ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಟಿವಿಎಸ್‌’ನಿಂದ 110 ಸಿಸಿ ಫೋರ್‌ಸ್ಟ್ರೋಕ್‌ ಸ್ವದೇಶಿ ಬೈಕ್‌

By Staff
|
Google Oneindia Kannada News

ಬೆಂಗಳೂರು : ದ್ವಿ ಚಕ್ರ ವಾಹನಗಳ ತಯಾರಿಕೆಯಲ್ಲಿ ಪ್ರಖ್ಯಾತಿ ಗಳಿಸಿರುವ ಟಿವಿಎಸ್‌ ಸಂಸ್ಥೆ ಸ್ವದೇಶಿ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿರುವ 110 ಸಿಸಿ ಫೋರ್‌ಸ್ಟ್ರೋಕ್‌ ಮೋಟಾರ್‌ ಸೈಕಲ್‌ ಸದ್ಯದಲ್ಲಿಯೇ ರಸ್ತೆಗೆ ಬರಲಿದೆ.

ಟಿವಿಎಸ್‌ನ ಕಾರ್ಪೊರೇಟ್‌ ಕಮ್ಯುನಿಕೇಷನ್ಸ್‌ನ ಉಪಾಧ್ಯಕ್ಷ ಸೆಸಿಲ್‌ ಕ. ದಿವಾರ್ಸ್‌ ಸುದ್ದಿಗಾರರಿಗೆ ತಿಳಿಸಿರುವಂತೆ-

ಗುಣಮಟ್ಟ, ಇಂಧನ ಉಳಿತಾಯ ಹಾಗೂ ಸವಾರರಿಗೆ ಅನುಕೂಲವಾಗುವಂತೆ ರೂಪಿಸಲಾಗಿರುವ ಈ ಬೈಕ್‌ ಭಾರತೀಯ ರಸ್ತೆಗಳಿಗೆ ಹಾಗೂ ಮಾರುಕಟ್ಟೆಗೆ ತಕ್ಕಂತೆ ತಯಾರಿಸಲಾಗಿದೆ. ಹೊಸ ಮೋಟಾರ್‌ ಬೈಕ್‌ನ ಬೆಲೆ 40 ರಿಂದ 46 ಸಾವಿರ ರುಪಾಯಿ ವ್ಯಾಪ್ತಿಯಲ್ಲಿದೆ.

ಬಳಕೆದಾರರ ಹಿತವೇ ತಮ್ಮ ಸಂಸ್ಥೆಯ ಧ್ಯೇಯವೆಂದು ಬಣ್ಣಿಸಿದ ಸೆಸಿಲ್‌, ಮುಂದಿನ 6 ತಿಂಗಳಲ್ಲಿ ಸುಮಾರು 5 ಸಾವಿರ ಮೋಟಾರ್‌ ಬೈಕ್‌ಗಳನ್ನು ಮಾರುವ ಉದ್ದೇಶವನ್ನು ಟಿವಿಎಸ್‌ ಸಂಸ್ಥೆ ಹೊಂದಿದೆ ಎಂದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X