ಈಗಾಗಲೇ ಅಮೆರಿಕಾ ಮೇಲೆ ಜೈವಿಕ ಯುದ್ಧ ಪ್ರಾರಂಭವಾಗಿದೆಯಾ?
ವಾಷಿಂಗ್ಟನ್ : ಅಮೆರಿಕ ಮೇಲೆ ಉಗ್ರರು ಜೈವಿಕ ಯುದ್ಧ ಹೂಡಿರುವರೇ? ಇದು ಇನ್ನೂ ಖಾತರಿಯಾಗದಿದ್ದರೂ ಇಂಥಾ ದೊಡ್ಡ ಆತಂಕವನ್ನು ಅಮೆರಿಕ ಈ ಹೊತ್ತು ಎದುರಿಸುತ್ತಿದೆ. ಕಳೆದ 25 ವರ್ಷಗಳಿಂದ ಕಂಡರಿಯದ ಆಂ್ಯಥ್ರಾಕ್ಸ್ ವೈರಸ್ ದಾಳಿಯಿಟ್ಟಿದ್ದು, ಇದರಿಂದ ಫ್ಲೋರಿಡಾದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬರಿಗೂ ಇದು ಹರಡಿರುವುದು ಪತ್ತೆಯಾಗಿದೆ.
ದಿ ಸನ್ ಟ್ಯಾಬ್ಲ್ಯಾಯ್ಡ್ನ ಫೋಟೋ ಸಂಪಾದಕ ಬಾಬ್ ಸ್ಟೀವನ್ಸ್ ಆ್ಯಂಥ್ರಾಕ್ಸ್ ಸೋಂಕಿನಿಂದ ಕಳೆದ ಶುಕ್ರವಾರ ಮೃತಪಟ್ಟಿದ್ದಾರೆ. ಟ್ಯಾಬ್ಲ್ಯಾಯ್ಡ್ನ ಅಂಚೆಕೋಣೆಯಲ್ಲಿ ಕಳೆದ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಸ್ಟೀವನ್ಸ್ ಸಹೋದ್ಯೋಗಿಯಾಬ್ಬರಿಗೂ ಆ್ಯಂಥ್ರಾಕ್ಸ್ ವೈರಸ್ ಸೋಂಕು ಉಂಟಾಗಿದೆ. ಇವರ ಮೂಗಿನ ಹೊಳ್ಳೆ ಹಾಗೂ ಕಂಪ್ಯೂಟರ್ ಕೀಲಿಮಣೆ ಮೇಲೆ ಆ್ಯಂಥ್ರಾಕ್ಸ್ ವೈರಸ್ಗಳು ಪತ್ತೆಯಾಗಿವೆ. ಮಿಯಾಮಿ ಡೇಡ್ ಕೌಂಟಿ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿರುವ ಸ್ಟೀವನ್ಸ್ ಸಹೋದ್ಯೋಗಿಯ ಶ್ವಾಸಕೋಶಕ್ಕೂ ಈ ವೈರಸ್ ತಲುಪಿದೆಯಾ ಎಂದು ತಿಳಿಯಲು ವೈದ್ಯರು ಪರೀಕ್ಷೆಗಳನ್ನು ನಡೆಸಿದ್ದಾರೆ.
ದಿ ಸನ್ ಕಚೇರಿಯನ್ನು ಸೀಲ್ ಮಾಡಲಾಗಿದ್ದು, ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಜಾರಿ ಆಡಳಿತ ವೈರಸ್ಗಳು ಯಾವ ಪ್ರಮಾಣದಲ್ಲಿ ಹರಡಿವೆ ಎಂಬುದನ್ನು ಪರಿಶೀಲಿಸುತ್ತಿದೆ.
ಆ್ಯಂಥ್ರಾಕ್ಸ್ ಸಿಗುವುದು ಎಲ್ಲಿ ?
