ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಣಸೂರು ಅರಣ್ಯದಿಂದ ದಸರೆಗೆ ಬಂದ ಬಲರಾಮಬಳಗಕ್ಕೆ ಸ್ವಾಗತ

By Staff
|
Google Oneindia Kannada News

ಮೈಸೂರು : ನಾಡದೇವಿ ಚಾಮುಂಡೇಶ್ವರಿಯನ್ನು ಮೆರೆಸುವ ಚಿನ್ನದ ಅಂಬಾರಿಯನ್ನು ಹೊರುವ ಬಲರಾಮನ ಸಮೇತ ದಸರೆ ಉತ್ಸವದಲ್ಲಿ ಪಾಲ್ಗೊಳ್ಳಲು ಮೊದಲ ಕಂತಿನಲ್ಲಿ ಆಗಮಿಸಿದ 5 ಆನೆಗಳಿಗೆ ಅರಮನೆಯ ಆವರಣದಲ್ಲಿ ಗುರುವಾರ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.

ಪುಷ್ಪವೃಷ್ಟಿ ಹಾಗೂ ಮಂಗಳವಾದ್ಯಗಳೊಂದಿಗೆ ಆನೆಗಳಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಈ ಮುನ್ನ ಹುಣಸೂರು ಅರಣ್ಯದಿಂದ ಆನೆಗಳು ಹೊರಡುವಾಗ ಅವುಗಳಿಗೆ ಕಾಯಿ ಬೆಲ್ಲ ನೀಡುವ ಮೂಲಕ ಬೀಳ್ಕೊಡಲಾಯಿತು. ಆನೆಗಳನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಹಾಜರಿದ್ದ ವಾರ್ತಾ ಸಚಿವ ಎಂ. ಶಿವಣ್ಣ ಅವರು ಈ ಬಾರಿಯ ದಸರೆಯನ್ನು ಅತ್ಯಂತ ಸರಳವಾಗಿ ಆಚರಿಸಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

ರಾಜ್ಯದಲ್ಲಿ ಬರಗಾಲದ ಕರಾಳ ಛಾಯೆ ಕಾಣಿಸಿಕೊಂಡಿರು ಹಿನ್ನೆಲೆಯಲ್ಲಿ ದಸರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಆದರೆ ಸಾಂಪ್ರದಾಯಿಕ ಆಚರಣೆಗಳನ್ನು ಮೊಟಕುಗೊಳಿಸುವುದಿಲ್ಲ ಎಂದು ಶಿವಣ್ಣ ಹೇಳಿದರು. ಆನೆಗಳ ಆಗಮನದೊಂದಿಗೆ ದಸರೆ ಪ್ರಾರಂಭದ ಕಾಲಕ್ಕೆ ರಾಜ್ಯದಲ್ಲಿ ಮಳೆ ಕಾಣಿಸಿಕೊಂಡಿರುವ ಬಗ್ಗೆ ಸಚಿವರು ಸಂತೋಷ ವ್ಯಕ್ತಪಡಿಸಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X