ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ನಲ್ಲೇ ಪಿಎಸ್‌ಎಲ್‌ವಿ 3 ಸಿ ಉಡಾವಣೆ: ಇಸ್ರೋ

By Staff
|
Google Oneindia Kannada News

ಬೆಂಗಳೂರು : ಭಾರತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಿ.ಎಸ್‌.ಎಲ್‌.ವಿ. 5ನೇ ಉಡಾವಣೆಗೆ ಸಜ್ಜಾಗಿದೆ. ಈ ತಿಂಗಳಿನಲ್ಲೇ ಪಿ.ಎಸ್‌.ಎಲ್‌.ವಿ.ಯನ್ನು ಉಡಾಯಿಸುವ ಸಾಧ್ಯತೆಗಳು ನಿಚ್ಚಳವಾಗಿವೆ.

ಅಕ್ಟೋಬರ್‌ ಕೊನೆಯಲ್ಲಿ ಪಿ.ಎಸ್‌.ಎಲ್‌.ವಿ.ಯನ್ನು ಉಡಾಯಿಸುವ ಯೋಜನೆ ಇದೆಯಾದರೂ, ಹವಾಮಾನಕ್ಕೆ ಅನುಗುಣವಾಗಿ ಉಡಾವಣೆ ದಿನಾಂಕ ಹಿಂದೂಡುವ ಅಥವಾ ಮುಂದೂಡುವ ಎರಡೂ ಸಾಧ್ಯತೆಗಳು ಇವೆ ಎಂದು ಇಸ್ರೋ ಮೂಲಗಳು ಬುಧವಾರ ಹೇಳಿವೆ.

ಉಡ್ಡಯನದ ದಿನಾಂಕ ನಿಗದಿಯ ಬಗ್ಗೆ ಒಂದು ವಾರದಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ ಎಂದೂ ಮೂಲಗಳು ಹೇಳಿವೆ. ಮೂಲತಃ ಪಿಎಸ್‌ಎಲ್‌ವಿ ಸಿ -3ನ್ನು ಸೆಪ್ಟೆಂಬರ್‌ನಲ್ಲೇ ಉಡಾಯಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಅದು ವಿಳಂಬವಾಯಿತು.

ಭಾರತದ ಖಗೋಳ ಪ್ರಾಯೋಗಿಕ ಉಪಗ್ರಹ (ಟಿಇಎಸ್‌), ಬೆಲ್ಜಿಯಂನ ಪ್ರೋಬಾ ಮತ್ತು ಜರ್ಮನ್‌ ಸ್ಪೇಸ್‌ ಏಜೆನ್ಸಿ ಡಿಎಲ್‌ಆರ್‌ನ ಬರ್ಡ್‌ ಉಪಗ್ರಹಗಳನ್ನು ಪಿ.ಎಸ್‌.ಎಲ್‌.ವಿ. ಸಿ -3ಯು ಹೊತ್ತೊಯ್ಯಲಿದೆ.

(ಪಿ.ಟಿ.ಐ)

ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X