• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾಹಿತಿ ತಂತ್ರಜ್ಞಾನ : ಪ್ರೊ.ಬಿ.ಕೆ.ಸಿ. ಕಣ್ಣಲ್ಲಿ ಕರ್ನಾಟಕ ಕನ್ನಡಿ!

By Staff
|

*ಎಸ್ಕೆ.ಶಾಮಸುಂದರ, ಡಿ.ರಾಮ್‌ರಾಜ್‌

‘ರೆವೆನ್ಯೂ ಇಲಾಖೆಯಲ್ಲಿನ ಕತ್ತೆಗಳು ಈ ರೀತಿ ಯೋಚಿಸುತ್ತವೆಯೇ?’

ಹಳ್ಳಿಗಳನ್ನು ಹಾಗೂ ಹಳ್ಳಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕು ಎಂದು ಹೇಳುತ್ತಿದ್ದ ಮಾಹಿತಿ ತಂತ್ರಜ್ಞಾನ ಸಚಿವ ಬಿ.ಕೆ. ಚಂದ್ರಶೇಖರ್‌, ನಗರ ಕೇಂದ್ರೀಕೃತವಾಗಿರುವ ಅಧಿಕಾರಷಾಹಿ ಮನೋಭಾವವನ್ನು ಟೀಕಿಸಿದ್ದು ಹೀಗೆ.

ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನದ ಮುನ್ನಡೆ- ಹಿನ್ನಡೆ, ಗ್ರಾಮೀಣ ಪ್ರದೇಶಗಳಿಗೆ ಮಾಹಿತಿ ತಂತ್ರಜ್ಞಾನ, ಇ-ಆಡಳಿತ, ಗಣಕದಲ್ಲಿ ಕನ್ನಡ, ಮುಂತಾದ ಮಾಹಿತಿ ತಂತ್ರಜ್ಞಾನ ಹಾಗೂ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಬಿ.ಕೆ.ಚಂದ್ರಶೇಖರ್‌ ಅವರನ್ನು ದಟ್ಸ್‌ಕನ್ನಡ.ಕಾಂ ಮಾತನಾಡಿಸಿತು.

ಬಿಕೆಸಿ ಕೇವಲ ಮಾಹಿತಿ ತಂತ್ರಜ್ಞಾನ ಕುರಿತು ಮಾತ್ರ ಮಾತನಾಡಲಿಲ್ಲ : ಅಧಿಕಾರಿಗಳ ದಡ್ಡತನ, ನಿರ್ಲಕ್ಷ್ಯ ಧೋರಣೆ, ನಗರಕೇಂದ್ರಿತ ಯೋಜನೆಗಳು, ಜಾಗತಿಕ ಆರ್ಥಿಕ ಹಿನ್ನಡೆ.. ಹೀಗೆ, ಪ್ರತಿಯಾಂದರ ಬಗೆಗೂ ಸಚಿವರಾಗಿ, ಚಿಂತಕರಾಗಿ ಬಿಕೆಸಿ ತಮ್ಮ ನಿಲುವುಗಳನ್ನು ಹಂಚಿಕೊಂಡರು. ಮಾಹಿತಿ ತಂತ್ರಜ್ಞಾನ ಜಮಾನದಲ್ಲಿ ಈ ಸಂದರ್ಶನ ಇವತ್ತಿನ ‘ಕರ್ನಾಟಕ ದರ್ಶನ’ ಎನ್ನಲಿಕ್ಕಡ್ಡಿಯಿಲ್ಲ .