ಪ್ರಾಣಿಗಳಲ್ಲಿ ಈ ವೈರಸ್ ಲಭ್ಯ. ಅದನ್ನು ಸಂಗ್ರಹಿಸಿ ಎಲ್ಲಿ ಬೇಕಾದರೂ ಸಂಖ್ಯಾ ವರ್ಧನೆ ಮಾಡಬಹುದು. ಗಾಳಿಯಲ್ಲಿ ತೇಲಿಬಿಟ್ಟರೆ ಸಾಕು. ತಂತಾನೇ ಮನುಷ್ಯನ ದೇಹ ಹೊಕ್ಕುವ ಈ ವೈರಸ್ ದೇಹದಲ್ಲಿ ಸಂಸಾರ ವೃದ್ಧಿಸುತ್ತದೆ. ಆ ಸಂಸಾರ ಪ್ರಾಣ ತೆಗೆಯುತ್ತದೆ. ಮನುಷ್ಯನ ದೇಹವನ್ನು ವೈರಸ್ ಹೊಗಲು 3 ದಾರಿಗಳಿವೆ...
- ಚರ್ಮದಲ್ಲಿ ಆಗಿರುವ ತರಚು ಗಾಯದ ಮೂಲಕ
- ಆ್ಯಂಥ್ರಾಕ್ಸ್ ವೈರಸ್ ಬಾಧಿತ ವ್ಯಕ್ತಿ ಊಟ ಮಾಡಿದ ತಟ್ಟೆ ಅಥವಾ ಲೋಟವನ್ನು ಆರೋಗ್ಯವಂತ ಉಪಯೋಗಿಸಿದಾಗ
- ಗಾಳಿಯಲ್ಲಿ ತೇಲುವ ವೈರಸ್ ಉಸಿರಾಟ ಮೂಲಕ ದೇಹ ಸೇರುತ್ತದೆ. ಸಾಮಾನ್ಯವಾಗಿ ಜೈವಿಕ ಯುದ್ಧದ ಮೊದಲ ಘಟ್ಟದಲ್ಲಿ ವೈರಸ್ ದೇಹ ಸೇರುವುದು ಹೀಗೆಯೇ. ಸ್ಟೀವನ್ಗೆ ಆ್ಯಂಥ್ರಾಕ್ಸ್ ರೋಗ ಬಂದಿದ್ದೂ ಇದೇ ಕಾರಣಕ್ಕೆ.
ಇನ್ನೊಂದು ಮಾತು : ಒಂದು ವೇಳೆ ಜೈವಿಕ ಯುದ್ಧ ಶುರುವಾಗಿರುವುದು ನಿಜವೇ ಆದಲ್ಲಿ ಮುಂದೆ ಜಗತ್ತು ಕರಾಳ ದಿನಗಳನ್ನು ಕಾಣಬೇಕಾದೀತು. ಯಾಕೆಂದರೆ, ಇದು ಅನಂತ ಯುದ್ಧ. ಜೊತೆಗೆ ಸ್ಮಾಲ್ಪಾಕ್ಸ್ ವೈರಸ್ಗಳನ್ನು ಸಂಗ್ರಹಿಸಿಟ್ಟಿಕೊಂಡಿರುವುದು ಅಮೆರಿಕಾ ಮತ್ತು ರಷ್ಯಾ ಮಾತ್ರ. 1934ರಲ್ಲಿಯೇ ಜಪಾನಿನ ಮೇಲೆ ಚೀನಾ ನಡೆಸಿದ್ದ ಜೈವಿಕ ಯುದ್ಧದ ಪರಿಣಾಮದ ತೀವ್ರತೆ ಸಾಕಷ್ಟಿತ್ತು. ತಜ್ಞರ ಪ್ರಕಾರ ಬಾಂಬ್ ದಾಳಿಗಿಂತ ಇದು ಭಾರೀ ಭಯಾನಕ.
(ಇನ್ಫೋ ವಾರ್ತೆ)