• search

ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ ಪಾಲಿಕೆ ಚುನಾವಣೆ ಫಲಿತಾಂಶ

By Staff
Subscribe to Oneindia Kannada
For Quick Alerts
ALLOW NOTIFICATIONS
For Daily Alerts

    ಬೆಂಗಳೂರು : ಬೆಂಗಳೂರು ಮಹಾನಗರ ಪಾಲಿಕೆಯ ನೂರು ವಾರ್ಡ್‌ಗಳಿಗೆ ಭಾನುವಾರ ಬಿರುಸಿನಿಂದ ಮತದಾನ ಆರಂಭವಾಗಿದೆ. ಕೆಲವು ವಾರ್ಡ್‌ಗಳಲ್ಲಿ ಬೆಳಗ್ಗೆ 7 ಗಂಟೆಗೇ ಸರತಿಯ ಸಾಲಿನಲ್ಲಿ ನಿಂತು ಜನ ಮತ ಚಲಾಯಿಸುತ್ತಿದ್ದರೆ, ವಿದ್ಯಾವಂತರ ವಾರ್ಡ್‌ಗಳಾದ ಜಯನಗರ, ನರಸಿಂಹರಾಜ ಕಾಲೋನಿ, ಇಂದಿರಾನಗರ, ಸದಾಶಿವನಗರ, ಮಲ್ಲೇಶ್ವರದ ಮತಗಟ್ಟೆಗಳಲ್ಲಿ ಮತದಾರರೇ ಇರಲಿಲ್ಲ.

    ಹೇಳಿ ಕೇಳಿ ಭಾನುವಾರ ಆದ್ದರಿಂದ ಮಧ್ಯಾಹ್ನದ ವೇಳೆಗೆ ಮತದಾನ ಬಿರುಸಾಗಲಿದೆ ಎಂಬುದು ಅಭ್ಯರ್ಥಿಗಳ ಆಶಾಭಾವನೆ. ಈ ಮಧ್ಯೆ ನಗರ ಪಾಲಿಕೆಯ ನೂರು ವಾರ್ಡ್‌ಗಳಲ್ಲಿ 739 ಅಭ್ಯರ್ಥಿಗಳು ಕಣದಲ್ಲಿದ್ದು, 26,96,252 ಮತದಾರರು ಇವರ ಹಣೆಬರಹವನ್ನು ನಿರ್ಧರಿಸಲಿದ್ದಾರೆ.

    28 ಚುನಾವಣಾಧಿಕಾರಿಗಳು, 28 ಸಹಾಯಕ ಚುನಾವಣಾಧಿಕಾರಿಗಳು, 3589 ಮತಗಟ್ಟೆ ಅಧಿಕಾರಿಗಳು ಮತ್ತು 14,039 ಇತರ ಸಿಬ್ಬಂದಿ ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. 430 ಸಾರಿಗೆ ಬಸ್‌ ಹಾಗೂ 375 ಜೀಪ್‌ಗಳನ್ನು ಚುನಾವಣೆ ಕಾರ್ಯಕ್ಕೆ ಬಳಸಿಕೊಳ್ಳಲಾಗಿದೆ. ಪೊಲೀಸರು ಬಿಗಿ ಬಂದೋಬಸ್ತ್‌ ಮಾಡಿದ್ದಾರೆ.

    ವೆಬ್‌ಸೈಟ್‌ನಲ್ಲಿ ಫಲಿತಾಂಶ: ಈ ಮಧ್ಯೆ ಮತಎಣಿಕೆ ಕಾರ್ಯ 28 ನಿಗದಿತ ಕೇಂದ್ರಗಳಲ್ಲಿ ಸೋಮವಾರ (ನ.12) ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಈ ಎಲ್ಲ ಫಲಿತಾಂಶಗಳನ್ನೂ ಕ್ರೋಡೀಕರಿಸಿ ಮಹಾನಗರ ಪಾಲಿಕೆಯು ತನ್ನ ವೆಬ್‌ಸೈಟ್‌ http://www.blrbmp.com/ ನಲ್ಲಿ ಪ್ರಕಟಿಸಲಿದೆ.

    ಕಣದಲ್ಲಿ ಕಾಂಗ್ರೆಸ್‌, ಭಾರತೀಯ ಜನತಾಪಕ್ಷದ ತಲಾ 100 ಅಭ್ಯರ್ಥಿಗಳು, ಜಾತ್ಯತೀತ ಜನತಾದಳದ 91, ಸಂಯುಕ್ತ ಜನತಾದಳದ 82, ಇತರೆ ಪಕ್ಷಗಳ 17 ಅಭ್ಯರ್ಥಿಗಳು ಹಾಗೂ 349 ಪಕ್ಷೇತರ ಅಭ್ಯರ್ಥಿಗಳು ಇದ್ದಾರೆ. ಭಾನುವಾರ ರಾಜ್ಯದ ಒಟ್ಟು 10 ಸ್ಥಳೀಯ ಸಂಸ್ಥೆಗಳಿಗೆ ಮತದಾನ ನಡೆಯುತ್ತಿದೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more