• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸೆ.14ರಿಂದ ಹಂಪಿಯಲ್ಲಿ ಎಂಎಸ್‌ಐಎಲ್‌ರಾಷ್ಟ್ರೀಯ ಕಲಾ ಶಿಬಿರ

By Staff
|

ಬೆಂಗಳೂರು : ನಿತ್ಯೋತ್ಸವ ಸಂಗೀತ ಸ್ಪರ್ಧೆಯ ಮೂಲಕ ಸಾಂಸ್ಕೃತಿಕ ರಂಗದಲ್ಲಿ ಹೆಸರು ಮಾಡಿದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್‌ (ಎಂ.ಎಸ್‌.ಐ.ಎಲ್‌) ಈ ತಿಂಗಳ 14ರಿಂದ 22ರವರೆಗೆ ವಿಶ್ವವಿಖ್ಯಾತ ಹಂಪಿಯಲ್ಲಿ ರಾಷ್ಟ್ರೀಯ ಕಲಾ ಶಿಬಿರವನ್ನು ಏರ್ಪಡಿಸಿದೆ.

ಕಲಾವಿದರ ಜೊತೆ ನಿಕಟ ಸಂಪರ್ಕ ಹೊಂದುವ ನಿಟ್ಟಿನಲ್ಲಿ ಸಂಸ್ಥೆ ರಾಜ್ಯದಲ್ಲಿ ಕಲಾ ಗ್ಯಾಲರಿಯನ್ನು ಆರಂಭಿಸಲೂ ನಿರ್ಧರಿಸಿದೆ. ಇದಕ್ಕಾಗಿ ಹೆಸರಾಂತ ಕಲಾವಿದ ಎಸ್‌.ಜಿ. ವಾಸುದೇವ ಅವರ ನೇತೃತ್ವದಲ್ಲಿ ಕಲಾ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದು ಎಂಎಸ್‌ಐಎಲ್‌ ವ್ಯವಸ್ಥಾಪಕ ನಿರ್ದೇಶಕ ಐ.ಎಂ. ವಿಠಲಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಲಹಾ ಸಮಿತಿ ನೀಡಿರುವ ಸಲಹೆಯ ಮೇರೆಗೆ ಕಲಾ ಶಿಬಿರಕ್ಕೆ ರಾಜ್ಯ ಮತ್ತು ರಾಷ್ಟ್ರದ ಹಿರಿ-ಕಿರಿಯ ಕಲಾವಿದರನ್ನು ಮತ್ತು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಎಲ್ಲರನ್ನೂ ಒಂದೆಡೆ ಕಲೆಹಾಕುವ ಮೂಲಕ ಶಿಬಿರದಲ್ಲಿ ಆರೋಗ್ಯಕರವಾದ ಸಂವಾದ ಹಾಗೂ ವಿಚಾರ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಗಿದೆ ಎಂದರು.

ಹದಿನೇಳು ಹಿರಿಯ ಕಲಾವಿದರು ಮತ್ತು 25 ವಿದ್ಯಾರ್ಥಿಗಳು ಈ ಶಿಬಿರದಲ್ಲಿ ರಚಿಸುವ ಚಿತ್ರಗಳನ್ನು ಡಿಸೆಂಬರ್‌ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಪ್ರದರ್ಶಿಸಲಾಗುವುದು . ಉತ್ತಮ ಚಿತ್ರಗಳನ್ನು ಕ್ಯಾಲೆಂಡರ್‌, ಪೊಸ್ಟರ್‌ ಮಾಡುವ ಉದ್ದೇಶವೂ ಸಂಸ್ಥೆಗಿದೆ ಎಂದು ಅವರು ಹೇಳಿದರು.

ಅಪರ್ಣಕೌರ್‌, ಕೆ. ಕೋಶ್‌, ಜಯಶ್ರೀ ಚಕ್ರವರ್ತಿ, ಯು. ಭಾಸ್ಕರರಾವ್‌, ಅಲ್ತಾಫ್‌, ಅಖಿಲೇಶ್‌, ಪೀಟರ್‌ ಲೂಯಿಸ್‌, ಗಾಯತ್ರಿ ದೇಸಾಯಿ ಮೊದಲಾದ ಖ್ಯಾತನಾಮರು ಈ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಮೂರ್ತಿ ತಿಳಿಸಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more