• search
For Quick Alerts
ALLOW NOTIFICATIONS  
For Daily Alerts

    ಮೈಸೂರು ಹುಲಿ ಟಿಪ್ಪು ಸ್ಮರಣಾರ್ಥ ಬೆಳ್ಳಿ ನಾಣ್ಯ ಹಾಗೂ ಪುಸ್ತಕ

    By Staff
    |

    Mysore Tiger Tippuಬೆಂಗಳೂರು : ಮೈಸೂರು ಹುಲಿ ಟಿಪ್ಪು ಸುಲ್ತಾನ್‌ ಸ್ಮರಣಾರ್ಥ ಬೆಳ್ಳಿ ನಾಣ್ಯ ಹಾಗೂ ಶೃಂಗೇರಿ ಶಾರದಾಂಬೆಯ ಪುನರ್‌ ಪ್ರತಿಷ್ಠಾಪನಾ ನೃಪ ಟಿಪ್ಪು ಸುಲ್ತಾನ್‌ ಎನ್ನುವ ಪುಸ್ತಕವನ್ನು ಟಿಪ್ಪು ಸುಲ್ತಾನ್‌ ಪ್ರಚಾರ ಸಮಿತಿ ಹಾಗೂ ಕುವೆಂಪು ಪ್ರಚಾರ ಸಮಿತಿಗಳು ಹೊರ ತಂದಿವೆ.

    ಇತ್ತೀಚೆಗೆ ನಡೆದ ಕುವೆಂಪು ಹಾಗೂ ಟಿಪ್ಪು ಸುಲ್ತಾನ್‌ ಜನ್ಮ ದಿನಾಚರಣೆ ಸಮಾರಂಭದಲ್ಲಿ ಬೆಳ್ಳಿ ನಾಣ್ಯ ಹಾಗೂ ಪುಸ್ತಕವನ್ನು ಮತದಾರರ ಜಾಗೃತಿ ಶಿಕ್ಷಣ ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಡಾ.ಡಿ.ಪ್ರೇಮಚಂದ್ರ ಸಾಗರ್‌ ಬಿಡುಗಡೆ ಮಾಡಿದರು. ಪ್ರಸಕ್ತ ಸಂದರ್ಭದಲ್ಲಿ ಕೋಮು ಸೌಹಾರ್ದತೆ ಉಂಟು ಮಾಡುವ ಕೆಲಸ ಹಿಂದೆಂದಿಗಿಂತ ಹೆಚ್ಚಾಗಿದೆ ಎಂದು ಅವರು ಹೇಳಿದರು.

    ಅಮೆರಿಕ ಅತಿ ದೊಡ್ಡ ಭಯೋತ್ಪಾದಕ

    ಲಾಡೆನ್‌ ಹಾಗೂ ತಾಲಿಬಾನ್‌ ರೂಪುಗೊಳ್ಳಲು ಅಮೆರಿಕಾವೆ ಕಾರಣ. ಅಮೆರಿಕ ವಿಶ್ವದ ಅತಿದೊಡ್ಡ ಭಯೋತ್ಪಾದಕ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿ ಕೊ.ಚನ್ನಬಸಪ್ಪ ಹೇಳಿದರು. ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಮಾಜಿ ಸಲಹೆಗಾರ ಅಬ್ದುಲ್‌ ರೆಹಮಾನ್‌ ಖಮರುದ್ದೀನ್‌ ಅವರು ಟಿಪ್ಪುವಿನ 250 ನೇ ಜನ್ಮದಿನದ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.

    ಸಿನಿಮಾ ನಿರ್ದೇಶಕ ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು, ಪಿಟೀಲು ವಾದಕ ಜಿ.ಎನ್‌.ಸುಬ್ರಹ್ಮಣ್ಯಂ, ಬೆಂಗಳೂರು ವಿವಿ ವಿದೇಶಿ ಭಾಷಾ ವಿಭಾಗದ ಮುಖ್ಯಸ್ಥೆ ಡಾ. ಸುಮನ್‌ ವೆಂಕಟೇಶ್‌, ಸಿನಿಮಾ ನಿರ್ಮಾಪಕ ಸಾ.ರಾ.ಗೋವಿಂದು, ಶಿಕ್ಷಣ ತಜ್ಞ ಅ.ದೇವೇಗೌಡ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್‌ ಸುಭಾನ್‌ ಸಾಹೇಬ್‌ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

    (ಇನ್ಫೋ ವಾರ್ತೆ)

    ಮುಖಪುಟ / ಇವತ್ತು... ಈ ಹೊತ್ತು...

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more