ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಲಿಫೋರ್ನಿಯಾದಿ ಬೀಡಿಗೆ ಅರ್ಧಚಂದ್ರ,ಅವರಿಗೆ ಸಿಗರೇಟೆ ಚಂದ!

By Staff
|
Google Oneindia Kannada News

ವಾಷಿಂಗ್ಟನ್‌: ಸಿಗರೇಟಿಗಿಂತ ಬೀಡಿಯೇ ಒಳ್ಳೆಯದು ಎಂದು ನಂಬಿದವರಿಗೆಲ್ಲ ಇದು ಕೆಟ್ಟ ಸುದ್ದಿ . ಕ್ಯಾಲಿಫೋರ್ನಿಯಾದ ಆರೋಗ್ಯ ಪ್ರಾಧಿಕಾರಗಳು, ಅಲ್ಲಿ ಬೀಡಿಯನ್ನು ನಿಷೇಧಿಸಿವೆ. ಸಿಗರೇಟಿಗಿಂತ ಬೀಡಿ ಹೆಚ್ಚು ಹಾನಿಕರ. ಸಿಗರೇಟ್‌ಗಿಂತ ಆರೋಗ್ಯದ ಮೇಲೆ ಬೀಡಿ ಹೆಚ್ಚು ದುಷ್ಪರಿಣಾಮ ಬೀರುತ್ತವೆ ಎನ್ನುವುದು ಪ್ರಾಧಿಕಾರಗಳ ವಾದ.

ಈವರೆಗೂ ಸಿಗರೇಟ್‌ಗಿಂತ ಬೀಡಿ ಕಡಿಮೆ ಅಪಾಯಕಾರಿ ಎಂದು ನಂಬಲಾಗಿತ್ತು . ಇದು ತಪ್ಪು ಗ್ರಹಿಕೆ. ಕ್ಯಾನ್ಸರ್‌ ಕಾರಣ ಕಣಗಳು ಸಿಗರೇಟ್‌ಗಿಂತ ಬೀಡಿಯಲ್ಲೇ ಹೆಚ್ಚಾಗಿರುತ್ತವೆ. ಸಾಮಾನ್ಯ ಸಿಗರೇಟ್‌ಗಿಂತ ಬೀಡಿಯಲ್ಲೇ ನಿಕೋಟಿನ್‌ ಪ್ರಮಾಣವೂ ಹೆಚ್ಚು ಎಂದು ಡಾ.ಜೊನಾಥನ್‌ ಫೀಲ್ಡಿಂಗ್‌, ಬೀಡಿ ನಿಷೇಧಕ್ಕೆ ಕಾರಣ ತಿಳಿಸಿದ್ದಾರೆ. ಅವರು ಲಾಸ್‌ ಏಂಜಲ್ಸ್‌ನ ಸಾರ್ವಜನಿಕ ಆರೋಗ್ಯ ಇಲಾಖೆಯಲ್ಲಿ ಆರೋಗ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನ್ಯೂ ಕ್ಯಾಲಿಫೋರ್ನಿಯನ್‌ ಲಾ ಅನ್ವಯ ಬೀಡಿ ನಿಷೇಧ ಜಾರಿಯಾಗಲಿದೆ. ಯುವ ಜನತೆಯನ್ನು ಧೂಮಪಾನದಿಂದ ವಿಮುಖಗೊಳಿಸಲು ಹಾಗೂ ವಯಸ್ಕರಲ್ಲದವರಿಗೆ ತಂಬಾಕು ಪದಾರ್ಥಗಳ ಅನಧಿಕೃತ ಮಾರಾಟವನ್ನು ತಡೆಗಟ್ಟುವುದು ನಮ್ಮ ಉದ್ದೇಶ ಎನ್ನುತ್ತಾರೆ ಫೀಲ್ಡಿಂಗ್‌. ಪ್ರತಿಶತ 90 ಕ್ಕೂ ಹೆಚ್ಚು ಧೂಮಪಾನಿಗಳು ತಮ್ಮ 18 ನೇ ವಯಸ್ಸಿಗೆ ಮುನ್ನವೇ ಧೂಮಪಾನ ಚಟಕ್ಕೆ ಬಿದ್ದಿರುತ್ತಾರೆ ಎನ್ನುವುದು ಫೀಲ್ಡಿಂಗ್‌ ಆತಂಕ.

ಬೀಡಿ ನಿಷೇಧ: ಭಾರತಕ್ಕೆ ಪೆಟ್ಟು ?

ಭಾರತ ಹಾಗೂ ಕೆಲವು ಏಷ್ಯನ್‌ ರಾಷ್ಟ್ರಗಳಲ್ಲಿ ಬೀಡಿ ಉದ್ದಿಮೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಕ್ಯಾಲಿಫೋರ್ನಿಯ ಬೀಡಿ ನಿಷೇಧಿಸುವುದರಿಂದ ಬೀಡಿ ಉದ್ದಿಮೆಯ ಮೇಲೆ ಅಂಥ ವ್ಯತಿರಿಕ್ತ ಪರಿಣಾಮವೇನೂ ಬೀರುವುದಿಲ್ಲ . ಆದರೆ, ಇತರ ರಾಷ್ಟ್ರಗಳೂ ಕ್ಯಾಲಿಫೋರ್ನಿಯಾ ಹಾದಿಯನ್ನೇ ಅನುಸರಿಸಿದರೆ ಬೀಡಿ ಉದ್ದಿಮೆಗೆ ಕಷ್ಟ !

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X