ಗ್ರಾಮೀಣ ಪರ ಯೋಜನೆಗಳ ಬಗ್ಗೆ ಯೋಚಿಸಿದಾಗ ನಮ್ಮೆದುರು ಹೊಸ ಜಗತ್ತು ತೆರೆಯುತ್ತದೆ. ಸಾವಿರ ಗ್ರಾಮೀಣ ಶಾಲೆಗಳಿಗೆ ಕಂಪ್ಯೂಟರ್‌ ಒದಗಿಸುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಯೋಜನೆ ಶ್ಲಾಘನೀಯ. ಕೃಷ್ಣ ಅವರ ‘ಭೂಮಿ’ ಯೋಜನೆ ಕೂಡ ಅಪರೂಪದ್ದು . ಬೇರೆ ಯಾರೂ ಈ ರೀತಿ ಯೋಚಿಸುತ್ತಿರಲಿಲ್ಲ ಎನ್ನುವ ಬಗ್ಗೆ ನನಗೆ ನಂಬಿಕೆಯಿದೆ. ಹದಿನೆಂಟು ತಿಂಗಳ ಹಿಂದೆಯೇ ಮುಖ್ಯಮಂತ್ರಿಗಳು ಇಂಥ ಯೋಜನೆ ಬಗೆಗೆ ಯೋಚಿಸಿದ್ದಾರೆ ಎಂದು ಬಿಕೆಸಿ ಮುಖ್ಯಮಂತ್ರಿಗಳನ್ನು ಶ್ಲಾಘಿಸಿದರು. ‘ಆದರೆ ಇದಿಷ್ಟೇ ನಮ್ಮ ಗುರಿಯಲ್ಲ , ಇಲ್ಲಿಗೇ ಸಾಧನೆ ಮುಗಿಯಲಿಲ್ಲ ’ ಎನ್ನುವುದನ್ನೂ ಅವರು ಸ್ಪಷ್ಟಪಡಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಐಟಿ ಯೋಜನೆಗಳು ವಿಫಲವಾಗುತ್ತಿರುವುದೇಕೆ?

ಈ ಕುರಿತು ಚಂದ್ರಶೇಖರ್‌ ಅವರು ಮಂಡಿಸುವ ವಾದ ಕುತೂಹಲಕರವಾಗಿದೆ : ನಮ್ಮ ಕಾರ್ಯಕ್ರಮಗಳು ವಾಣಿಜ್ಯ ಧೋರಣೆ ಹೊಂದದೆ ಇರುವುದರಿಂದಲೇ ಗ್ರಾಮೀಣ ಪ್ರದೇಶದಲ್ಲಿ ಮಾಹಿತಿ ತಂತ್ರಜ್ಞಾನ ಯೋಜನೆಗಳು ಯಶಸ್ಸು ಕಾಣುತ್ತಿಲ್ಲ . ಈವರೆಗೂ ವ್ಯಾಪಾರಿ ಮನೋಭಾವದಿಂದ ಗ್ರಾಮೀಣ ಪ್ರದೇಶದಲ್ಲಿ ಐಟಿ ಯೋಜನೆಗಳನ್ನು ಯಾರೂ ತೊಡಗಿಸಿಯೇ ಇಲ್ಲ . ಈ ತಪ್ಪನ್ನು ನಾನೂ ಮಾಡಲಿಕ್ಕೆ ಬಯಸುವುದಿಲ್ಲ . ಈ ಮಾತನ್ನು ನಾನು ಪ್ರಚಾರಕ್ಕಾಗಿ ಹೇಳುತ್ತಿಲ್ಲ .

ಸ್ಥಳೀಯವಾಗಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ಸಾಧನೆ ದೊಡ್ಡದು. ಸಿಂಪ್ಯೂಟರ್‌ ಅಭಿವೃದ್ಧಿಯನ್ನು ಇಲ್ಲಿ ಹೆಸರಿಸಬಹುದು. ಗ್ರಾಮೀಣ ಪ್ರದೇಶಗಳಿಗೆ ಮಾಹಿತಿ ತಂತ್ರಜ್ಞಾನ ಇದರಿಂದ ಸುಲಭವಾಗಿ ಮುಟ್ಟಲು ಸಾಧ್ಯ. ಸದ್ಯಕ್ಕೆ ನಮ್ಮೆಲ್ಲ ಯೋಚನಾ ಲಹರಿಗಳು ನಗರ ಮುಖಿ ಹಾಗೂ ಕಾರ್ಪೊರೇಟ್‌ ಪರವಾಗಿವೆ, ಇದು ಬದಲಾಗಬೇಕು.

ಜ್ಞಾನಕೇಂದ್ರ : ಗ್ರಾಮೀಣ ಪ್ರದೇಶಗಳಲ್ಲಿ ಜ್ಞಾನಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶವಿದೆ. ಇದರಿಂದಾಗಿ ಕೃಷಿಗೆ ಸಂಬಂಧಿಸಿದ ಸಮಗ್ರ ಮಾಹಿತಿ, ಸರ್ಕಾರದ ಯೋಜನೆಗಳ ಬಗೆಗಿನ ಮಾಹಿತಿ ಕೃಷಿಕರಿಗೆ ಲಭ್ಯವಾಗುತ್ತದೆ. ಆರೋಗ್ಯ, ಉದ್ಯೋಗ ಇತ್ಯಾದಿ ವಿಷಯಗಳ ಬಗೆಗೂ ಮಾಹಿತಿ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಿಂಪ್ಯೂಟರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರ ಉದ್ದೇಶಿಸಿದೆ.

