ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಲ್ಲಿ ರಾತ್ರಿ 11-30ರ ತನಕ ಬಾರ್‌, ಲೈವ್‌ಬ್ಯಾಂಡ್‌

By Super
|
Google Oneindia Kannada News

Bar and Restaurants timings in Bangalore
ಬೆಂಗಳೂರು, ನ.3 : ಬೆಂಗಳೂರಿನಲ್ಲಿ ಇನ್ನು ಮುಂದೆ ರಾತ್ರಿ 11.30ರ ತನಕ ಲೈವ್‌ಬ್ಯಾಂಡ್‌ ಹಾಗೂ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳು ತೆರೆದಿರುತ್ತವೆ. ಈ ವರೆಗೆ ರಾತ್ರಿ 11ಕ್ಕೆ ಬಾಗಿಲು ಮುಚ್ಚುತ್ತಿದ್ದ ಬ್ಯಾಂಡ್‌ ಅಂಡ್‌ ಬಾರ್‌ಗಳು ಅರ್ಧಗಂಟೆ ಹೆಚ್ಚು ಸೇವೆ ಸಲ್ಲಿಸುತ್ತವೆ.

ಇದಕ್ಕೆ ಬೆಂಗಳೂರಿನ ನೂತನ ಪೊಲೀಸ್‌ ಕಮೀಷನರ್‌ ಸಾಂಗ್ಲಿಯಾನ ಅನುಮತಿ ನೀಡಿದ್ದಾರೆ. ತಾವು ಅಧಿಕಾರ ವಹಿಸಿಕೊಂಡ ಮೊದಲ ದಿನವೇ 'ರಾತ್ರಿ 11ಗಂಟೆ ನಂತರ ವಹಿವಾಟು ನಡೆಸುವ ಬಾರ್‌ ಅಂಡ್‌ ಲೈವ್‌ ಬ್ಯಾಂಡ್‌ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ" ಪ್ರಕಟಿಸಿದ್ದ ಸಾಂಗ್ಲಿಯಾನ ಅವರು ತಮ್ಮ ನಿರ್ಧಾರ ಬದಲಿಸಿದ್ದಾರೆ.

ಶುಕ್ರವಾರ ಬಾರ್‌ ಮತ್ತು ಲೈವ್‌ಬ್ಯಾಂಡ್‌ ಮಾಲಿಕರೊಂದಿಗೆ ಸಭೆ ನಡೆಸಿದ ಬಳಿಕ ಸಾಂಗ್ಲಿಯಾನಾ ಅವರು ತಮ್ಮ ನಿರ್ಧಾರ ಬದಲಿಸಿ, ಒಂದು ತಿಂಗಳು ಪ್ರಾಯೋಗಿಕವಾಗಿ ಅರ್ಧಗಂಟೆ ಹೆಚ್ಚು ಕಾಲ ಬಾರ್‌ ಅಂಡ್‌ ಬ್ಯಾಂಡ್‌ ತೆರೆಯಲು ಅನುಮತಿ ನೀಡಿದ್ದಾರೆ.

ಈ ಒಂದು ತಿಂಗಳ ಅವಧಿಯಲ್ಲಿ ರಸ್ತೆ ಅಪಘಾತ, ಅಪರಾಧ ಪ್ರಕರಣಗಳ ಪರಾಮರ್ಶೆ ಮಾಡಿ, ಹೊಸ ನಿರ್ಧಾರವನ್ನು ಶಾಶ್ವತಗೊಳಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲಿದ್ದಾರೆ. ಈ ಒಂದು ತಿಂಗಳಂತೂ ಕುಡುಕರಿಗೆ ಇನ್ನೊಂದರ್ಧಗಂಟೆ ಸುಗ್ಗಿ.....

English summary
This Day That Age : Bar and Restaurants timings in Bangalore extended from 11 PM to 11. 30 PM. New Commissioner of police H. T. Sangliyana allows late night partying in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X