ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೃಂಗೇರಿ ಸಿರಿಮನೆ ವಿದ್ಯುತ್‌ ಯೋಜನೆಗೆ ಪರವಾನಗಿ ವಿನಾಯಿತಿ

By Staff
|
Google Oneindia Kannada News

ಬೆಂಗಳೂರು : ಶೃಂಗೇರಿಯ ಸಿರಿಮನೆ ಪಿಸಿಐಓ ಜಲವಿದ್ಯುತ್‌ ಯೋಜನಾ ಅನುಷ್ಠಾನ ಸಮಿತಿಯ ನಾಲ್ಕು ಮೆಗಾ ವ್ಯಾಟ್‌ ಮೈಕ್ರೋ ಹೈಡಲ್‌ ಪ್ರಾಯೋಗಿಕ ಯೋಜನೆಗೆ ವಿದ್ಯುತ್‌ ವಿತರಣಾ ಪರವಾನಗಿಯಿಂದ ವಿನಾಯಿತಿ ನೀಡಲಾಗಿದೆ.

ಕರ್ನಾಟಕ ರಾಜ್ಯ ವಿದ್ಯುತ್‌ ನಿಯಂತ್ರಣ ಆಯೋಗವು ಈ ವಿನಾಯಿತಿ ನೀಡಿದೆ. ಇಂಡೋ ನಾರ್ವೆ ಪರಿಸರ ಯೋಜನೆಯ ಅಡಿಯಲ್ಲಿ ಹಾಗೂ ಅರಣ್ಯ ಇಲಾಖೆಯ ಮೇಲುಸ್ತುವಾರಿಯಲ್ಲಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಈ ವಿನೂತನ ಯೋಜನೆಯ ಶೇ. 40ರಷ್ಟು ಯೋಜನಾ ವೆಚ್ಚವನ್ನು ಗ್ರಾಹಕರೇ ಭರಿಸುತ್ತಿದ್ದಾರೆ.

ಈ ಪ್ರಾಯೋಗಿಕ ಯೋಜನೆಗೆ ಹಾಗೂ ಸಿರಿಮನೆ ಗ್ರಾಹಕರಿಗೆ ವಿದ್ಯುತ್‌ ಪೂರೈಸಲು ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ವಿದ್ಯುತ್‌ ನಿಯಂತ್ರಣ ಆಯೋಗ ತಿಳಿಸಿದೆ. 4.7 ಲಕ್ಷ ರುಪಾಯಿ ವೆಚ್ಚದಲ್ಲಿ ಈ ಪ್ರಾಯೋಗಿಕ ಯೋಜನೆ ಅನುಷ್ಠಾನಕ್ಕೆ ಬರಲಿದೆ.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X