ಜನವರಿ ಮೂರನೇ ವಾರದಲ್ಲಿ ಡಾ.ಸ್ವಾಮಿನಾಥನ್‌ ಅವರೊಂದಿಗೆ ಸಭೆ ಏರ್ಪಾಡಾಗಿದೆ. ಯುಎನ್‌ಡಿಪಿ ಈ ಸಭೆಯನ್ನು ಏರ್ಪಡಿಸಿದೆ. ಯುನಿಸೆಫ್‌ ಪ್ರತಿನಿಧಿಗಳು ಹಾಗೂ ಗ್ರಾಮೀಣ ಪ್ರದೇಶದ ಮಾಹಿತಿ ತಂತ್ರಜ್ಞಾನ ದುಡಿದು ಅನುಭವವಿರುವ ಇತರರು ಸಭೆಯಲ್ಲಿ ಭಾಗವಹಿಸುವರು. ಇಡೀ ದಿನ ಸಭೆ ನಡೆಯಲಿದೆ. ಆನಂತರ ಗ್ರಾಮೀಣ ಪ್ರದೇಶಗಳಲ್ಲಿ ಐಟಿ ಅನುಷ್ಠಾನ ಕುರಿತು ಸರ್ಕಾರ ಕ್ರಿಯಾ ಯೋಜನೆ ಸಿದ್ಧಪಡಿಸಲಿದೆ.

ಸಮಾಜ ಹಾಗೂ ವಿತ್ತ ಕ್ಷೇತ್ರದ ಪ್ರತಿಯಾಂದು ಕ್ಷೇತ್ರದಲ್ಲೂ ಮಾಹಿತಿ ತಂತ್ರಜ್ಞಾನವನ್ನು ತೊಡಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆ ಅಭಿವೃದ್ಧಿ ಸಾಧ್ಯ. ಚೀನಾ ಇಂಥ ಪ್ರಬಲ ಸ್ಥಳೀಯ ಮಾರುಕಟ್ಟೆ ಹೊಂದಿರುವುದರಿಂದಲೇ ಹಾರ್ಡ್‌ವೇರ್‌ನಲ್ಲಿ ಪ್ರಾಬಲ್ಯ ಸಾಧಿಸಿದೆ.

ಶಾಲೆಗಳಿಗೆ ಕಂಪ್ಯೂಟರ್‌ಗಳು ತಲುಪಿದವಾ?

ಸಾವಿರ ಗ್ರಾಮೀಣ ಶಾಲೆಗಳಲ್ಲಿ ಕಂಪ್ಯೂಟರ್‌ ಒದಗಿಸುವ ಯೋಜನೆ ಏನಾಯಿತು? ಮಕ್ಕಳು ಕಂಪ್ಯೂಟರ್‌ಗಳ ಪ್ರಯೋಜನ ಪಡೆಯುತ್ತಿದ್ದಾರಾ?

ನೀವು ನೆನಪಿಸಿದ್ದು ಒಳ್ಳೆಯದಾಯಿತು; ಯೋಜನೆಯ ಫಲಶ್ರುತಿ ಬಗೆಗೆ ಸ್ಪಷ್ಟ ವರದಿ ಬಂದಿಲ್ಲ . ಯೋಜನೆಯ ಅನುಷ್ಠಾನ ಕುರಿತು ನಮ್ಮಲ್ಲಿ ನಿಗಾ ವಹಿಸುವ ಜಾಯಮಾನವೇ ಕಡಿಮೆ. ಶಾಲೆಗಳಿಗೆ ಕಂಪ್ಯೂಟರ್‌ ತಲುಪಿದವಾ? ಅವುಗಳ ಬಳಕೆಯಾಗುತ್ತಿದೆಯಾ? ಮಕ್ಕಳು ಕಲಿತಿದ್ದೇನು? ಮುಂತಾದ ವಿಷಯಗಳ ಕುರಿತು ಸಮಗ್ರ ವರದಿ ಕಳಿಸುವಂತೆ ನಮ್ಮ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದರು ಬಿಕೆಸಿ.

