ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಡುಪಿಯಲ್ಲಿ 3 ದಿನಗಳಅಂತರರಾಷ್ಟ್ರೀಯ ಆಯುರ್ವೇದ ಮೇಳ

By Staff
|
Google Oneindia Kannada News

ಉಡುಪಿ : ಮೂರು ದಿನಗಳ ಅಂತರರಾಷ್ಟ್ರೀಯ ಆಯುರ್ವೇದ ಸಮ್ಮೇಳನವು ಜನವರಿ 10ರಿಂದ ನಗರದ ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ಆರಂಭವಾಗಲಿದೆ.

ಸಮ್ಮೇಳನದ ಮುಖ್ಯ ಸಂಘಟನಾ ಕಾರ್ಯದರ್ಶಿ ಡಾ. ಯು.ಎನ್‌. ಪ್ರಸಾದ್‌ ಈ ವಿಷಯವನ್ನು ಗುರುವಾರ ತಿಳಿಸಿದರು. ರಾಜ್ಯದ ಉನ್ನತ ಶಿಕ್ಷಣ ಸಚಿವ ಜಿ. ಪರಮೇಶ್ವರ್‌ ಸಮಾವೇಶವನ್ನು ಉದ್ಘಾಟಿಸುವರು. ಆಯುರ್ವೇದ ಚಿಕಿತ್ಸಾ ಕೇಂದ್ರದಲ್ಲಿ ನರರೋಗ ಸಂಬಂಧಿ ವಾತ, ವ್ಯಾಧಿಯ ಮೂಲ ಸಿದ್ಧಾಂತ, ಕಾರಣಗಳು, ಸ್ತ್ರೀ ಹಾಗೂ ಮಕ್ಕಳಲ್ಲಿ ಬರುವ ರೋಗಗಳು, ವಾರ್ಧಕ್ಯ ಮತ್ತು ಮನೋರೋಗಗಳು ಸಾಮಾನ್ಯ ಮತ್ತು ವಿಶೇಷ ಚಿಕಿತ್ಸಾ ವಿಧಾನಗಳಾದ ಪಂಚಕರ್ಮ, ಅಗ್ನಿ ಕರ್ಮ, ಸಿರಿವ್ಯಾಧಿ ಮುಂತಾದ ವಿಷಯಗಳ ಬಗ್ಗೆ ಸಮ್ಮೇಳನದಲ್ಲಿ ಗೋಷ್ಠಿಗಳು ನಡೆಯಲಿವೆ.

ಸಮ್ಮೇಳನಕ್ಕೆ ಜರ್ಮನಿ, ಅಮೆರಿಕಾ, ಜಪಾನ್‌, ಮ್ಯಾನ್ಮಾರ್‌, ಶ್ರೀಲಂಕಾ ಮತ್ತಿತರ ದೇಶಗಳಿಂದ ಪ್ರತಿನಿಧಿಗಳು ಆಗಮಿಸುವರು. ಸುಮಾರು 1,500 ಮಂದಿ ಪ್ರತಿನಿಧಿಗಳು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಸಮ್ಮೇಳವು ಶ್ರೀ ಧರ್ಮಸ್ಥಳ ಎಜುಕೇಷನ್‌ ಟ್ರಸ್ಟ್‌ನ ಅಧ್ಯಕ್ಷರಾದ ಡಿ, ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ನಡೆಯಲಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X