ಜಗಮಗ ಮಂಗಳೂರು
ಮಂಗಳೂರು : ಬಂಗಾರದೊಡವೆ ಬೇಕೆ ? ನೀರೇ... ಬಂಗಾರದೊಡವೆ ಬೇಕೆ? ಅಂಗನೆ ನಿನ್ನಂದ ಶೃಂಗಾರಕೊಪ್ಪುವ ಬಂಗಾರದೊಡವೆ ಬೇಕೆ? ಹಾಗಾದರೆ ತಡವೇಕೆ ಮಂಗಳೂರಿಗೆ ಬನ್ನಿ...
ಜನವರಿ ನಾಲ್ಕರಿಂದ ನಾಲ್ಕು ದಿನಗಳ ಕಾಲ ಮಂಗಳೂರು ಚಿನ್ನಾಭರಣಗಳಿಂದ ಜಗಮಗಿಸಲಿದೆ. ಬಂದರು ನಗರಿಯಲ್ಲಿ ವಿಶ್ವ ಸುವರ್ಣ ಪರಿಷತ್ ಸಹಯೋಗದಲ್ಲಿ ಎಕ್ಸ್ಪೋ ವರ್ಲ್ಡ್ ನಾಲ್ಕು ದಿನಗಳ ಆಭರಣಗಳ ಪ್ರದರ್ಶವನ್ನು ಏರ್ಪಡಿಸಿದೆ.
ದೇಶದ ವಿವಿಧ ಮೂಲೆಗಳ ತಜ್ಞ ಕುಶಲಕರ್ಮಿಗಳು ಸಿದ್ಧಪಡಿಸಿದ ವಿವಿಧ ವಿನ್ಯಾಸಗಳ ಆಭರಣಗಳು ಈ ಮೇಳದಲ್ಲಿ ಕಣ್ಮನ ಸೆಳೆಯಲಿವೆ. ಈ ವಿಷಯವನ್ನು ಎಕ್ಸ್ಪೋ ವರ್ಲ್ಡ್ ಹಾಗೂ ಚಿನ್ನಾಭರಣ ಪ್ರದರ್ಶನದ ಸಂಘಟಕರಾದ ಸಂದೀಪ್ ಬೆಕಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಈ ಮೇಳದಲ್ಲಿ ವಿವಿಧ ಕಲಾ ಪ್ರಕಾರಗಳಾದ ಥೇವ, ಮಿನಾಕರಿ ಮತ್ತು ಕುಂದನ್ ಮಾದರಿಯ ಆಭರಣಗಳನ್ನೂ ಪ್ರದರ್ಶಿಸಲಾಗುತ್ತಿದೆ ಎಂದು ಅವರು ಹೇಳಿದರು. ದೇಶದ 25 ಅತಿ ದೊಡ್ಡ ಚಿನ್ನಾಭರಣ ಸಂಸ್ಥೆಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ಬೆಕಲ್ ತಿಳಿಸಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...