ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2ನೇ ಹಂತದ ಚುನಾವಣೆ : 49 ಪೌರ ಸಂಸ್ಥೆಗಳಿಗೆ ಭಾನುವಾರ ಮತದಾನ

By Staff
|
Google Oneindia Kannada News

ಬೆಂಗಳೂರು : ನಾಲ್ಕು ನಗರಸಭೆ ಹಾಗೂ ಒಂದು ಪರಸಭೆಯೂ ಸೇರಿದಂತೆ ರಾಜ್ಯದ 21 ಜಿಲ್ಲೆಗಳ ಒಟ್ಟು 49 ಪೌರ ಸ್ಥಳೀಯ ಸಂಸ್ಥೆಗಳಿಗೆ ಎರಡನೇ ಹಂತದ ಚುನಾವಣೆ ನಡೆಯುತ್ತಿದ್ದು, ಭಾನುವಾರ ಬೆಳಗ್ಗೆಯಿಂದ ಮತದಾನ ಆರಂಭವಾಗಲಿದೆ.

ರಾಜ್ಯದ ಒಟ್ಟು 1089 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಯಲಿದೆ. ಎಲ್ಲ ಮತಗಟ್ಟೆಗಳಿಗೂ ಅಗತ್ಯ ಸಾಮಗ್ರಿ, ಸಿಬ್ಬಂದಿಯನ್ನು ಕಳುಹಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ. ಬಹಿರಂಗ ಪ್ರಚಾರ ಶುಕ್ರವಾರವೇ ಕೊನೆಗೊಂಡಿತ್ತು. ಕಣದಲ್ಲಿ ಒಟ್ಟು 2,859 ಸ್ಪರ್ಧಿಗಳಿದ್ದಾರೆ.

ಚುನಾವಣೆಗಾಗಿ ಜಿಲ್ಲಾವಾರು ಮತಗಟ್ಟೆಗಳನ್ನು ನಿಯೋಜಿಸಲಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡಲು ವ್ಯಾಪಕ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ. ಮೀಸಲು ಪಡೆಯ 43 ತುಕಡಿಗಳು ಈ ಕಾರ್ಯಕ್ಕೆ ನಿಯೋಜಿತವಾಗಿದ್ದು, ಇವರಿಗೆ ಸ್ಥಳೀಯ ಪೊಲೀಸರು ನೆರವಾಗಲಿದ್ದಾರೆ. 1089 ಮತಗಟ್ಟೆಗಳ ಪೈಕಿ 296 ಮತಗಟ್ಟೆಗಳನ್ನು ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ.

ಮತಕ್ಕಾಗಿ ಚಿನ್ನದ ಮೂಗುತಿ : ಕೆಂಗೇರಿ ಪುರಸಭೆ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ಪಕ್ಷವೊಂದರ ಅಭ್ಯರ್ಥಿಯ ಪರ ಕಾರ್ಯಕರ್ತರು ಚಿನ್ನದ ಮೂಗುತಿಗಳನ್ನು ಹಂಚಿದ ಪ್ರಕರಣವೂ ನಡೆದಿದೆ. ಈ ಕ್ಷೇತ್ರದಲ್ಲಿ ಮೂಗುತಿ ಹಂಚುತ್ತಿದ್ದ ಕೃಷ್ಣ ಮತ್ತು ಚೆನ್ನಮ್ಮ ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ ಮೇ 3ರಂದು ರಾಜ್ಯದ 4 ಮಹಾನಗರ ಪಾಲಿಕೆ ಸೇರಿದಂತೆ 148 ಸ್ಥಳೀಯ ಪೌರಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಜಯಭೇರಿ ಭಾರಿಸಿತ್ತು. ಎರಡನೇ ಹಂತದ ಚುನಾವಣೆಯಲ್ಲೂ ಕಾಂಗ್ರೆಸ್‌ ನಿಚ್ಚಳ ಬಹುಮತ ಪಡೆಯುತ್ತದೆಯೇ ಎಂಬುದು ಜುಲೈ 9ರ ಸೋಮವಾರ ತಿಳಿಯಲಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X