• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಗಾಯತ್ರಿನಗರದಲ್ಲಿ ಮತಗಟ್ಟೆ ಅಪಹರಣ: ಮತದಾನ ರದ್ದು

By Staff
|

ಬೆಂಗಳೂರು: ಬೆಂಗಳೂರಿನ ಗಾಯತ್ರಿನಗರದ ಮತಗಟ್ಟೆ ಸಂಖ್ಯೆ 111ಕ್ಕೆ ನುಗ್ಗಿದ ಕೆಲವು ದುಷ್ಕರ್ಮಿಗಳು ಚುನಾವಣಾಧಿಕಾರಿಗಳನ್ನು ಥಳಿಸಿ, ಮತಗಟ್ಟೆ ಅಪಹರಿಸಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಮಹಾನಗರ ಪಾಲಿಕೆ ಚುನಾವಣೆ ಆರಂಭವಾದ ಕೇವಲ ಒಂದು ಗಂಟೆ ಅವಧಿಯಲ್ಲಿ ಈ ಪ್ರಕರಣ ವರದಿಯಾಗಿದೆ.

ಕಾಂಗ್ರೆಸ್‌ ಕಾರ್ಯಕರ್ತರೆಂದು ಹೇಳಿಕೊಂಡು ಮತಗಟ್ಟೆ ಪ್ರವೇಶಿಸಿದ ಕೆಲವು ದುಷ್ಕರ್ಮಿಗಳು, ಚುನಾವಣಾಧಿಕಾರಿಗಳ ಮೇಲೆ ಹಲ್ಲೆ ಮಾಡಿ, ಮತಗಟ್ಟೆ ಅಪಹರಿಸಿ, ಚಲಾಯಿಸಲಾಗಿದ್ದ 100ಕ್ಕೂ ಹೆಚ್ಚು ಮತಪತ್ರಗಳನ್ನು ತೆಗೆದುಕೊಂಡು, ಮತಪೆಟ್ಟಿಗೆಯನ್ನು ಚರಂಡಿಯಲ್ಲಿ ಎಸೆದು ಪರಾರಿಯಾಗಿದ್ದಾರೆ.

ಬಿಜೆಪಿ ಶಾಸಕ ಸುರೇಶ್‌ ಕುಮಾರ್‌ ಅವರ ಮನೆಯ ಹಿಂಭಾಗದಲ್ಲೇ ಇರುವ ಮತಗಟ್ಟೆಯಲ್ಲಿ ಈ ಅಪಹರಣ ನಡೆದಿದೆ. ವಿಷಯ ತಿಳಿದ ಬಿಜೆಪಿ ಕಾರ್ಯಕರ್ತರು, ಈ ವಾರ್ಡ್‌ನ ಮತದಾನವನ್ನು ರದ್ದುಪಡಿಸುವಂತೆ ಧರಣಿ ನಡೆಸಿದರು. ಚುನಾವಣಾಧಿಕಾರಿಗಳ ದೂರನ ಮೇರೆಗೆ ಮತಗಟ್ಟೆ ಸಂಖ್ಯೆ 111ರ ಮತದಾನವನ್ನು ರದ್ದು ಪಡಿಸಲಾಗಿದೆ. ಪೊಲೀಸರು ದುಷ್ಕರ್ಮಿಗಳ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.

(ಇನ್‌ಫೋ ವಾರ್ತೆ)

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more