ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರು-ಲಕ್ಷದ್ವೀಪ ನಡುವೆ ಡೀಪ್‌ಸೆಟ್‌ಹಡಗುಯಾನ ಆರಂಭ

By Staff
|
Google Oneindia Kannada News

ಮಂಗಳೂರು : ವೇಗಯುಗದಲ್ಲೊಂದು ಸಮುದ್ರಯಾನದ ಸುದ್ದಿ. ಮಂಗಳೂರು - ಲಕ್ಷದ್ವೀಪದ ನಡುವೆ ನೇರ ಹಡಗುಯಾನ ಅಕ್ಟೋಬರ್‌ 21ರಂದು ಆರಂಭವಾಗಲಿದ್ದು, ಈ ನೇರ ಸಂಚಾರದ ಪ್ರಥಮ ಹಡಗು ‘ಡೀಪ್‌ ಸೆಟ್‌’ಲಕ್ಷದ್ವೀಪದಿಂದ ಪ್ರಯಾಣಿಕರನ್ನು ಹೊತ್ತು ಈ ತಿಂಗಳ 24ರಂದು ಮಂಗಳೂರು ಸೇರಲಿದೆ.

ಅಕ್ಟೋಬರ್‌ 21ರೊಂದು ಲಕ್ಷದ್ವೀಪದ ಸಮುದ್ರ ಕಿನಾರೆಯಿಂದ ಸಾಗರ ಪ್ರವೇಶಿಸುವ ಈ ಹಡಗು ಮೂರು ದಿನಗಳ ಸಮುದ್ರಯಾನದ ನಂತರ ಮಂಗಳೂರು ಬಂದರು ಸೇರಲಿದೆ. ಮಂಗಳೂರು- ಲಕ್ಷದ್ವೀಪ ನಡುವಿನ ಪ್ರಯಾಣಕ್ಕೆ ಈ ಡೀಪ್‌ಸೆಟ್‌ ಹಡಗು ಯಾವತ್ತೂ ಸಿದ್ಧವಾಗಿರುತ್ತದೆ. ಇನ್ನು ಮುಂದೆ ಲಕ್ಷದ್ವೀಪ ಪ್ರಯಾಣ ಬಯಸುವ ಮಂಗಳೂರಿನ ಪ್ರಯಾಣಿಕರು ಹಡಗು ಏರಲು ಕೇರಳದ ಯರ್ನಾಕುಲಂ ವರೆಗೆ ಹೋಗಬೇಕಾದ ಅಗತ್ಯವಿಲ್ಲ.

ಪ್ರಥಮ ಯಾನದ ಡೀಪ್‌ಸೆಟ್‌ ಹಡಗನ್ನು ಅಕ್ಟೋಬರ್‌ 24ರಂದು ಮಂಗಳೂರು ಬಂದರಿನಲ್ಲಿ ಸಾಂಪ್ರಯಾಯಿಕವಾಗಿ ಸ್ವಾಗತಿಸಲಾಗುವುದು. ಇದಕ್ಕಾಗಿ ಸ್ವಾಗತ ಸಮಿತಿಯಾಂದನ್ನು ರಚಿಸಲಾಗಿದೆ. ಮಂಗಳೂರಿನ ಉದ್ಯಮಿಗಳ ದೃಷ್ಠಿಯಿಂದ ಇದು ಒಂದು ಅನುಕೂಲಕರ ಬೆಳವಣಿಗೆಯಾಗಿದೆ ಎಂದು ಬಂದರಿನ ಅಧಿಕಾರಿಗಳು ಹೇಳಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X