ಸರ್ಕಾರದ ಯೋಜನೆಗಳಲ್ಲಿ ಖಾಸಗಿಯವರಿಗೂ ಪಾಲಿದೆ. ಭೂಮಿ, ಮಾಹಿತಿ ಸಿಂಧು ಹಾಗೂ ಯುವ.ಕಾಂ ಯೋಜನೆಗಳಲ್ಲಿ ಖಾಸಗಿಯವರ ಪಾಲು ದೊಡ್ಡದು. ಪ್ರತಿಯಾಂದರಲ್ಲೂ ಸರ್ಕಾರ ಭಾಗಿಯಾಗಿದೆ. ಆದರೆ, ಬಹುತೇಕ ಕೆಲಸ ಖಾಸಗಿಯವರದೇ ಎಂದು ಸಚಿವರು ಹೇಳಿದರು.

ಯೂನಿಕೋಡ್‌ ಸಿದ್ಧವಾಗುತ್ತಿದೆ

ಎಲ್ಲರೂ ತಮ್ಮ ತಮ್ಮ ಪಾಲಿನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜನವರಿ ಮೊದಲ ವಾರದಲ್ಲಿ ಕನ್ನಡ ಗಣಕ ಪರಿಷತ್ತು ಪ್ರತಿನಿಧಿಗಳು, ಬರಗೂರು ರಾಮಚಂದ್ರಪ್ಪ , ಮಾಹಿತಿ ತಂತ್ರಜ್ಞಾನ ಇಲಾಖೆ ಅಧಿಕಾರಿಗಳು ಹಾಗೂ ಇತರೆ ಆಸಕ್ತರ ಸಭೆ ನಡೆಯಲಿದ್ದು , ಕನ್ನಡ ಕ್ಷೇತ್ರದಲ್ಲಿ ಏನು ನಡೆಯುತ್ತಿದೆ ಎನ್ನುವುದರ ಬಗ್ಗೆ ಚರ್ಚಿಸಲಾಗುವುದು. ಕನ್ನಡ ಸಾಫ್ಟ್‌ವೇರ್‌ ಬಗೆಗೆ ಕೆಲಸ ಮಾಡುತ್ತಿರುವ ವಿವಿಧ ಗುಂಪುಗಳ ನಡುವೆ ಸಂಪರ್ಕ ಸಾಧಿಸುವುದು ಸರ್ಕಾರದ ಉದ್ದೇಶ.

ಮೈಕ್ರೋಸಾಫ್ಟ್‌ ಎಕ್ಸ್‌ಪಿ ಕನ್ನಡ ಆವೃತ್ತಿಯಲ್ಲಿ ಫಾಂಟ್‌ ಸಮಸ್ಯೆಯಿದೆ ಎನ್ನುವ ದೂರುಗಳ ಕುರಿತು ಸಚಿವರ ಗಮನ ಸೆಳೆದಾಗ, ಇಂಥ ಯಾವ ಸಮಸ್ಯೆಯೂ ನನ್ನ ಗಮನಕ್ಕೆ ಬಂದಿಲ್ಲ ಎಂದರು.

ದಟ್ಸ್‌ಕನ್ನಡ.ಕಾಂ ಚೆನ್ನಾಗಿದೆ!

ಪ್ರತಿದಿನ ಕನ್ನಡ ವೆಬ್‌ಸೈಟ್‌ ಬ್ರೌಸ್‌ ಮಾಡಲಿಕ್ಕೆ ಬಿಕೆಸಿ ಅವರಲ್ಲಿ ಸಮಯವಿಲ್ಲ . ಆದರೆ, ಸಾಧ್ಯವಾದಾಗಲೆಲ್ಲ ಅವರು ಕನ್ನಡ ವೆಬ್‌ಸೈಟ್‌ಗಳಿಗೆ ಭೇಟಿ ಕೊಡುತ್ತಾರೆ. ದಟ್ಸ್‌ಕನ್ನಡ.ಕಾಂ ಚೆನ್ನಾಗಿದೆ. ಅದು ಅತ್ಯಂತ ಸುವ್ಯವಸ್ಥಿತ ವೆಬ್‌ಸೈಟ್‌ ಎನ್ನುವುದು ಬಿಕೆಸಿ ಕಾಂಪ್ಲಿಮೆಂಟ್ಸ್‌ .

ಅಂದಹಾಗೆ, ಅಂತರ್ಜಾಲದಲ್ಲಿ ಕನ್ನಡವನ್ನು ಪ್ರೋತ್ಸಾಹಿಸುವ ಕುರಿತು ಸರ್ಕಾರದ ನೀತಿಯೇನು? ‘ಕನ್ನಡ ವೆಬ್‌ಸೈಟ್‌ಗಳನ್ನು ಸರ್ಕಾರ ಗುರ್ತಿಸುತ್ತದೆ’ ಎನ್ನುತ್ತಾರೆ ಬಿಕೆಸಿ.

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more