಗಳೂರು : ಕುವೆಂವು ವಿಶ್ವ ವಿದ್ಯಾಲಯದ ಗಣಿತಶಾಸ್ತ್ರದ ಪ್ರಾಧ್ಯಾಪಕ ಮತ್ತು ಹಿರಿಯ ಡೀನ್‌ ಡಾ. ಸಿ.ಎಸ್‌. ಬಾಗೇವಾಡಿ ಅವರನ್ನು ವಿವಿಯ ಪ್ರಭಾರ ಉಪಕುಲಪತಿಗಳನ್ನಾಗಿ ನೇಮಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ

ಈ ವಿಷಯವನ್ನು ಬುಧವಾರ ಹೊರಡಿಸಲಾದ ರಾಜಭವನದ ಪ್ರಕಟಣೆ ತಿಳಿಸಿದೆ. ವಿಶ್ವ ವಿದ್ಯಾಲಯದ ಉಪ ಕುಲಪತಿ ಎಸ್‌. ಪಿ. ಹಿರೇಮಠ ಅವರ ಅಧಿಕಾರ ಅವಧಿ ಜನವರಿ 3ಕ್ಕೆ ಕೊನೆಗೊಂಡಿದೆ. ಕುಲಪತಿ ಸ್ಥಾನಕ್ಕೆ ಮೂರು ಹೆಸರುಗಳನ್ನು ಕುಲಾಧಿಪತಿಗಳಾದ ರಾಜ್ಯಪಾಲೆ, ವಿ.ಎಸ್‌. ರಮಾದೇವಿ ಅವರಿಗೆ ಆಯ್ಕೆ ಸಮಿತಿ ಸೂಚಿಸಬೇಕಾಗಿತ್ತು. ಆದರೆ ಆಯ್ಕೆಪಟ್ಟಿ ಇನ್ನೂ ಸಿದ್ಧವಾಗದೇ ಇರುವ ಕಾರಣ ಮಧ್ಯಂತರ ಅವಧಿಗೆ ಸಿ.ಎಸ್‌. ಬಾಗೇವಾಡಿ ಅವರನ್ನು ಉಪಕುಲಪತಿಗಳನ್ನಾಗಿ ನೇಮಿಸಲಾಗಿದೆ.

ಉಪಕುಲಪತಿ ಸ್ಥಾನಕ್ಕೆ 95 ಕ್ಕೂ ಹೆಚ್ಚು ಮಂದಿಯ ಹೆಸರು ಆಯ್ಕೆ ಸಮಿತಿಯ ಮುಂದಿದೆ. ಈ ಪಟ್ಟಿಯಿಂದ ಮೂರು ಹೆಸರುಗಳನ್ನು ಆಯ್ದು ಆಯ್ಕೆ ಸಮಿತಿ ರಾಜ್ಯಪಾಲರಿಗೆ ಸೂಚಿಸಬೇಕು. ಜನವರಿ 12ರಂದು ಆಯ್ಕೆ ಸಮಿತಿ ಪುನಃ ಸಭೆ ಸೇರಿ ಮೂರು ಮಂದಿಯ ಹೆಸರುಗಳಿರುವ ಪಟ್ಟಿಯನ್ನು ಅಂತಿಮಗೊಳಿಸಿ ರಾಜ್ಯಪಾಲರಿಗೆ ಸಲ್ಲಿಸಲಿದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X