ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫಜಲ್ಪುರದಲ್ಲಿನ ಜಡಿ ಮಳೆಗೆ ಗೋಡೆ ಕುಸಿದು ತಾಯಿ ಮಗನ ಸಾವು

By Staff
|
Google Oneindia Kannada News

ಅಫಜಲ್ಪುರ : ತಾಲ್ಲೂಕಿನಲ್ಲಿ ತಡವಾಗಿ ಸುರಿದ ಜಡಿ ಮಳೆಗೆ 40 ಮನೆಗಳು ನೆಲಕಚ್ಚಿದ್ದು, ಮನೆಯ ಆವರಣ ಕುಸಿದ ಪರಿಣಾಮವಾಗಿ ಇಬ್ಬರು ವ್ಯಕ್ತಿಗಳು ಮೃತರಾಗಿದ್ದಾರೆ.

ಒಂದೇ ಮನೆಯ ತಾಯಿ ಮತ್ತು ಮಗ ಇಲ್ಲಿನ ಹಳೆಯ ತಹಸೀಲ್ದಾರ್‌ ಕಚೇರಿಯ ಬಳಿ ಕಾಂಪೌಂಡ್‌ ಕುಸಿದಾಗ ಬಲಿಯಾಗಿದ್ದಾರೆ. ಮಂಗಳವಾರ ಬೆಳಗ್ಗಿನಿಂದ ತಾಲ್ಲೂಕು ಕೇಂದ್ರದಲ್ಲಿ 50ಮೀಮೀ ಮಳೆ ಸುರಿದಿದೆ. ಅಫಜಲ್ಪುರ, ಬಾಳೂರಗಿ ಮತ್ತು ಕರಜಗಿ ಊರುಗಳಲ್ಲಿ ಮನೆಗಳು ಕುಸಿದಿರುವುದಾಗಿ ತಹಸೀಲ್ದಾರ್‌ ಶಿವ ಪುಟ್ರಪ್ಪ ಹೇಳಿದ್ದಾರೆ.

ಮಳೆಯ ಕಾಟದ ಜೊತೆಗೆ ತಾಲ್ಲೂಕಿನ ತೊಗರಿ ಬೆಳೆಗಳಿಗೆ ರೋಗ ತಗುಲಿವೆ. ರೋಗಕ್ಕೆ ತುತ್ತಾಗಿರುವ ತೊಗರಿ ಗಿಡಗಳನ್ನು ಸುಟ್ಟು ಹಾಕಿದರೂ ರೈತರು ಬೆಳೆಗಳನ್ನು ಬಚಾವ್‌ ಮಾಡಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕಳೆದ ವರ್ಷ ತೊಗರಿಗೆ ರೂ. 100ರೂಪಾಯಿ ಬೆಂಬಲ ಬೆಲೆ ಸಿಕ್ಕಿದ್ದು, ಈ ಬಾರಿಯೂ ಬೆಂಬಲ ಬೆಲೆಗಾಗಿ ಆಗ್ರಹಿಸದೆ ರೈತರ ಮುಂದೆ ಬೇರೆ ದಾರಿಯಿಲ್ಲ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X