ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ, ಪುಟ್ಟಪರ್ತಿಗೆ ಕೆಎಸ್‌ಟಿಡಿಸಿಯಿಂದ ಪ್ರತ್ಯೇಕ ಪ್ರವಾಸ

By Staff
|
Google Oneindia Kannada News

ಬೆಂಗಳೂರು : ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಉತ್ತರ ಕರ್ನಾಟಕ, ಗೋವಾ ಹಾಗೂ ಪುಟ್ಟಪರ್ತಿಗೆ ಸೆ.13ರಿಂದ 5 ದಿನಗಳ ಪ್ರತ್ಯೇಕ ಪ್ರವಾಸಗಳನ್ನು ಏರ್ಪಡಿಸಿದೆ. ಈ ಪ್ರವಾಸದಲ್ಲಿ ಗೋವಾ, ಜೋಗ ಜಲಪಾತ ಹಾಗೂ ಗೋಕರ್ಣ ಕ್ಷೇತ್ರಗಳ ದರ್ಶನ ಮಾಡಬಹುದಾಗಿದೆ.

ಪ್ರತಿ ಸೋಮವಾರ ಬೆಳಗ್ಗೆ 6 ಗಂಟೆಗೆ ಬೆಂಗಳೂರಿನಿಂದ ಹೊರಡುವ ಕೆ.ಎಸ್‌.ಟಿ.ಡಿ.ಸಿ.ಯ ಬಸ್‌ನಲ್ಲಿ ಗೋವಾ ಪ್ರವಾಸ ಕೈಗೊಳ್ಳಲು 1,700 ರುಪಾಯಿ (ಒಬ್ಬರಿಗೆ) ತೆರಬೇಕು. ಹಂಪಿ, ಟಿ.ಬಿ. ಡ್ಯಾಂ, ಬಾದಾಮಿ, ಐಹೊಳೆ, ಪಟ್ಟದಕಲ್ಲು, ಬಿಜಾಪುರ ಮತ್ತು ಕೂಡಲ ಸಂಗಮಕ್ಕೆ ಐದು ದಿನಗಳ ಪ್ರವಾಸ ಕೈಗೊಳ್ಳುವುದಾದರೆ, 1,225ರುಪಾಯಿ ದರ ನೀಡಬೇಕಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ಪ್ರತಿ ಗುರುವಾರ ಮತ್ತು ಭಾನುವಾರ ಪುಟ್ಟಪರ್ತಿಗೆ ಒಂದು ದಿನದ ಪ್ರವಾಸ ಸಹ ಇದ್ದು, ಬೆಳಗ್ಗೆ 7ಕ್ಕೆ ಬೆಂಗಳೂರಿನಿಂದ ಹೊರಡುವ ಬಸ್‌ ರಾತ್ರಿ 9 ಗಂಟೆಗೆ ಪುನಾ ಬೆಂಗಳೂರಿಗೆ ಮರಳುತ್ತದೆ. ದರ 240 ರುಪಾಯಿಗಳು. ಹೆಚ್ಚಿನ ವಿವರಗಳಿಗೆ ಬಾದಾಮಿ ಹೌಸ್‌ನಲ್ಲಿರುವ ಕೆಎಸ್‌ಟಿಡಿಸಿ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ದೂರವಾಣಿ ಸಂಖ್ಯೆ - 2275883, 2275689.

ಸೆಪ್ಟೆಂಬರ್‌ 27 ವಿಶ್ವ ಪ್ರವಾಸ ದಿನ. ಈ ಹಿನ್ನೆಲೆಯಲ್ಲಿ ರಾಜ್ಯಪ್ರವಾಸೋದ್ಯಮ ನಿಗಮವೂ ಒಂದೆರಡು ಹೊಸ ಪ್ರವಾಸದ ಪ್ರಕಟಣೆ ಹೊರಡಿಸಿದೆ. ಅಂದಹಾಗೆ ವಿಶ್ವ ಪ್ರವಾಸ ದಿನದಂದು ನಿಮ್ಮ ಪ್ರಯಾಣ ಎಲ್ಲಿಗೆ?

  • ಮುಖಪುಟ / ನೋಡು ಬಾ ನಮ್ಮೂರ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X