• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊನೆಗೂ ಮತ ಚಲಾಯಿಸಿದ ಮೇಯರ್‌ ಪ್ರೇಮಾ ಕಾರ್ಯಪ್ಪ

By Staff
|

ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಸಾವಿರಾರು ಮತದಾರರ ಹೆಸರುಗಳು ಬಿಟ್ಟು ಹೋಗಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ನಗರದ ಮೇಯರ್‌ ಪ್ರೇಮಾ ಕಾರ್ಯಪ್ಪ ಅವರೂ ಹೊರತಾಗಿರಲಿಲ್ಲ.

ಪ್ರೇಮಾ ಕಾರ್ಯಪ್ಪ ಅವರ, ಹೆಸರು ಹೊಸ ಮತದಾರರ ಪಟ್ಟಿಯಲ್ಲಿತ್ತು. ಆದರೆ, 1995ರ ಮತಪಟ್ಟಿ ಹೊಂದಿದ್ದ ಚುನಾವಣಾಧಿಕಾರಿಗಳು, ತಮ್ಮ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದ ಕಾರಣ ಪ್ರೇಮಾ ಕಾರ್ಯಪ್ಪ ಅವರಿಗೆ ಮತ ಚಲಾಯಿಸಲು ಬೆಳಗ್ಗೆ ಅವಕಾಶ ನೀಡಲಿಲ್ಲ.

ಛಲಬಿಡದ ತ್ರಿವಿಕ್ರಮನಂತೆ ತಮ್ಮ ಹಕ್ಕು ಚಲಾಯಿಸೇ ತೀರುವುದಾಗಿ ಪಟ್ಟು ಹಿಡಿದ ಕಾರ್ಯಪ್ಪ ಅವರು, ಪಾಲಿಕೆಯ ವಿವಿಧ ಅಧಿಕಾರಿಗಳಿಗೆ ಫೋನಾಯಿಸಿ, ತರಾಟೆಗೆ ತೆಗೆದುಕೊಂಡು ಕೊನೆಗೂ ಮಧ್ಯಾಹ್ನದ ವೇಳೆಗೆ ನಿರ್ಮಲಾ ಸ್ಕೂಲ್‌ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಕೆಂಪಾಪುರ ಅಗ್ರಹಾರದಲ್ಲಿ ಸಾವಿರಾರು ಮತದಾರರ ಹೆಸರು ಬಿಟ್ಟು ಹೋಗಿರುವುದನ್ನು ಪ್ರತಿಭಟಿಸಿ, ಕಲ್ಲುತೂರಾಟ ನಡೆದಾಗ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಪಾದರಾಯನಪುರ, ಆವಲಹಳ್ಳಿ, ಚಾಮರಾಜಪೇಟೆ, ಗಾಯತ್ರಿನಗರ, ತಿಲಕನಗರ, ಶ್ರೀನಗರ ಸೇರಿದಂತೆ ಹಲವು ವಾರ್ಡ್‌ಗಳಲ್ಲೂ ಸಾವಿರಾರು ಮತದಾರರ ಹೆಸರು ಮತಪಟ್ಟಿಯಿಂದ ಬಿಟ್ಟುಹೋಗಿರುವ ಆರೋಪಗಳಿವೆ.

(ಇನ್‌ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more