ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ-ಸೆಪ್ಟಂಬರ್‌ ತ್ರೆೃಮಾಸಿಕ : ಇನ್ಫೋಸಿಸ್‌ಗೆ 201 ಕೋಟಿ ರೂ.ಲಾಭ

By Staff
|
Google Oneindia Kannada News

ಬೆಂಗಳೂರು : ರಾಜ್ಯದ ಪ್ರಮುಖ ಸಾಫ್ಟ್‌ವೇರ್‌ ಉತ್ಪಾದಕ ಹಾಗೂ ದೇಶದ ಎರಡನೇ ಅತೀ ದೊಡ್ಡ ಸಾಫ್ಟ್‌ವೇರ್‌ ರಫ್ತು ಸಂಸ್ಥೆಯೆನಿಸಿಕೊಂಡಿರುವ ಇನ್ಫೋಸಿಸ್‌, ಸೆಪ್ಟಂಬರ್‌ 30, 2001 ಕ್ಕೆ ಕೊನೆಗೊಂಡ ತ್ರೆೃಮಾಸಿಕದಲ್ಲಿ ನಿವ್ವಳ 201.56 ಕೋಟಿ ರೂಪಾಯಿ ಲಾಭ ಮಾಡಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ಇನ್ಫೋಸಿಸ್‌ ಲಾಭ 154.01 ಕೋಟಿ ರೂಪಾಯಿ ಆಗಿತ್ತು. ಬೆಂಗಳೂರು ಮೂಲದ, ನಾಸ್ದಾಕ್‌ ಪಟ್ಟಿಯಲ್ಲಿರುವ ಈ ಕಂಪೆನಿಯ ನಿವ್ವಳ ಆದಾಯ ಜುಲೈ- ಸೆಪ್ಟಂಬರ್‌ ಅವಧಿಯಲ್ಲಿ 650.13 ಕೋಟಿ ರೂಪಾಯಿಯಷ್ಟಿದ್ದು , ಕಳೆದ ವರ್ಷ ಈ ಅವಧಿಯ ಆದಾಯ 446.10 ಕೋಟಿ ರೂಪಾಯಿಯಾಗಿತ್ತು.

ಕಂಪೆನಿಯ ನಿರ್ದೇಶಕರ ಮಂಡಳಿಯು ಬುಧವಾರ ಈ ವಿಷಯವನ್ನು ಪ್ರಕಟಿಸಿದ್ದು, ಈ ಬಾರಿ ಪ್ರತಿ ಷೇರ್‌ನ ಮೇಲೆ ರೂಪಾಯಿ 7.50 ರಷ್ಟು ಇಂಟರಿಮ್‌ ಡಿವಿಡೆಂಟ್‌ ಘೋಷಿಸಲಾಗಿದೆ. ಕಳೆದ ವರ್ಷ ಈ ಹೊತ್ತಿಗೆ ಇದು ರೂಪಾಯಿ 2.50 ಆಗಿತ್ತು.

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X